ಚಳ್ಳಕೆರೆ
ಯಾವುದೇ ಸಂಸ್ಥೆ ಉತ್ತಮವಾಗಿ ಅಭಿವೃದ್ಧಿ ಪಡೆಯಬೇಕಾದಲ್ಲಿ ಅದಕ್ಕೆ ದೈವ ಪ್ರೇರಣೆ ಹಾಗೂ ಅತ್ಯಂತ ಪರಿಶ್ರಮ ಪ್ರಮುಖ ಕಾರಣವಾಗುತ್ತವೆ. ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ಶ್ರದ್ದೆ ಇದ್ದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ ಇಲ್ಲಿನ ವಾಸವಿ ವನಿತಾ ಮಂಡಳಿ ಈ ನಿಟ್ಟಿನಲ್ಲಿ ಎಲ್ಲಾ ಉತ್ತಮ ಅಂಶಗಳನ್ನು ಮೈಗೂಡಿಸಿಕೊಂಡು ಸಮುದಾಯದ ಏಳಿಗೆಗೆ ಶ್ರಮಿಸುತ್ತಿದೆ ಎಂದು ಶಾರದಾಶ್ರಮದ ಮಾತಾಜಿ ತ್ಯಾಗಮಯಿ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಹಾಗೂ ವನಿತಾ ಮಂಡಳಿಯ 5ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಗರದ ಆರ್ಯವೈಶ್ಯ ಸಂಘಟನೆಗಳು ಮತ್ತು ಅಜ್ಜಂಪುರದ ಸುಬ್ರಮಣ್ಯ ಶ್ರೇಷ್ಠಿ ರುಕ್ಮೀಣಮ್ಮ ಪ್ರತಿಷ್ಠಾನದಡಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಆಧುನಿಕತೆಯನ್ನೇ ರೂಢಿಸಿಕೊಳ್ಳುವಲ್ಲಿ ಜಾಗೃತನಾಗಿದ್ಧಾನೆ. ಆದರೆ, ಇಂದು ವಿಭಿನ್ನವಾಗಿ ವಾಸವಿ ವನಿತಾ ಮಂಡಳಿ ಹಾಗೂ ಆರ್ಯವೈಶ್ಯ ಸಂಘಟನೆಗಳು ಶಾಲಾ ವಿದ್ಯಾರ್ಥಿಗಳ ಜ್ಞಾನದ ಮಟ್ಟವನ್ನು ಹೆಚ್ಚಿಸುವ ರಸಪ್ರಶ್ನೆ ಸ್ಪರ್ಧೆ ಪ್ರತಿಯೊಬ್ಬರ ಬದುಕಿಗೂ ದೈವದ ಶಕ್ತಿಯನ್ನು ತುಂಬುವ ಭಗವದ್ಗೀತೆ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಿದ್ದು ಸಂತಸ ಸಂಗತಿ. ನಾವು ಸದಾಕಾಲ ನಮ್ಮ ಸಂಸ್ಕತಿ ಮತ್ತು ಸಂಸ್ಕಾರವನ್ನು ರಕ್ಷಿಸಿಕೊಳ್ಳುವತ್ತ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷೆ ಸಂಧ್ಯಾವೆಂಕಟಚಲಂ ವಹಿಸಿದ್ದರು. ಉಪಾಧ್ಯಕ್ಷೆ ನಿರ್ಮಲ, ಕಾರ್ಯದರ್ಶಿ ಆಶಾ, ಉಪ ಕಾರ್ಯದರ್ಶಿ ಲಕ್ಷ್ಮಿ, ಕಲ್ಪನಾ, ಖಜಾಂಚಿ ಅನಿತಾ, ವಾಸವಿ, ಪುಪ್ಪಾ, ಶ್ರೀದೇವಿ, ನಿರ್ದೇಶಕರುಗಳಾದ ಅರುಣ, ಮೀರಾ, ಲಕ್ಷ್ಮಿ, ಗಾಯಿತ್ರಿ, ರಶ್ಮಿ, ಪದ್ಮಜ, ಪ್ರಮೋದ, ನಳಿನಾ, ಕವಿತಾ, ಅನುರಾಧ, ಲತಾ, ಶಾರದ, ಅಜ್ಜಂಪುರದ ಸತ್ಯನಾರಾಯಣಶೆಟ್ಟಿ, ಸರೋಜಾ ಗೋವಿಂದ ರಾಜು , ಶಾರದಗೋಪಾಲ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
