ಇತರೆ ರಾಜ್ಯಗಳಿಗಿಂತ ಕೊರೋನಾ ನಮ್ಮ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ : ಯಡಿಯೂರಪ್ಪ

ಬೆಂಗಳೂರು
     ಕರ್ನಾಟಕವು ಪೂರ್ವಭಾವಿ ಕ್ರಮಗಳ ಮೂಲಕ ಕೋವಿಡ್ -19 ಹರಡುವಿಕೆಯನ್ನು ಭಾರತದ ಇತರೆ ರಾಜ್ಯಗಳಿಗಿಂತ ಉತ್ತಮವಾಗಿ ನಿಯಂತ್ರಿಸಲು ಗಮನಾರ್ಹವಾಗಿ ಸಾಧ್ಯವಾಗಿದೆ. ಆದರೂ ಸಹ, ಹೊಸ ಸೋಂಕಿತ ಪ್ರಕರಣಗಳು ಇನ್ನೂ ರಾಜ್ಯದಲ್ಲಿ ವರದಿಯಾಗುತ್ತಿ ರುವುದರಿಂದ ಕೋವಿಡ್-19 ವಿರುದ್ದ ಹೋರಾಡುವ ನಮ್ಮ ಸಂಕಲ್ಪ ಎಂದಿಗಿಂತಲೂ ಬಲವಾಗಿದೆ ಎಂದು ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು  ಹೇಳಿದರು.
     ಇಂದು ಅವರು ವಿಧಾನಸೌಧದ ಪೂರ್ವ ದಿಕ್ಕಿನ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಲಾಗಿದ್ದ   ಕಾರ್ಯಕ್ರಮದಲ್ಲಿ ಕೋವಿಡ್ ? 19 ಸೋಂಕಿನ ನಿಯಂತ್ರಣಕ್ಕಾಗಿ ಸಂಚಾರಿ ಪರೀಕ್ಷಾ ಘಟಕವನ್ನು ಲೋಕಾರ್ಪಣೆ ಮಾಡಿದರು.ನಮ್ಮ ಸರ್ಕಾರವು, ಕೋವಿಡ್-19 ರ ಹರಡುವಿಕೆಯನ್ನು ನಿಯಂತ್ರಿಸಲು ಸೂಕ್ತ ಮಾರ್ಗಸೂಚಿಗಳನ್ನು ರಾಜ್ಯದ ನಾಗರೀಕರಿಗೆ ಸ್ಫಷ್ಟವಾಗಿ ತಲುಪಿಸುವಲ್ಲಿ ಮತ್ತು ಅದರ ಅನುಸರಣೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ.
 
     ಆರೋಗ್ಯ ಸೌಲಭ್ಯಗಳು ಮತ್ತು ಆರೋಗ್ಯ ಕಾರ್ಯಕರ್ತರು ಉತ್ತಮವಾಗಿ ಕಾರ್ಯನಿರ್ವಹಿಸಲು ಸಮರ್ಥರಾಗಿದ್ದಾರೆ ಮತ್ತು ಜನರು, ವಿಶೇಷವಾಗಿ ದುರ್ಬಲ ವರ್ಗಗಳನ್ನು ಈ ಕಠಿಣ ಸಮಯದಲ್ಲಿ ಕಾಳಜಿಯಿಂದ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಂತಿಮವಾಗಿ  ನಾವು ಒಟ್ಟಾಗಿ ಈ ಸಾಂಕ್ರಾಮಿಕ ರೋಗವನ್ನು ಗೆಲ್ಲುತ್ತೇವೆ ಎಂದರು.
    ಸದ್ಯ ಚಾಲ್ತಿಯಲ್ಲಿರುವ ಕ್ರಮಗಳ ಜೊತೆಗೆ, ಕೋವಿಡ್-19 ರ ಸಂಭಾವ್ಯ ರೋಗಕ್ಷಣಗಳುಳ್ಳ ಹೆಚ್ಚಿನ ಜನರನ್ನು ಪರೀಕ್ಷಿಸುವ ನಮ್ಮ ಪ್ರಯತ್ನಗಳನ್ನು ನಾವು ತೀವ್ರಗೊಳಿಸಿದ್ದೇವೆ.  ಕರ್ನಾಟಕ ಸರ್ಕಾರವು ಜಿಇ ಹೆಲ್ತ್ ಕೇರ್ ಸಹಯೋಗದಿಂದ ಕೋವಿಡ್-19 ಜನಸಂಖ್ಯೆ ಆಧಾರಿತ ಪರೀಕ್ಷೆಗಾಗಿ ಸ್ಮಾರ್ಟ್ ಕಿಯೋಸ್ಕ್?ಗಳನ್ನು ಜಾರಿಗೊಳಿಸುತ್ತಿದೆ ಎಂದು ಘೋಷಿಸಲು ನನಗೆ ಸಂತಸವಾಗುತ್ತಿದೆ.
    ಈ ಅತ್ಯಾಧುನಿಕ ಸ್ಮಾರ್ಟ್ ಕಿಯೋಸ್ಕ್ಗಳು ಮಾದರಿ ಸಂಗ್ರಹಣೆ ನಡೆಯುತ್ತಿರುವಾಗ ಆರೋಗ್ಯ ಸಿಬ್ಬಂದಿ ಮತ್ತು ಕರ್ನಾಟಕದ ನಾಗರೀಕ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಈ ಸ್ಮಾರ್ಟ್ ಕಿಯೋಸ್ಕ್ಗಳು ಆರೋಗ್ಯ ಕಾರ್ಯಕರ್ತರು ಮತ್ತು ಶಂಕಿತ ರೋಗಿಗಳ ಸಡುವಿನ ಯಾವುದೇ ಸಂಪರ್ಕವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಒಳಗಾಗುವ ಸಾಧ್ಯತೆಯನ್ನು ನಿವಾರಿಸುತ್ತದೆ.
    ನೀವು ನೋಡುತ್ತಿರುವಂತೆ,  ಸ್ಮಾರ್ಟ್ ವಾಕ್-ಇನ್ ಸ್ಯಾಪಲ್ ಕಲೆಕ್ಷನ್  ಕಿಯೋಸ್ಕ್  ಎರಡು ಆವರಣಗಳನ್ನು ಒಳಗೊಂಡಿದೆ. ಒಂದು ನಾಗರಿಕರಿಗೆ ಮತ್ತು ಒಂದು ಆರೋಗ್ಯ ಸಿಬ್ಬಂದಿಗೆ ಒಂದು ಪಾರದರ್ಶಕ, ಗಾಳಿಯಾಡದ ತೆರೆಯಿಂದ ಎರಡು ವಿಭಜನೆ ಮಾಡಿ ಬೇರ್ಪಡಿಸಲಾಗಿದೆ . ಎರಡೂ ಆವರಣಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳು , ಬೆಳಕು ಮತ್ತು ಗಾಳಿಯಾಡುವ ವ್ಯವಸ್ಥೆ ಮಾಡಲಾಗಿದೆ, ಮತ್ತು ಆರೋಗ್ಯ ಕಾರ್ಯಕರ್ತ ಮತ್ತು ನಾಗರಿಕ ನಡುವಿನ ಸಂವಹನಕ್ಕಾಗಿ ಮೈಕ್ ಮತ್ತು ಸ್ಪೀಕರ್ ಅನ್ನು ಹೊಂದಿವೆ.
