ಚಿಕ್ಕನಾಯಕನಹಳ್ಳಿ :

ಪಟ್ಟಣದ ಸೇರಿದಂತೆ ತಾಲ್ಲೂಕಿನ ಬಹುತೇಕ ಹಳ್ಳಿಗಳ ಬೇವಿನ ಮರಗಳ ಬುಡದಲ್ಲಿ ನೂರಾರು ಬೇವಿನ ಸೊಪ್ಪು ಸಿಗಿಸಿರುವ ಎಳನೀರ ಬುರುಡೆಗಳು ಕಾಣುತ್ತಿವೆ.
ತಾಲ್ಲೂಕಿನ ಗಡಿಗೆ ಹೊಂದಿಕೊಂಡಿರುವ ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಹಳ್ಳಿಗಳಲ್ಲೂ ಇಂತವೇ ದೃಶ್ಯ ಕಣ್ಣಿಗೆ ರಾಚುತ್ತದೆ. ಶಾಂತಿ ಮಾಡಿ ಕರಗಂತೆ ಪೂಜಿಸಿ ಊರಿನಿಂದ ಹೊರಗಡೆ ಕಳಿಸಿದರೆ ಊರಿಗೆ ಕರೋನ ಬರುವುದಿಲ್ಲ ಎಂಬುದು ಜನರ ನಂಬಿಕೆ. ಹೀಗಾಗಿ ಇಂತ ಆಚರಣೆ ಮಾಡತೊಡಗಿದ್ದಾರೆ.
ಈ ಕುರಿತು ಹಿರಿಯರು ಹೇಳುವುದು, ಈ ಆಚರಣೆಗೆ ಅಜ್ಜಿ ಕಳಿಸುವುದು ಎನ್ನುತ್ತಾರೆ. ಮನುಷ್ಯನ ಉಪಟಳ ಹೆಚ್ಚಾದಾಗ ಭೂತಾಯಿ ಮಾರಿಯ ರೂಪ ತಾಳುತ್ತಾಳೆ. ಆಗ ಮಾರಣಾಂತಿಕ ಕಾಯಿಲೆಗಳು ಮನುಷ್ಯನಿಗೆ ಬರುತ್ತದೆ ಹಿಂದೆ ಪ್ಲೇಗ್ ಕಾಲರಾ ಬಂದಾಗಲೂ ಹೀಗೆ ಮಾಡಿದ್ದೆವು ಎಂದು ತಮಗೆ ತಿಳಿದಿರುವುದನ್ನು ತಮ್ಮದೇ ಆದ ಶೈಲಿಗಳಲ್ಲಿ ಹೇಳುತ್ತಾರೆ.
ಊರಿನವರು ಒಟ್ಟಾಗಿ ಒಂದು ದಿನವನ್ನು ಮಾರಿ ಕಳಿಸಲು ನಿಗದಿ ಮಾಡುತ್ತಿದ್ದಾರೆ, ಅಂದು ಪ್ರತಿ ಮನೆಯಿಂದ ಕರಗ ಕಳಿಸಲಾಗುತ್ತದೆ. ವಾರದ ಮಂಗಳವಾರ, ಶುಕ್ರವಾರ ಹಾಗೂ ಭಾನುವಾರ ನಿಗದಿ ಮಾಡಲಾಗುತ್ತಿದೆ. ಮೌಡ್ಯ ಆಚರಣೆಯ ಹೆಸರಿನಲ್ಲಿ ಹಳ್ಳಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಹಾಗೂ ಲಾಕ್ ಡೌನ್ ನಿಯಮಗಳು ಜನರು ಪಾಲಿಸುತ್ತಿಲ್ಲ. ಇಂತಹ ಅರ್ಥವಿಲ್ಲದ ಆಚರಣೆಗಳನ್ನು ಬಿಟ್ಟಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
