ಚಿತ್ರದುರ್ಗ
ನಾವು ಎಲ್ಲರನ್ನು ಒಂದೇ ರೀತಿ ನೋಡುವ ಜನರಲ್ಲಿ ಕೆಲವರನ್ನು ವಿಶಿಷ್ಟ ರೀತಿಯಲ್ಲಿ ನೋಡುತ್ತೇವೆ. ಮೌಡ್ಯದಲ್ಲಿ ಮನುಷ್ಯನನ್ನು ಮುಳುಗಿಸುವುದು ಮಹಾ ಅಪರಾದ ಎಂದು ಶ್ರೀನಿವಾಸಪುರ ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಅಭಿಪ್ರಾಯಪಟ್ಟರು.ಮುರುಘಾಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಗಾಂಧೀವಾದದ ಪ್ರಸ್ತುತತೆ ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ತಮ್ಮಗಳ ನಿಲುವುಗಳು ಸ್ಪಷ್ಟ, ತಾವು ಮಾನವತಾವಾದಿಗಳಾಗಿ ಬಂದಿರುವುದು ಪ್ರಸ್ತುತ. ಗಾಂಧೀವಾದ ಎಷ್ಟು ಪ್ರಸ್ತುತ ಎನ್ನುವುದು ಮುಖ್ಯ. ಮನಸ್ಥಿತಿ ಹಲವು ವರ್ಷಗಳ ಇತಿಹಾಸ. ಜಾತಿ ವ್ಯವಸ್ಥೆ ಅಲ್ಲಿಂದ ಪ್ರಾರಂಭವಾಗುತ್ತದೆ. ಎಲ್ಲ ಸಮಾಜವು ಏಕರೀತಿಯಲ್ಲಿರಬೇಕು. ಅಲ್ಲಿ-ಇಲ್ಲಿ ಪದರುಗಳನ್ನು ಕಟ್ಟುತ್ತಾರೆ. ಕೆಲವರನ್ನು ಮನುಷ್ಯ ಜನಾಂಗಕ್ಕೆ ಸೇರಿಸುವುದಿಲ್ಲ. ಜಾಣರು ವರ್ಣಸಂಕುಲ ಸೃಷ್ಟಿ ಮಾಡುತ್ತಾರೆ.
ಅಂತರ್‍ಜಾತಿ ವಿವಾಹವನ್ನು ಮಾಡುವಲ್ಲಿ ಅವರು ಗೋಡೆ ಕಟ್ಟುತ್ತಾರೆ ಎಂದರು ನಮಗೆ ಸರಳವಾಗಿ ಅರ್ಥವಾಗುವವರು ಬಸವಣ್ಣನವರು. ಬಸವಣ್ಣನವರು ಮನುಸೃತಿಯ ತದ್ವಿರುದ್ದವಾದ ನಿಯಮಗಳನ್ನು ತಾಳುತ್ತಾರೆ. ಬಸವಣ್ಣನವರು ಜಾತಿಗಳ ಬಗ್ಗೆ ಸ್ತ್ರೀಸಬಲಿಕರಣದ ಬಗ್ಗೆ ಮಾತನಾಡುತ್ತಾರೆ. ಪೈಗಂಬರರನ್ನು ಜಾತಿಯ ಬಗ್ಗೆ ಮಾತನಾಡಿದಾಗ ಓಡಿಸುತ್ತಾರೆ. ಪೈಗಂಬರ್ ನಾನು ದೇವರೆಂದು ಹೇಳಲಿಲ್ಲ, ಬದುಕಿನ ಕ್ರಮದ ಬಗ್ಗೆ ಹೇಳಿದರು ಎಂದರು
ಪೈಗಂಬರ್, ಏಸು, ಬಸವಣ್ಣನವರ ತರುವಾಯ ಗಾಂಧೀಜೀ ಬರುತ್ತಾರೆ. ಗಾಂಧೀ ಒಬ್ಬ ಮನೋವಿಜ್ಞಾನಿ. ಅರ್ಥಶಾಸ್ತ್ರದ ಪರಿಚಯವಿದ್ದ ವ್ಯಕ್ತಿ. ಮಾನವೀಯತೆ ಮತ್ತು ಸಮಾನತೆಯನ್ನು ಗೌರವಿಸುತ್ತಿದ್ದರು. ಅಸ್ಪೃಶ್ಯತೆಯನ್ನು ಘೋರವಾದದು ಎಂದು ಕೊಂಡಿದ್ದರು. ಅಂಬೇಡ್ಕರ್ ಅವರು ಎಂದು ನಮ್ಮ ಸ್ವಾಭಿಮಾನವನ್ನು ಬಿಟ್ಟು ಕೊಡಲಿಲ್ಲ. ಗಾಂಧೀಜಿ ಮತ್ತು ಅಂಬೇಡ್ಕರರ ಆಲೋಚನೆಗಳು ಒಂದೇ ಆಗಿದ್ದವು. ಧರ್ಮದ ಹೆಸರಿನಲ್ಲಿ ಆಗುತ್ತಿರುವ ಶೋಷಣೆಯ ಬಗ್ಗೆ ಅವರು ಹೇಳಿದರು. ಇಂದು ಗಾಂಧೀ ತತ್ತ್ವ ಗಾಳಿಗೆ ಹೋಗುತ್ತಿದೆ.
ಆದರೆ ಗಾಂಧೀ ಪ್ರತಿಮೆಗಳು ಜಾಸ್ತಿಯಾಗುತ್ತವೆ ಎಂದು ನುಡಿದರು;
ಮಂತ್ರ ಹೆಚ್ಚಾದಂತೆಲ್ಲ ಉಗುಳು ಜಾಸ್ತಿಯಾಗುತ್ತದೆ. ಗಾಂಧೀಯವರಿಗೆ ರಾಮನ ಬಗ್ಗೆ ವಿಶೇಷ ಭಕ್ತಿಯಿತ್ತು. ಗಾಂಧೀ ನಂತರ ಗಾಂಧೀ ಟೋಪಿಗಳು ಹೆಚ್ಚಾದವು . ಆದರೆ ಗಾಂಧೀ ತತ್ತ್ವವನ್ನು ಅಳವಡಿಸಿಕೊಳ್ಳಲಿಲ್ಲ. ಆತ್ಮವಂಚನೆಗೆ ಮತ್ತೊಂದು ಹೆಸರು ಪೌರೋಹಿತ ತತ್ತ್ವ. ಭಾಷೆಗೆ ಇರುವಷ್ಟು ಶಕ್ತಿ ಯಾವುದಕ್ಕೂ ಇಲ್ಲ. ಬಸವಣ್ಣನವರ ಭಾಷೆ ಐಸ್‍ಗಿಂತಲು ತಣ್ಣಗಿರುತ್ತದೆ ಎಂದು ಹೇಳಿದರು.
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಬಿ.ಪಿ.ವೀರಭದ್ರಪ್ಪ ಮಾತನಾಡಿ, ಕಸ್ತೂರಿ ರಂಗನ್‍ರವರ ಅಧ್ಯಕ್ಷತೆಯಲ್ಲಿ 2019ರಲ್ಲಿ ನಮಗೆ ಹೊಸ ಶಿಕ್ಷಣ ನೀತಿ ನಮ್ಮ ಕೈಗೆ ಬಂದಿದೆ. ಶಿಕ್ಷಣ ನೀತಿಯಲ್ಲಿ ಹೊಸ ಕ್ರಾಂತಿಯನ್ನು ಮಾಡಿದ್ದಾರೆ. ಪಾಶ್ವಾತ್ಯರು ನೂರಕ್ಕೆ ನೂರರಷ್ಟು ಶಿಕ್ಷಣ ಪಡೆಯುತ್ತಾರೆ. ನಮ್ಮ ದೇಶದಲ್ಲಿ 14.8%ರಷ್ಟು ಶಿಕ್ಷಣವನ್ನು ಪಡೆಯುತ್ತಾರೆ. ಶಿಕ್ಷಣ ಸಂಸ್ಥೆಯಲ್ಲಿ ಆಳವಾದ ಅಧ್ಯಯನ ಮಾಡಬೇಕಿದೆ. ಇಂದಿನ ಅಧ್ಯಯನಗಳು ಕಠಿಣವಾಗುತ್ತಿವೆ ಎಂದರು
ನಮ್ಮಲ್ಲು ಸಂಯೋಜಿತ ಶಿಕ್ಷಣವಾಗಬೇಕು. ಕರ್ನಾಟಕದಲ್ಲಿ 64 ವಿಶ್ವವಿದ್ಯಾನಿಲಯಗಳಿವೆ. ಆದರೆ ಇನ್ನು 60 ವಿಶ್ವವಿದ್ಯಾನಿಲಯಗಳು ಬೇಕಿದೆ. ಕಸ್ತೂರಿರಂಗನ್ ಅವರ ಅಭಿಪ್ರಾಯದಲ್ಲಿ ಎಲ್ಲಾ ವಿಶ್ವವಿದ್ಯಾನಿಲಯಗಳ ಕೋಸ್ ್ಗಳು ಸಂಯೋಜಿತವಾಗಿ ಬರಬೇಕು ಎಂದಿದ್ದಾರೆ. ಶಿಕ್ಷಣ ಸಮಾಜದ ಗತಿಯನ್ನು ಬದಲಾಯಿಸುತ್ತದೆ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ವಾಯತ್ತತೆ ಕೊಡಬೇಕು. 2030ರ ವೇಳೆಗೆ ಎಲ್ಲಾ ಶಿಕ್ಷಣ ಕ್ಷೇತ್ರಗಳು ಒಂದಾಗಬೇಕು ಎಂಬುದು ಕಸ್ತೂರಿರಂಗನ್ ಅವರ ಅಭಿಲಾಷೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ, ಚಿತ್ರದುರ್ಗದ ನಿವೃತ್ತ ಪ್ರಾಂಶುಪಾಲರಾದ ಜೆ.