ವಾಂತಿ-ಬೇಧಿ ಪ್ರಕರಣ : ಚಿನ್ನಪ್ಪನಹಳ್ಳಿ ಗ್ರಾಮಕ್ಕೆ ಶಾಸಕರ ಭೇಟಿ

ಶಿರಾ:

     ಶನಿವಾರ ರಾತ್ರಿ ದೇವರ ಪ್ರಸಾದವನ್ನು ತಿಂದ ಸುಮಾರು 150ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಅಸ್ವಸ್ಥರಾಗಿ ವಾಂತಿ-ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಘಟನೆ ಭಾನುವಾರ ನಡೆದಿದ್ದು ಸದರಿ ಘಟನೆಗೆ ಸಂಬಂಧಪಟ್ಟಂತೆ ಶಾಸಕ ಹಾಗೂ ರಾಜ್ಯರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ಚಿನ್ನಪ್ಪನಹಳ್ಳಿ ಗ್ರಾಮಕ್ಕೆ ಸೋಮವಾರ ಬೆಳಿಗ್ಗೆ ಭೇಟಿ ನೀಡಿದರು.

      ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಏ:27ರ ಶನಿವಾರ ಸಂಜೆ ಇದೇ ಗ್ರಾಮದ ಮರಿಯಣ್ಣ ಎಂಬುವರು ದೇವರಿಗೆ ಪೂಜೆ ಮಾಡಿಸಿ ಎಲ್ಲರಿಗೂ ಅನ್ನ, ಸಾಂಬರ್ ಹಾಗೂ ಸಿಹಿ ಪದಾರ್ಥದ ಊಟವನ್ನು ಹಾಕಿಸಿದ್ದರು.

       ಭಾನುವಾರ ಮಧ್ಯಾನ್ಹ ಶನಿವಾರ ಊಟಮಾಡಿದ್ದ ಮಾಡಿದ್ದ ಕೆಲವು ಮಂದಿ ಹೊಟ್ಟೆ ನೋವು, ವಾಂತಿ, ಬೇಧಿ ಎಂದು ಸಮೀಪದ ಕಳ್ಳಂಬೆಳ್ಳ ಆಸ್ಪತ್ರೆ, ಶಿರಾ ಹಾಗೂ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಾರಂಭಿಸಿದ್ದರು. ಸದರಿ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿತ್ತಲ್ಲದೆ. ವೈದ್ಯರ ಹಾಗೂ ಆರಕ್ಷಕ ಇಲಾಖೆಯ ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಯಾರ ಜೀವಕ್ಕೂ ಹಾನಿಯಾಗಿಲ್ಲ. ವಾಂತಿ-ಬೇಧಿ ಪ್ರಕರಣ ಹತೋಟಿಗೆ ಬಂದಿದೆ ಎನ್ನಲಾಗಿದೆ.

      ಆಹಾರ ಸೇವಿಸಿದ್ದ ಸುಮಾರು 150 ಮಂದಿ ಗ್ರಾಮಸ್ಥರು ಶಿರಾ ಆಸ್ಪ್ತರೆಯಲ್ಲಿ ಭಾನುವಾರ ರಾತ್ರಿ ಚಿಕಿತ್ಸೆ ಪಡೆದಿದ್ದು ಸೋಮವಾರ ಆಸ್ಪತ್ರೆಯಲ್ಲಿದ್ದ ಮೂರು ಮಮದಿ ಗ್ರಾಮಸ್ಥರಿಗೂ ಸೂಕ್ತ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ.

        ಚಿನ್ನಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಬಿ.ಸತ್ಯನಾರಾಯಣ್ ಘಟನೆಯ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಸ್ಥಳೀಯ ಗ್ರಾ.ಪಂ. ಅಧಿಕಾರಿಗಳಿಗೆ ಗ್ರಾಮದ ಕುಡಿಯುವ ನೀರಿನ ಸ್ವಚ್ಚತೆಯ ಜೊತೆಗೆ ದೇವರ ಪ್ರಸಾದ ತಯಾರಿಸುವಾಗ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