ಪಾವಗಡ : ಎಗ್ಗಿಲ್ಲದೆ ಮಾರಾಟವಾಗುತ್ತಿದೆ ಕಳ್ಳಬಟ್ಟಿ ಸಾರಾಯಿ

ಪಾವಗಡ

      ತಾಲ್ಲೂಕಿನಲ್ಲಿ ರಾಜಾರೋಷವಾಗಿ ಕಳ್ಳಬಟ್ಟಿ ಸಾರಾಯಿ ತಲೆ ಎತ್ತಿದ್ದು, ಇದನ್ನು ತಡೆಗಟ್ಟಲು ಅಬಕಾರಿ ಇಲಾಖೆ ವಿಫಲವಾಗಿದೆ.ದೇಶಾದ್ಯಂತ ಕೊರೊನಾ ವೈರಸ್‍ನಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಮದ್ಯಂಗಡಿಗಳನ್ನು ಮುಚ್ಚಿಸಿವೆ. ಈ ನೆಪದಲ್ಲಿ ತಾಂಡಗಳು ಸೇರಿದಂತೆ ಕೆಲ ಹಳ್ಳಿಗಳಲ್ಲಿ ಕಳ್ಳಬಟ್ಟಿ ನಾಟಿ ಸಾರಾಯಿ ತಯಾರಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.ರಾಜ್ಯ ಲಾಕ್ ಡೌನ್ ಆದನಂತರ ಸಣ್ಣ ಪುಟ್ಟ ಅಂಗಡಿಗಳಲ್ಲಿ ಕಳ್ಳತನವಾಗಿ ಪಾವಗಡ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ 15 ದಿನಗಳ ಹಿಂದೆ ನಡೆಯಿತು.

     ಆ ಸಮಯದಲ್ಲಿ ರಾಜಾ ಪಾಕೆಟ್ ಮದ್ಯ 35 ರೂ.ಗಳಿಂದ 350 ರೂ.ಗಳಿಗೆ, ಓಟಿ ಪಾಕೆಟ್ 75 ರೂ.ಗಳಿಂದ 500 ರೂ.ಗಳಿಗೆ, ಆರ್.ಎಸ್ ಬಾಟಲ್ 250 ರೂ.ಗಳಿಂದ 1000 ರೂ.ಗಳಿಗೆ ಬ್ಲಾಕ್‍ನಲ್ಲಿ ಮಾರಾಟ ಮಾಡಿದ್ದಾರೆ. ಇನ್ನೂ ಕೆಲ ಬ್ರಾಂಡ್‍ಗಳ ಮದ್ಯದ ಬಾಟಲ್‍ಗಳು ದುಬಾರಿ ಬೆಲೆಗೆ ಮಾರಾಟ ಮಾಡಿ, ಕುಡುಕರ ಜೇಬಿಗೆ ಕತ್ತರಿ ಹಾಕಿರುವ ಘಟನೆಗಳು ನಡೆದಿದ್ದು, ಕೆಲವರ ಮೇಲೆ ಕೇಸ್ ದಾಖಲಾಗಿವೆ. ಇರೋ ಬರೋ ದಾಸ್ತಾನು ಮುಗಿದ ನಂತರ ಮತ್ತೆ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡಲು ಹೊರಟ್ಟಿದ್ದಾರೆ ಎಂದು ಮಹಿಳೆಯರಿಂದ ಆರೋಪ ಕೇಳಿ ಬರುತ್ತಿವೆ.

    ಭಾರತ ದೇಶದಲ್ಲಿ ಕಫ್ರ್ಯೂ ಘೋಷಣೆ ನಂತರ ಮಾರ್ಚಿ 22 ರಿಂದ ಇಡೀ ದೇಶದಲ್ಲಿ ಕೊರೊನಾ ವೈರಸ್‍ನಿಂದ ಲಾಕ್ ಡೌನ್ ಮಾಡಲಾಯಿತು. ಅಂದಿನಿಂದ ಇಂದಿನವರೆಗೆ ವiದ್ಯದ ಅಂಗಡಿಗಳನ್ನು ಮುಚ್ಚಲಾಗಿದೆ. ರಾಜ್ಯದಲ್ಲಿ ಸುಮಾರು 6-7 ಜನ ಮದ್ಯ ವ್ಯಸನಿಗಳು ಚಟಕ್ಕೆ ಬಿದ್ದು, ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದು ಹೋದವು. ಸರ್ಕಾರ ಮದ್ಯದ ಅಂಗಡಿಗಳನ್ನು ಯಾವುದೇ ಕಾರಣಕ್ಕೂ ತೆಗೆಯ ಬಾರದೆಂದು ನಿರ್ಧಾರ ತೆಗೆದುಕೊಂಡ ನಂತರ, ಕಳ್ಳಬಟ್ಟಿ ಸಾರಾಯಿ ತಯಾರಿಕೆ ಮಾಡಲು ಕೆಲ ಕಿಡಿಗೇಡಿಗಳು ಮುಂದಾಗಿದ್ದಾರೆ. ಇದರಿಂದ ಅಮಾಯಕ ಜನರನ್ನು ಬಲಿ ತೆಗೆಯಲು ಹೊರಟಿದ್ದು, ಇವರನ್ನು ಮಟ್ಟ ಹಾಕದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಅಬಕಾರಿ ಇಲಾಖೆಯೆ ಹೊಣೆ ಹೊರಬೇಕಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ರಾಜ್ಯದಲ್ಲಿ ಕೊರೊನಾ ವೈರಸ್‍ನಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಿದ್ದು, ಕುಡಿತಕ್ಕೆ ದಾಸರಾದ ಕೆಲ ಜನ ಚಟ ತಾಳಲಾರದೆ ನಾಟಿ ಸಾರಾಯಿ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಾಟಿ ಸಾರಾಯಿ ತಯಾರಿಕೆಯಲ್ಲಿ ಕಳ್ಳಬಟ್ಟಿ ಇಳಿಸಲು ಮುಂದಾಗಿ, ರಾತ್ರಿ ಹೊತ್ತಿನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.

