ಚಳ್ಳಕೆರೆಯನ್ನು ರಾಜ್ಯದ ನಂ.1 ಸ್ವಚ್ಚತಾ ನಗರವೆಂದು ಪರಿವರ್ತಿಸಿ:ನ್ಯಾ.ದೇವೇಂದ್ರ ಪಂಡಿತ್

ಚಳ್ಳಕೆರೆ

      ರಾಷ್ಟ್ರದ ಪ್ರತಿಷ್ಠಿತ ಖ್ಯಾತ ಕಂಪನಿಗಳಾದ ಡಿಆರ್‍ಡಿಒ, ಬಾರ್ಕ್, ಬಾಬಾ ಅಣು ಸಂಶೋಧನಾ ಕೇಂದ್ರ ಮುಂತಾದವುಗಳು ತಾಲ್ಲೂಕಿನ ಕುದಾಪುರ ಮತ್ತು ದೊಡ್ಡ ಉಳ್ಳಾರ್ತಿ ಗ್ರಾಮಗಳಲ್ಲಿ ನೆಲೆಗೊಂಡಿದ್ದು, ವಿಶ್ವದ ಗಮನ ಚಳ್ಳಕೆರೆ ತಾಲ್ಲೂಕಿನ ಕಡೆ ಇದ್ದು, ಚಳ್ಳಕೆರೆ ನಗರವನ್ನು ರಾಜ್ಯದ ನಂ.1 ಸ್ವಚ್ಚತಾ ನಗರವನ್ನಾಗಿ ಮಾಡಲು ನಗರಸಭೆಯ ಅಧಿಕಾರಿ ವರ್ಗ, ಸಿಬ್ಬಂದಿ ಮತ್ತು ಚುನಾಯಿತ ಸದಸ್ಯರು ಶ್ರಮಿಸಬೇಕೆಂದು ಸಿವಿಲ್ ನ್ಯಾಯಾಯಲದ ಹಿರಿಯ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.

     ಅವರು, ಶನಿವಾರ ನಗರದ 14ನೇ ವಾರ್ಡ್ ವ್ಯಾಪ್ತಿಯ ಪಾರ್ಕ್ ಆವರಣದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ನಮ್ಮ ಚಿತ್ತ ಸ್ವಚ್ಚತೆಯತ್ತ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ನಗರವಿರಲಿ, ಅಲ್ಲಿ ಎಲ್ಲಾ ರೀತಿಯ ಕ್ರಿಯಾಶೀಲ ಚಟುವಟಿಕೆಗಳು ನಡೆಯುತ್ತಿದ್ದು, ಉತ್ತಮ ಆರೋಗ್ಯದತ್ತ ಅಲ್ಲಿನ ಜನರು ಜೀವಿಸುತ್ತಿದ್ದಾರೆಂದರೆ ಅದಕ್ಕೆ ಮುಖ್ಯ ಕಾರಣ ಅಲ್ಲಿನ ಪರಿಸರ.

     ಎಲ್ಲಿ ಪರಿಸರವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲುವಲ್ಲಿ ನಾವು ಸಫಲರಾಗುತ್ತೇವೆಯೋ ಅಲ್ಲಿ ನಮಗೆ ಯಾವುದೇ ರೀತಿಯ ಆನಾರೋಗ್ಯ ಉಂಟಾಗದೆ ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಪ್ರಸ್ತುತ ಇಲ್ಲಿನ ನಗರಸಭೆಯಲ್ಲಿ ಪೌರಾಯುಕ್ತ ಜೆ.ಟಿ.ಹನುಮಂತರಾಜು ನಿರಂತರವಾಗಿ ಇಂತಹ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ನಗರದ ಉತ್ತಮ ಪರಿಸರ ನಿರ್ಮಾಣಕ್ಕೆ ಕಾರಣವಾಗಿದ್ಧಾರೆ.

     ಇತ್ತೀಚಿನ ದಿನಗಳಲ್ಲಿ ನಗರಸಭೆ ಸ್ವಚ್ಚತಾ ಅಂದೋಲನಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಸಂತಸ ವಿಷಯವಾಗಿದೆ. ಚಳ್ಳಕೆರೆ ನಗರ ಸ್ವಚ್ಚತೆಯ ಮೂಲಕವಾದರೂ ರಾಜ್ಯದ ಮೊದಲನೇ ಸ್ವಚ್ಚತಾ ನಗರವಾಗಿ ಖ್ಯಾತಿ ಪಡೆಯಲಿ ಎಂದು ಆಶಿಸುವುದಾಗಿ ತಿಳಿಸಿದರು.

       ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ಪ್ರತಿನಿತ್ಯ ಸಾರ್ವಜನಿಕ ಸಮಸ್ಯೆಗಳಲ್ಲದೆ ಇನ್ನಿತರ ಕೆಲಸ ಕಾರ್ಯಗಳನ್ನು ಸಹ ಸಿಬ್ಬಂದಿ ವರ್ಗ ಇಂದು ತಮ್ಮದೇಯಾದ ರೀತಿಯಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಂಡಿದ್ಧಾರೆ. ಸ್ವಚ್ಚತೆಯಿಂದ ಮಾತ್ರ ನಗರದ ಸೌಂದರ್ಯ ಹೆಚ್ಚುತ್ತದೆ. ನಗರಕ್ಕೆ ಬೇರೆ ಬೇರೆ ಕಡೆಯಿಂದ ಬರುವ ಜನರು ಇಲ್ಲಿನ ಸ್ವಚ್ಚತೆಯನ್ನು ಕಂಡು ಬೆರಗಾಗಬೇಕು ಆ ರೀತಿಯಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳುವಂತೆ ಮನವಿ ಮಾಡಿದರು.

      ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ಇಲಾಖೆಯ ನಿರ್ದೇಶನದ ಮೇರೆಗೆ ಪ್ರತಿತಿಂಗಳ ಒಂದನೇ ಮತ್ತು ಮೂರನೇ ಶನಿವಾರದಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ನಗರಸಭೆಯ ಜೊತೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನಗರಸಭಾ ಸದಸ್ಯರು ಹಾಗೂ ಸಾರ್ವಜನಿಕರೂ ಸಹ ಉತ್ತಮ ಪ್ರೋತ್ಸಾಹ ನೀಡುತ್ತಿದ್ಧಾರೆ. ಈ ಕಾರ್ಯಕ್ರಮಕ್ಕೆ ಪೌರ ಸಿಬ್ಬಂದಿಯನ್ನು ಹೊರತು ಪಡಿಸಿ ಕೇವಲ ಕಚೇರಿಯ ವಿವಿಧ ಹಂತಗಳ ಅಧಿಕಾರಿಗಳು ಮತ್ತು ನೌಕರರು ಭಾಗವಹಿಸುತ್ತಾರೆ. ಚಳ್ಳಕೆರೆ ನಗರವನ್ನು ಸ್ವಚ್ಚತೆಯ ನಗರವನ್ನಾಗಿಸುವ ಗುರಿಗೆ ಎಲ್ಲಾ ರೀತಿಯ ಸಹಕಾರವನ್ನು ನಿರೀಕ್ಷೆ ಮಾಡಲಾಗುತ್ತಿದೆ ಎಂದರು.

      ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಸ್ವಚ್ಚತೆಯಿಂದ ಮಾತ್ರ ರೋಗಗಳ ನಿಯಂತ್ರಣ ಸಾಧ್ಯ. ಸ್ವಚ್ಚತೆಯನ್ನು ಸಂರಕ್ಷಿಸುವುದು ಎಲ್ಲರ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘ ನಗರಸಭೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ. ಅಧ್ಯಕ್ಷ ಗುರುನಾಥ, ಕಾರ್ಯದರ್ಶಿ ಜಯಪ್ರಕಾಶ್‍ಶೆಟ್ಟಿ, ನಿರ್ದೇಶಕ ಗುರುರಾಜ್, ಗಣೇಶ್ ಕಾರ್ಯಕ್ರದಮಲ್ಲಿ ಪಾಲ್ಗೊಂಡಿದ್ದರು.

      ಸ್ವಚ್ಚತಾ ಕಾರ್ಯದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರೆ ಶ್ಯಾಮಲ, ವಿನಯ್, ಜೆಇ ಲೋಕೇಶ್, ನರೇಂದ್ರಬಾಬು, ಕಚೇರಿ ವ್ಯವಸ್ಥಾಪಕ ನಸೀರ್, ಕಂದಾಯಾಧಿಕಾರಿ ವಿ.ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕರಾದ ಮಹಲಿಂಗಪ್ಪ, ನಿರ್ಮಲ, ಗಣೇಶ್, ಓಬಳೇಶ್, ತಿಪ್ಪೇಸ್ವಾಮಿ, ಪಿ.ಪಾಲಯ್ಯ, ಹರೀಶ್, ನಗರಸಭಾ ಸದಸ್ಯರಾದ ಹೊಯ್ಸಳಗೋವಿಂದ, ಸುಮಾಭರಮಣ್ಣ, ತಿಪ್ಪಕ್ಕ, ವೀರಭದ್ರಪ್ಪ, ಸಾವಿತ್ರಮ್ಮ, ಕವಿತಾಬೋರಣ್ಣ, ಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap