ತಿಪಟೂರು
ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತ ದೇಶಕ್ಕಾಗಿ ಎಲ್ಲರಿಗೂ ಸಮಾನವಾದ ಸಂವಿಧಾನ ರಚಿಸಿರುವ ಡಾ.ಬಿ.ಆರ್.ಅಂಬೇಡ್ಕರ್‍ರವರ ಸಾಧನೆ ಅಸಾಧಾರಣವಾದದ್ದು ಎಂದು ಎಪಿಎಂಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‍ರವರ 63ನೇ ಪರಿನಿರ್ವಾಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಒಂದು ದೇಶ, ಒಂದು ಸಂವಿಧಾನದ ಕಾನೂನು ಎಂದು ಸ್ವತಂತ್ರ, ಸಮಾನತೆ, ಬ್ರಾತೃತ್ವದ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾವಿರಾರು ದಿನಗಳು ಎಲ್ಲಾ ದೇಶಗಳ ಸಂವಿಧಾನಗಳನ್ನು ಅಭ್ಯಸಿಸಿ ನಮ್ಮ ದೇಶಕ್ಕೆ ಒಪ್ಪುವಂತಹ ಸಂವಿಧಾನ ದೊರಕಿಸಿ ಕೊಟ್ಟಿದ್ದು ಅಷ್ಟು ಸುಲಭವಾದ ಕೆಲಸವಲ್ಲ. ಇಂತಹ ಮಹಾನ್ ಚೇತನ ಕಳೆದುಕೊಂಡ ನಮಗೆ ತುಂಬಲಾರದ ನಷ್ಟ ಈ ದಿನವನ್ನು ದೀನದಲಿತರ ಶೋಷಣೆ ಗೊಳಗಾದವರ ಕರಾಳ ದಿನವೆಂದರು ತಪ್ಪಾಗಲಾರದು ಎಂದರು.
ಈ ಸಂವಿಧಾನದಿಂದ ಕೇವಲ ದಲಿತರಿಗೆ ಮಾತ್ರ ಅನುಕೂಲವಾಗಿರುವ ರೀತಿಯಲ್ಲಿ ಕೆಲವರು ಅಪಪ್ರಚಾರ ಮಾಡಿದ್ದಾರೆ ಇಂದು ಎಲ್ಲಾ ವರ್ಗಗಳಿಂದ ಹಿಡಿದು ಮಹಿಳೆಯರು ಸೇರಿದಂತೆ ಇದರ ಸದುಪಯೋಗ ಪಡೆಯುತ್ತಿದ್ದಾರೆ. ಕೆಲ ರಾಜಕಾರಣಿಗಳು ತಮ್ಮ ಅಧಿಕಾರವನ್ನು ತಲೆಗೇರಿಸಿಕೊಂಡು ಇಂತಹ ಸಂವಿಧಾನದ ತಿದ್ದುಪಡಿಗೆ ಹೊರಟಿರುವುದು ಖಂಡನೀಯ. ಯಾವುದೇ ಧರ್ಮಗ್ರಂಥಗಳು ಕೊಡದ ಸ್ವತಂತ್ರವನ್ನು ನಮ್ಮ ಸಂವಿಧಾನ ಕೊಟ್ಟಿರುವುದು ನಮ್ಮೆಲ್ಲರ ಅದೃಷ್ಟವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ತಹಸೀಲ್ದಾರ್ ಆರತಿಯವರು ಇಂತಹ ಮಹಾನ್ ಚೇತನರ ಬಗ್ಗೆ ಮಾತನಾಡದೆ ಇದ್ದದ್ದು ದುಃಖಕರ ಸಂಗತಿ.ಕಾರ್ಯಕ್ರಮದಲ್ಲಿ ದಲಿತ ಸಂಘಟನೆಯ ಪ್ರಮುಖರು, ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