ಯಾದವರೆಡ್ಡಿ. ಶ್ರೀಸಾಮಾನ್ಯನನ್ನು ಈ ಮಠ ಗುರುತಿಸುತ್ತದೆ. ಸೈದ್ದಾಂತಿಕ ವಿಚಾರಕ್ಕೆ ಬರುವುದಾದರೆ ಆ ಕೆಲಸವನ್ನು ಸಾಧಿಸುವವರೆಗೂ ಬಿಡುವುದಿಲ್ಲ. ಬಸವ ತತ್ತ್ವದ ಬಗ್ಗೆ ಸೈದ್ದಾಂತಿಕ ಬದ್ದತೆಯನ್ನು ಹೊಂದಿದ ಎಲ್ಲಾ ಸ್ವಾಮೀಜಿಗಳಿಗಿಂತ ಡಾ.ಶಿವಮೂರ್ತಿ ಮುರುಘಾಶರಣರು ಉನ್ನತ ಮಟ್ಟದಲ್ಲಿ ಇದ್ದಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಮತಿ.ಡಾ.ರೇಖಾ ನರಸಿಂಹಮೂರ್ತಿ, ಶ್ರೀಗಳಿಂದ ಪ್ರಶಸ್ತಿ ಪಡೆದ ನಾನೇ ಪುಣ್ಯವಂತೆ. ಮಠ ಮತ್ತು ಕೋಟೆಯ ಬಗ್ಗೆ ನನಗೆ ಅಪಾರವಾದ ಅಭಿಮಾನ. ಶ್ರೀಗಳನ್ನು ಅಭಿನವ ಬಸವಣ್ಣ ಎಂಬ ಹೆಸರಿನಿಂದ ಕರೆಯುತ್ತಾರೆ. ವಿಭಿನ್ನ ಸಂಸ್ಕೃತಿಯನ್ನು ಒಳಗೊಂಡ ನಮ್ಮ ದೇಶದಲ್ಲಿ ಜಾತಿಬೇದವಿಲ್ಲದೆ ಎಲ್ಲರಿಗೂ ಸಮಾನ ವೇದಿಕೆ ನೀಡಿ, ಭೇದ-ಭಾವಗಳನ್ನು ತೊರೆದು ವಿವಿಧತೆಯಲ್ಲಿ ಏಕತೆಯನ್ನು ಮೂಢಿಸುವ ಕೆಲಸವನ್ನು ಶ್ರೀಮಠವು ಮಾಡುತ್ತ ಬಂದಿದೆ ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರವನ್ನು ಡಾ.ಶಿವಮೂರ್ತಿ ಮುರುಘಾಶರಣರು ರಕ್ತದಾನಿಗಳಿಗೆ ಹಣ್ಣಿನ ಜ್ಯೂಸ್ ನೀಡುವ ಮೂಲಕ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಹರಗುರುಚರಮೂರ್ತಿಗಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀನಿರಂಜನಾನಂದಪುರಿ ಮಹಾಸ್ವಾಮಿಗಳು, ಹರಗುರುಚರ ಮೂರ್ತಿಗಳು, ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯಧ್ಯಕರಾದ ಹನುಮಲಿ ಷಣ್ಮುಖಪ್ಪ, ಬೆಂಗಳೂರಿನ ವರ್ತಕರಾದ ಗುರುಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಪ್ರಾರ್ಥಿಸಿ, ಕೆ.ಎಂ.ವೀರೇಶ್ ಸ್ವಾಗತಿಸಿ, ಉಮಾಶಂಕರ್ ನಿರೂಪಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