 
   ವಿಭಜನೆ ಮಾಡುವ ಗೋಡೆಯು, ಸುರಕ್ಷಿತ ಮಾದರಿ ಸಮಗ್ರಹಣೆಯನ್ನು ಸಕ್ರಿಯಗೊಳಿಸಲು, ಒಂದು ಜೋಡಿ ಬದಲಾಹಿಸಬಹುದಾದ ಕೈಗವಸ್ತುಗಳನ್ನು ಮತ್ತು ನೈರ್ಮಲ್ಯಗೊಳಿಸುವ ಜೆಲ್ ವಿತರಕರನ್ನು ಹೊಂದಿದೆ. ಇದು ಸಂಪರ್ಕವಿಲ್ಲದ ಮಾದರಿ ಸಂಗ್ರಹ ಪ್ರಕ್ರಿಯೆಯನ್ನು ಖಾತ್ರಿಗೊಳಿಸುತ್ತದೆ. ಪರೀಕ್ಷೆಗೆ ಒಳಪಡುವ ಜನರ ಮಾಹಿತಿಯನ್ನು ಕರ್ನಾಟಕ ಸರ್ಕಾರವು ಬಳಸುತ್ತಿರುವ ಅಪ್ಲಿಕೇಶನ್ ನಲ್ಲಿ ಸಂಗ್ರಹಿಸಲಾಗಿದೆ. ಪ್ರತಿ ಮಾದರಿ ಸಂಗ್ರಹದ ನಂತರ ಕಿಯೋಸ್ಕ್ ಅನ್ನು ಸೋಂಕು ರಹಿತವನ್ನಾಗಿಸಲಾಗುತ್ತದೆ.
    ವಿಪ್ರೋ ಜಿ ಇ ಹೆಲ್ತ್ ಕೇರ್ ಗೆ ನಾನು ಕೃತಜ್ಞನಾಗಿದ್ದೇನೆ, ಅವರು ತಮ್ಮ ಸಿಎಸ್‍ಆರ್ ಜವಾಬ್ದಾರಿಯ ಬಾಗವಾಗಿ, ಈ ನವೀನ ಕಿಯೋಸ್ಕ್ ಅನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ದಿಪಡಿಸುವ ಮೂಲಕ ಈ ಕ್ರಮವನ್ನು ಬೆಂಬಲಿಲು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ, ಈ ಕಿಯಾಸ್ಕ್ ಗಳನ್ನು ಕರ್ನಾಟಕ/ಬೆಂಗಳೂರಿನಲ್ಲಿ 15 ಸ್ಥಳಗಳಲ್ಲಿ ಇರಿಸಲಾಗುವುದು.
     15 ಯೂನಿಟ್ ಗಳ ಸ್ಮಾರ್ಟ್ ಕಿಯೋಸ್ಕ್ ನಿಯೋಜನೆ ವೇಳಾಪಟ್ಟಿ  ಕರ್ನಾಟಕ  ಮೊದಲನೇ ಲಾಟ್- 4 ಘಟಕಗಳು ಇಂದು ಪ್ರಾರಂಭವಾಗುತ್ತಿವೆ, ಅಂದರೆ 27 ಮೇ 2020 ಎರಡನೇ ಲಾಟ್ -5 ಘಟಕಗಳನ್ನು 2020 ಮೇ 29 ರಂದು ನಿಯೋಜಿಸಲಾಗುವುದು ಮೂರನೇ ಲಾಟ್ -6ಘಟಕಗಳನ್ನು 2020 ಜೂನ್ 1  ರಂದು ನಿಯೋಜಿಸಲಾಗುವುದು ತ್ವರಿತ, ಆರೋಗ್ಯಕರ ಮತ್ತು ತಡೆರಹಿತ ಮಾದರಿ ಸಂಗ್ರಹ ಪ್ರಕ್ರಿಯೆಯ ಮೂಲಕ ಕೋವಿಡ್-19 ರ ಹೆಚ್ಚಿನ ಸಮುದಾಯ ಪರೀಕ್ಷೆಯ ಅಗತ್ಯವನ್ನು ಪರಿಹರಿಸಲು ಈ ಉಪಕ್ರಮವು ಸಹಾಯ  ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ. ನಮ್ಮ ರಾಜ್ಯದಲ್ಲಿ ಅಔಗಿIಆ-19 ಹರಡುವುದನ್ನು ನಿಯಂತ್ರಿಸುವಲ್ಲಿ ಈ ಸ್ಮಾರ್ಟ್ ಕಿಯೋಸ್ಕ್ ಗಳು ಬಹಳ ಸಹಾಯಕಾರಿಯಾಗಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap