ಹಾಲಿ ಗ್ರಾಪಂ ಸದಸ್ಯರನ್ನು ಮುಂದುವರೆಸಿ : ಬೆಮೆಲ್ ಕಾಂತರಾಜು

ತುರುವೇಕೆರೆ:

      ಗ್ರಾಮ ಪಂಚಾಯ್ತಿ ಹಾಲಿ ಸದಸ್ಯರನ್ನು ಸರ್ಕಾರ 6 ತಿಂಗಳು ಮುಂದುವರೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಒತ್ತಾಯಿಸಿದ್ದಾರೆ.

       ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ಗ್ರಾಮ ಪಂಚಾಯ್ತಿ ಸದಸ್ಯರ ಅವದಿ ಈ ತಿಂಗಳಲ್ಲಿ ಕೊನೆಗೊಳ್ಳುತ್ತಿದ್ದು. ಕೋವಿಡ್ ರೋಗ ಹಿನ್ನಲೇ ಚುನಾವಣೆ ಮುಂದೂಡಲು ತಿರ್ಮಾನಿಸಿದ್ದು. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮ ಕಾರ್ಯಕರ್ತರನ್ನು ನಾಮಿನಿ ಮಾಡಲು ಹೊರಟಿರುವ ಕ್ರಮವನ್ನು ವಿರೋದಿಸುತ್ತೇವೆ. ಗ್ರಾಮ ಪಂಚಾಯ್ತಿಗೆ ಅಡಳಿತಾದಿಕಾರಿಗಳನ್ನು ನೇಮಕ ಮಾಡಿದರೆ ಆಡಳಿತ ಪಾರದರ್ಶಕವಾಗಿ ಮಾಡಲು ಸಾದ್ಯವಾಗಲ್ಲ.

       ಅಧಿಕಾರಿಗಳಿಗೆ ತಮ್ಮ ಇಲಾಖೆಗಳ ಸಾಕಷ್ಟು ಕೆಲಸಗಳಿದ್ದು ಗ್ರಾಮ ಪಂಚಾಯ್ತಿಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಜಾರಿ ಮಾಡಲು ಸಾದ್ಯವಾಗದೇ ಅರ್ಹ ಪಲಾನುಭವಿಗಳಿಗೆ ಸವಲತ್ತುಗಳು ಸಮರ್ಪಕವಾಗಿ ಲಭಿಸುವುದಿಲ್ಲ. ಅದ್ದರಿಂದ ಪಂಚಾಯ್ತಿ ರಾಜ್ ಕಾಯಿದೆ 1993ರ ಅಡಿಯಲ್ಲಿ 6 ತಿಂಗಳ ಕಾಲ ಇರುವ ಸದಸ್ಯರನ್ನು ಮುಂದುವರೆಸಬಹುದಾಗಿದೆ. ಈ ಸಂಬಂದ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜ್ಯ ಚುನಾವಣಾ ಆಯೋಗ, ಗ್ರಾಮೀಣಾಭಿವೃದ್ದಿ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.

      ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರ ಆದೇಶದಂತೆ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯ ವಿಧಾನ ಪರಿಷತ್ ಜೆಡಿಎಸ್ ಸದಸ್ಯನಾಗಿದ್ದು ನಮ್ಮ ಪಕ್ಷದ ತಾಲೂಕು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕೊವಿಡ್ ಸಂಕಷ್ಟ ಸಮಯದಲ್ಲಿ ಬಡ ಜನರಿಗೆ ಸಹಾಯ ಮಾಡುವಂತೆ ಕೋರಿದ್ದರು. ಈ ಹಿನ್ನಲೆ ನನ್ನ ಕೈಲಾದ ಸಹಾಯ ಮಾಡಲು ಮುಂದಾಗಿದ್ದೇನೆ. ಇಂತಹ ಸೇವೆಯನ್ನು ಕೆಲವರು ರಾಜಕಾರಣದ ಬಣ್ಣ ಹಚ್ಚಿ ಮಾತನಾಡುತ್ತಿರುವುದು ಸರಿಯಲ್ಲ. ವಿದಾನಸಭಾ ಚುನಾವಣೆಯ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತಿರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

      ಗೋಷ್ಟಿಯಲ್ಲಿ ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರಮೇಶ್‍ಗೌಡ, ಗೋಣಿತುಮಕೂರು ಲಕ್ಷ್ಮೀಕಾಂತ್, ಪಟ್ಟಣ ಪಂಚಾಯ್ತಿ ಸದಸ್ಯ ನದೀಂ, ಮಾಜಿ ಸದಸ್ಯ ಶಶಿಶೇಖರ್, ನಟರಾಜು, ಜಾಪರ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link