ದುಬಾರಿ ಬೈಕ್‍ ಕದಿಯುತ್ತಿದ್ದ ಖದೀಮನ ಬಂಧನ

ಬೆಂಗಳೂರು

     ಪ್ರೇಯಸಿಯೊಂದಿಗೆ ಸುತ್ತಾಡಿ ಮೋಜು ಮಾಡಲು ದುಬಾರಿ ಬೈಕ್‍ಗಳನ್ನು ಕಳವು ಮಾಡುತ್ತಿದ್ದ ಖದೀಮನನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು 6 ಲಕ್ಷ ಮೌಲ್ಯದ 8 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

      ಬೊಮ್ಮನಹಳ್ಳಿಯ ಕಾರ್ತಿಕ್ ಅಲಿಯಾಸ್ ಕಾರ್ತಿ(26)ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ 6 ಲಕ್ಷ ರೂ ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ|| ಬೋರಲಿಂಗಯ್ಯ ತಿಳಿಸಿದ್ದಾರೆ.

      ಆರೋಪಿಯು ದ್ವಿಚಕ್ರ ವಾಹನಗಳನ್ನು ಕಳವು ಮಾಡುವ ರೂಢಿಗತ ಅಪರಾಧಿಯಾಗಿದ್ದು,ಆರೊಪಿಯ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ಪ್ರೇಯಸಿಯೊಂದಿಗೆ ಐಷಾರಾಮಿ ಜೀವನ ಮಾಡುವ ಹವ್ಯಾಸಹೊಂದಿದ್ದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಕೋರಮಂಗಲ ಆರೋಪಿಯನ್ನು ಬಂಧಿಸಿ ಹೆಚ್.ಎಸ್.ಆರ್ ಲೇ-ಔಟ್ ಪೊಲೀಸ್ ಠಾಣೆಯ 3 ದ್ವಿಚಕ್ರ ವಾಹನ ಕಳವು ಪ್ರಕರಣಗಳು
ಪತ್ತೆಹಚ್ಚಲಾಗಿದೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link