ಬೆಂಗಳೂರು
ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಲಾಗಿದ್ದ 21 ದಿನಗಳ ಲಾಕ್ ಡೌನ್ ನಾಳೆ ಮುಗಿಯಲಿದ್ದು ಲಾಕ್ ಡೌನ್ ಅನ್ನು ಮತ್ತೂ ಮುಂದೆ ಹಾಕಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೆಲವು ವಸ್ತುಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ.ಲಾಕ್ ಡೌನ್‌ನಿಂದಾಗಿ ಸರಕು ಸಾಗಣೆ ಲಾರಿಗಳು ಹೆದ್ದಾರಿಯಲ್ಲಿ ನಿಂತಲ್ಲೇ ನಿಂತಿವೆ.
ಇದರಿಂದಾಗಿ ಅಡುಗೆ ಎಣ್ಣೆಯ ಪೂರೈಕೆಯೂ ಸಹ ಕಡಿಮೆಯಾಗುತ್ತಿದೆ. ಮತ್ತೊಂದು ಕಡೆ ವಿದೇಶದಿಂದ ಆಮದು ಆಗಬೇಕಿದ್ದ ಖಾದ್ಯ ತೈಲಗಳ ಪೂರೈಕೆಯಲ್ಲಿಯೂ ವ್ಯತ್ಯೇಯವಾದ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗುವ ಎಲ್ಲಾ ಲಕ್ಷಣ ಕಾಣುತ್ತಿವೆ.
ಸಗಟು ಮಾರಾಟಗಾರರು ಹೇಳುವ ಪ್ರಕಾರ ಕೆಲವು ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಹೆಚ್ಚಾಗಲಿವೆ. ಈಗಾಗಲೇ ಕೊಬ್ಬರಿ ಎಣ್ಣೆಯ ಕೊರತೆ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ಅನುಭವಕ್ಕೆ ಬರುತ್ತಿದೆ. ಅಡುಗೆಗೆ ಬಳಕೆ ಮಾಡುವ ಕೊಬ್ಬರಿ ಎಣ್ಣೆ ದೊರೆಯುತ್ತಿಲ್ಲ.
