ಹಂಪಿ ಉತ್ಸವ ಆರಂಭಕ್ಕೆ ಕ್ಷಣಗಣನೆ

ಬಳ್ಳಾರಿ:

     ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ಹಂಪಿಯ ಶಿಲ್ಪಕಲಾ ಸ್ಮಾರಕಗಳ ಮಡಿಲಲ್ಲಿ ನಡೆಯಲಿರುವ `ಹಂಪಿ ಉತ್ಸವ’ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಾಗಿದ್ದ ಹಂಪಿ ಉತ್ಸವವನ್ನು ಅತಿವೃಷ್ಟಿ, ಅನಾವೃಷ್ಟಿಯಿಂದ ಮುಂದೂಡಲಾಗಿದ್ದ ಹಂಪಿ ಉತ್ಸವವನ್ನು ಜ.10, 11 ರಂದು ಎರಡು ದಿನಗಳ ಕಾಲ ನಡೆಯಲಿದೆ. ಶುಕ್ರವಾರ ಸಂಜೆ 7.30ಕ್ಕೆ ಉತ್ಸವಕ್ಕೆ ಕರ್ಟನ್ ರೈಸರ್ ಆಗಲಿದೆ. ಉತ್ಸವಕ್ಕೆ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ತಾರಾ ಮೆರುಗು ನೀಡಲಿದ್ದಾರೆ.

    ಭಾರತದ ಇತಿಹಾಸದಲ್ಲಿ ಕನ್ನಡ ನಾಡಿನ ಹಿರಿಮೆಯನ್ನು ಸೂಚಿಸುವ ವಿಜಯನಗರ ಸಾಮ್ರಾಜ್ಯದ ವೈಭವ ಅತ್ಯಂತ ಪ್ರಮುಖವೆನಿಸುತ್ತದೆ. ವಿಜಯನಗರ ಸಾಮ್ರಾಜ್ಯದ

       ಕೃಷ್ಣದೇವರಾಯನ ಕಾಲದಲ್ಲಿ ಹಂಪಿಯ ಬೀದಿ ಬದಿಗಳಲ್ಲಿ ಮುತ್ತು ರತ್ನಗಳನ್ನು ಶೇರುಗಳಲ್ಲಿ ಅಳೆಯುತ್ತಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಇಂಥಹ ಗತಕಾಲದ ವೈಭವ ಸಾರುವ ಹಂಪಿ ಉತ್ಸವವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಅತಿವೃಷ್ಟಿ, ಅನಾವೃಷ್ಟಿಯ ನಡುವೆಯೂ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಜ್ಜುಗೊಂಡಿದ್ದು, ಎರಡು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವದಲ್ಲಿ ಸಾಂಸ್ಕøತಿಕ ಲೋಕವೇ ಅನಾವರಣಗೊಳ್ಳಲಿದೆ.

      ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿಯ ಗತಕಾಲದ ವೈಭವವನ್ನು ಸಾರುವ ಮತ್ತು ಅದನ್ನು ಜೀವಂತವಾಗಿ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಸಲುವಾಗಿ ರಾಜ್ಯ ಸರ್ಕಾರ ಕಳೆದ ಮೂರುವರೆ ದಶಕಗಳ ಹಿಂದೆ ಹಂಪಿ ಉತ್ಸವವನ್ನು ಆಚರಿಸಲಾಯಿತು. 1970ರಲ್ಲಿ ಹಂಪಿಯನ್ನು ಪರಿಚಯಿಸುವ ಮೊದಲ ಪ್ರಯತ್ನ ನಡೆಯಿತು. ಮೊದಲ ಬಾರಿಗೆ 1970ರಲ್ಲಿ ಹಂಪಿಯ ಕಮಲ ಮಹಲ್‍ನ ಆವರಣದಲ್ಲಿ ಪ್ರವಾಸಿ ಉತ್ಸವ ಹೆಸರಿನಲ್ಲಿ ಹಂಪಿ ಉತ್ಸವವನ್ನು ಆಚರಿಸಲಾಯಿತು. ಬಳಿಕ ಜಿಲ್ಲೆಯ ಸಾಂಸ್ಕøತಿಕ ರಾಯಭಾರಿ ಎಂದೇ ಕರೆಯಲಾಗುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಮುತುವರ್ಜಿಯಿಂದಾಗಿ 1987ರಲ್ಲಿ ಕನಕ-ಪುರಂದರ ಉತ್ಸವವನ್ನಾಗಿ ಆಚರಿಸಲಾಯಿತು. ನಂತರ ಇದಕ್ಕೆ ಹಂಪಿ ಉತ್ಸವ ಎಂಬ ಹೆಸರಿನಲ್ಲಿ ನಿರಂತರವಾಗಿ ಆಚರಿಸಲಾಯಿತು.

ಹಂಪಿ ಉತ್ಸವದ ವಿಶೇಷ

     ಮೈಸೂರು ದಸರಾ ಹಬ್ಬದ ಮಾದರಿಯಲ್ಲಿ ಹಂಪಿ ಉತ್ಸವಕ್ಕೂ ಮೆರುಗು ನೀಡುವ ಸಲುವಾಗಿ ಹಂಪಿಯ ಪರಿಸರದಲ್ಲಿ ಎಲ್ಲೆಡೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ. ಜತೆಗೆ ಹಂಪಿ ಬೈ ನೈಟ್ ಮೂಲಕ ಹಂಪಿಯ 17 ಸ್ಮಾರಕಗಳನ್ನು ಪರಿಚಯಿಸುವ ಸಲುವಾಗಿ ಹಿನ್ನೆಲೆ ಧ್ವನಿಯನ್ನೂ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಹಂಪಿ ಬೈ ಸ್ಕೈ (ಹೆಲಿಕ್ಯಾಪ್ಟರ್ ಮೂಲಕ ಆಗಸದಿಂದ ಹಂಪಿ) ವ್ಯವಸ್ಥೆ ಮಾಡಲಾಗಿದ್ದು, ಆಗದಿಂದಲೂ ಹಂಪಿಯ ಸ್ಮಾರಕಗಳೊಂದಿಗೆ ಸುತ್ತಮುತ್ತಲಿನ ಪ್ರಕೃತಿಯ ರಮಣೀಯ ಸೌಂದರ್ಯ, ತುಂಗಭದ್ರಾ ನದಿಯನ್ನು ಕಣ್ತುಂಬಿಕೊಳ್ಳಬಹುದಾಗಿದ್ದು, ಜನರನ್ನು ಆಕರ್ಷಿಸಲಿದೆ. ಅಲ್ಲದೇ, ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಈ ಬಾರಿರಾಜಸ್ಥಾನದ ಉದಯಪುರ, ಪಂಜಾಬ್‍ನ ಪಾಟಿಯಾಲ, ಮಹಾರಾಷ್ಟ್ರದ ನಾಗಪೂರ್, ನಾಗಾಲ್ಯಾಂಡ್‍ನ ದೈನಾಪೂರ್, ತಮಿಳುನಾಡಿನ ತಾಂಜಾವೂರ್, ಉತ್ತರ ಪ್ರದೇಶದ ಅಲಹಾಬಾದ್ ಸೇರಿದಂತೆ ಇನ್ನಿತರೆ ವಿವಿಧ ರಾಜ್ಯಗಳ ಸಾಂಸ್ಕøತಿಕ, ಜನಪದ ಕಲೆಗಳು ಅನಾವರಣಗೊಳ್ಳಲಿದ್ದು, ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ.

      ಈ ಬಾರಿಯ ಹಂಪಿ ಉತ್ಸವದಲ್ಲಿ ಶ್ರೀಕೃಷ್ಣ ದೇವರಾಯನ ಪಟ್ಟಾಭಿಷೇಕವನ್ನು ಸಹ ಆಚರಿಸಲು ಜಿಲ್ಲಾಡಳಿತ ನಿರ್ಣಯ ಕೈಗೊಂಡಿದ್ದು, ಉತ್ಸವ ಪ್ರತಿ ವರ್ಷಕ್ಕಿಂತ ಹೆಚ್ಚು ಗಮನಸೆಳೆಯಲಿದೆ. ಉತ್ಸವದಲ್ಲಿ ಗಾಯತ್ರಿ ಪೀಠ ಮುಖ್ಯ ವೇದಿಕೆಯನ್ನಾಗಿ ಮಾಡಲಾಗಿದೆ. ಇನ್ನುಳಿದಂತೆ ಎದುರು ಬಸವಣ್ಣ ವೇದಿಕೆ, ವಿರೂಪಾಕ್ಷೇಶ್ವರ ವೇದಿಕೆ, ಸಾಸಿವೆಕಾಳು ಗಣೇಶ ವೇದಿಕೆ ಸೇರಿ ಒಟ್ಟು ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗಿದೆ. ಲಕ್ಷಾಂತರ ಜನರು ಏಕಕಾಲದಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದ್ದು, ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap