ಶಿರಾ:
ಇತಿಹಾಸದಿಂದಲೂ ಪೂರ್ವಜರು ನಡೆಸಿಕೊಂಡು ಬರುತ್ತಿದ್ದ ಅದೆಷ್ಟೋ ಆಚರಣೆಗಳು ಇಂದು ಕಣ್ಮರೆಯಾದ ಪರಿಣಾಮ ನಮ್ಮ ಸಾಂಸ್ಕೃತಿಕ ಪರಂಪರೆಯು ವಿನಾಶದತ್ತ ಸಾಗಿದೆ ಎಂದು ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಗುರು ರೇವಣ ಸಿದ್ದೇಶ್ವಸ್ವಾಮಿ ಕಲ್ಯಾಣ ಮಟಪದಲ್ಲಿ ಶ್ರಾವಣ ಭಿಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಅವರು ಮಾತನಾಡಿದರು.
ಗುರುಗಳು ಭಿಕ್ಷೆಗೆ ಬರುವುದು ಅನಾದಿ ಕಾಲದಿಂದಲೂ ನಡೆದು ಬಮದ ಸಂಪ್ರದಾಯವೇ ಆಗಿದೆ. ಮಠಾಧೀಶರು ಭಿಕ್ಷೆ ಎತ್ತುವ ಜೋಳಿಗೆ ಎಂದಿಗೂ ಕೂಡಾ ಖಾಲಿಯಾಗಬಾರದು. ಅದರಲ್ಲೂ ನಮ್ಮ ಕುರುಬ ಸಂಪ್ರದಾಯದಂತೆ ಶ್ರಾವಣ ಭಿಕ್ಷೆ ಅತ್ಯಂತ ವಿಶಿಷ್ಟವೂ ಆಗಿದೆ. ಭಕ್ತರಿಂದ ಶ್ರಾವಣದಲ್ಲಿ ಸಂಗ್ರಹಿಸುವ ದವಸ, ದಾನ್ಯಗಳನ್ನು ಸಂಗ್ರಹಿಸಿ ಸಾಮೂಹಿಕವಾಗಿ ಅನ್ನ ಸಂತರ್ಪಣೆ ನಡೆಸುವುದರಿಂದ ಲೋಕಕ್ಕೂ ಒಳ್ಳೆಯದಾಗಲಿದೆ ಎಂಬ ಸದ್ಭಾವನೆಯಿಂದ ಪ್ರತೀ ವರ್ಷವೂ ಶ್ರಾವಣ ಭಿಕ್ಷಾ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶ್ರೀ ಬಿಂದುಶೇಖರ ಒಡೆಯರ್‍ಸ್ವಾಮೀಜಿ ಮಾತನಾಡಿ ಶ್ರಾವಣ ಭಿಕ್ಷೆಯಂತಹ ಮಾನವ ಸಂಬಂಧದ ಆಚರಣೆಗಳನ್ನು ಜೀವಂತವಾಗಿ ಉಳಿಸುವ ಕೆಲಸವನ್ನು ಶ್ರೀಗಳು ಮಾಡುತ್ತಿರುವುದು ಶ್ಲಾಘನಾರ್ಹ ಎಂದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಅತ್ಯಂತ ಚಿಕ್ಕದಾಗಿದ್ದ ಶ್ರೀ ಹೊಸದುರ್ಗ ಮಠ ಇಂದು ಬೃಹದಾಕಾರ ವಾಗಿ ಬೆಳೆದು ಭಕ್ತರ ಅಂತರಾಳ ಗೆಲ್ಲಲು ಶ್ರಾಗಳ ಶ್ರಮ ನಿಜಕ್ಕೂ ಶ್ಲಾಘನಾರ್ಹ. ಶ್ರೀಮಠದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಿಬೇಕಿದೆ ಎಂದರು.
ಸಮಾಜದ ಮುಖಂಡರಾದ ಬಿ.ಜೆ.ಕರಿಯಪ್ಪ, ಕನಕಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಮಂಜುನಾಥ್, ಡಾ.ಮಂಜುನಾಥ್, ಆರ್.ಲಕ್ಷ್ಮಣ್, ರಂಗನಾಥ್ ಎಸ್.ಕೆ.ದಾಸಪ್ಪ, ನವೀನ್ ಎಸ್.ಕೆ.ಸಿದ್ಧಣ್ಣ, ಸುರೇಶ್, ಈಶ್ವರಪ್ಪ ಸೇರಿದಂತೆ ಸಮಾಜದ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
