ಕಾಂಗ್ರೆಸ್ ಸೋಲಿನಿಂದ ನಿರಾಶೆ ಬೇಡ;ಪಾಪಣ್ಣ

ಹಿರಿಯೂರು;

     ಮೊನ್ನೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿರುವ ಬಗ್ಗೆ ಯಾರೂ ನಿರಾಶೆ ಪಡಬೇಕಿಲ್ಲ. ಬದಲಾಗಿ ಅದೊಂದು ಪಾಠವೆಂದು ಭಾವಿಸಿ ಇಂದಿನಿಂದಲೇ ಪಕ್ಷ ಸಂಘಟನೆಯಲ್ಲಿ ಎಲ್ಲರೂ ಸಕ್ರೀಯರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಾಪಣ್ಣ ಹೇಳಿದ್ದಾರೆ

     ಹಿರಿಯೂರು ಪುರಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿರುವ ಅಭ್ಯರ್ಥಿಗಳ ಪರವಾಗಿ ಭಾನುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು

     ಕಾಂಗ್ರೆಸ್ ಪಕ್ಷಕ್ಕೆ ಸೋಲು ಹೊಸದೇನೂ ಅಲ್ಲ. ಹಿಂದೆಯೂ ಸಾಕಷ್ಟು ಭಾರಿ ಸೋತಿದ್ದೇವೆ. ಮತ್ತೆ ದೇಶದಲ್ಲಿ ಅಧಿಕಾರಕ್ಕೂ ಬಂದಿದ್ದೇವೆ. ಈ ಚುನಾವಣೆಯಲ್ಲಿನ ಸೋಲು ಶಾಶ್ವತವಲ್ಲ. ತಾತ್ಕಾಲಿಕ. ದೇಶದ ಜನರಲ್ಲಿ ಬಿಜೆಪಿಯ ನಾಯಕರು ಸುಳ್ಳು ಭರವಸೆಯನ್ನು ಹುಟ್ಟಿಸಿ, ಜಾತಿ, ಧರ್ಮದ ಹೆಸರಿನಲ್ಲಿ ಮರಳು ಮಾಡಿ ಗೆದ್ದಿದ್ದಾರೆ.ಸತ್ಯ ಜನರಿಗೆ ಅರಿವಾಗುತ್ತದೆ. ನಾವು ಮತ್ತೆ ದೇಶವನ್ನು ಆಳುತ್ತೇವೆ ಎನ್ನುವ ಭರವಸೆಯನ್ನು ಕಾರ್ಯಕರ್ತರು ಹೊಂದಬೇಕು ಎಂದರು

     ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‍ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ 380ರಿಂದ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದಿದ್ದೆ.125 ವರ್ಷ ಚರಿತ್ರೆ ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಇದೊಂದು ಸಣ್ಣ ಪ್ರಮಾಣದ ಹಿನ್ನಡೆ ಅಷ್ಟೇ ಎಂದು ಪಾಪಣ್ಣ ಹೇಳಿದರು
ಹಿರಿಯೂರು ಪುರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲಿ ನಮ್ಮ ಅಸ್ತಿತ್ವ ಮತ್ತು ಶಕ್ತಿ ಪ್ರದರ್ಶನವಾಗಬೇಕು. ಡಿ.ಸುಧಾಕರ್ ಅವರ ನಾಯಕತ್ವಕ್ಕೆ ಮತ್ತೆ ಬೆಲೆ ತಂದುಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಕರೆ ನೀಡಿದರು

     ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವರಾದ ಡಿ.ಸುಧಾಕರ್ ಅವರು ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಬಡವರು, ದಲಿತರು, ಹಿಂದುಳಿದವರು ಹಾಗೂ ಕೂಲಿ ಕಾರ್ಮಿಕರಿಗೆ ಸಕಾರದ ವಿವಿಧ ಯೋಜನೆಗಳ ಸೌಲಬ್ಯಗಳನ್ನು ತಾರತಮ್ಯವಿಲ್ಲದೆ ಕಲ್ಪಸಿಕೊಟ್ಟಿದ್ದಾರೆ. ಅವರ ಅವಧಿಯಲ್ಲಿ ಆಗಿರುವ ಅನೇಕ ಅಭಿವೃದ್ದಿ ಕೆಲಸಗಳನ್ನು ಜನರು ಮರೆತಿಲ್ಲ. ಹಿರಿಯೂರಿನ ಸಮಗ್ರ ಅಭಿವೃದ್ದಿಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ಕೊಡಬೇಕು ಎಂದು ಅವರು ಮನವಿ ಮಾಡಿದರು

      ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಡಿ.ಸುಧಾಕರ್, ಹಿರಿಯೂರು ಪಟ್ಟಣದಲ್ಲಿ ನಾನು ಶಾಸಕನಾಗಿ, ಮಂತ್ರಿಯಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಅಭಿವೃದ್ದಿಯ ವಿಚಾರದಲ್ಲಿ ಯಾವತ್ತಿಗೂ ರಾಜಕೀಯ ಮಾಡಿಲ್ಲ. ಎಲ್ಲಾ ಜಾತಿ, ಸಮುದಾಯಗಳನ್ನು ಗೌರವದಿಂದ ನಡೆಸಿಕೊಂಡಿದ್ದೆನೆ. ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದು ವಿನಂತಿಸಿದರು
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಅಜ್ಜಪ್ಪ, 5ನೇ ವಾರ್ಡಿನ ಅಭ್ಯರ್ಥಿ ಗುಂಡೇಶ್, ಮುಖಂಡರಾದ ಕಂದಿಕೆರೆ ಸುರೇಶ್‍ಬಾಬು, ರಾಕ್ ಮಂಜಣ್ಣ ಇನ್ನಿತರರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link