   ಕೊರೊನಾ ವೈರಸ್ ಹರಡುವಿಕೆಯಿಂದ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮದ್ಯದಂಗಡಿಗಳನ್ನು ಲಾಕ್ ಮಾಡಿರುವುದನ್ನು ಮನಗಂಡ ಕೆಲ ದಂಧೆಕೋರರು ಕಳ್ಳಬಟ್ಟಿ ತಯಾರಿಕೆ ಮಾಡಿ, ಹಣ ಗಳಿಸಲು ನಾಟಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದಾರೆ. ಇದನ್ನು ಕುಡಿದವರು ಪ್ರಾಣ ಕಳೆದುಕೊಂಡ ಘಟನೆಗಳು ಕೂಡ ಈ ಹಿಂದೆ ನಡೆದು ಹೋಗಿವೆ.

    ಪಾವಗಡ ತಾಲ್ಲೂಕು ಆಂಧ್ರದ ಗಡಿ ಭಾಗದಲ್ಲಿ ಇದ್ದು,ಸುತ್ತ ಮುತ್ತಲಿನ ಆಂಧ್ರದ ಜನ ಕಳ್ಳಬಟ್ಟಿ ಸಾರಾಯಿಗೆ ಬರುತ್ತಿದ್ದು,ಬೇಡಿಕೆ ಹೆಚ್ಚಾಗಿರುವುದರಿಂದ ಕಳ್ಳಬಟಿ ದಂದು ಕೋರರಿಗೆ ಹಣಗಳಿಸಲು ಸುಲುಬದ ಕೆಲಸ ಎಂದುಕೊಂಡ ರಾಜರೊಷವಾಗಿ ರಾತ್ರಿ ಸಮಯದಲ್ಲಿ ತಯಾರಿಕೆ ಮಾಡಿ,1 ಲೀಟರ್ ಬಾಟಲ್ 600 ರೂಗಳಿಗೆ,2 ಲೀಟರ್ ಬಾಟಲ್ 1200 ರೂಗಳಿಗೆ ಮಾರಾಟ ಮಾರುತ್ತಿದರು ಸಹ ಕುಡಕರು ನಾಮುಂದೆ ತಾಮುಂದೆ ದುಬ್ಬಾರಾಟ ಕಿರುಚಾಟ ಮಾಡಿಕೊಂಡು ಸಾರಾಯಿಯನ್ನು ತೆಗೆದುಕೊಂಡು ಬರೋದೆ ಇವರ ಕೆಲಸವಾಗಿದ್ದು,ನೆಮ್ಮಿಂದಿಯಿಂದ ಜೀವನ ಸಾಗುವ ಸಮಯದಲ್ಲಿ ನಾಟಿ ಸಾರಾಯಿಂದ ನಿಮ್ಮಂದಿ ಕೆಟ್ಟಂತಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

      ನಾಟಿ ಸಾರಾಯಿ ಕುಡತದಿಂದ ಪ್ರಾಣಕ್ಕೆ ಅಪಯವಿದ್ದು,ನಾಟಿ ಸಾರಾಯಿ ತಯಾರಿಕೆ ಮಾಡುವಾಗ ಮಾತ್ರೆಗಳು ಹಾಗೂ ಬ್ಯಾಟರಿ ಸೆಲ್,ವಿವಿದ ಕೀಕ್ ಹೊಡೆಯುವ ವಸ್ತುಗಳನ್ನು ಬಳಸುತ್ತಾರೆ ಎಮಬ ಮಹಿತಿ ತಿಳಿದು ಬಂದಿದೆ. ಕಳ್ಳ ದಾರಿಯಲ್ಲಿ ಅಂಧ್ರದ ಪ್ರದೇಶದ ಜನರು ಪಾವಗಡಕ್ಕೆ ಪ್ರವೇಶ, ಪಾವಗಡ ತಾಲ್ಲೂಕು ಆಂಧ್ರದ ಗಡಿಯಲ್ಲಿ ಇದ್ದು,ಆಂಧ್ರ ಪ್ರದೇಶದ ಮಡಕಶಿರ, ಹಿಂಧೂಪುರ ,ರೊದ್ದಂ,ಕಲ್ಯಾಣದುರ್ಗ,ಕಂಬದೂರು,ಎಗವಪಲ್ಲಿ,ಅಮರಾಪುರ,ಬೆಸ್ತರಹಳ್ಳಿ ಮಾರ್ಗವಾಗಿ ಆಂಧ್ರ ಪ್ರದೇಶದ ಗ್ರಾಮಗಳಿಂದ ಕಳ್ಳ ದಾರಿಗಳಲ್ಲಿ ಪಾವಗಡ ಗಡಿ ಗ್ರಾಮಗಳಿಗೆ ಜನ ಪ್ರವೇಶವಾಗುತ್ತಿದ್ದು,ಆಂಧ್ರದ ಗಡಿ ಭಾಗದಲ್ಲಿ ಕೊರೊನಾ ಸೋಂಕಿತರಿದ್ದು,ಇವರನ್ನು ತಡೆಯಲು ಪೋಲೀಸ್ ಮತ್ತು ತಾಲ್ಲೂಕು ಆಡಳಿತಕ್ಕೆ ತಲೆ ಬೀಸಿಯಾಗಿದ್ದು,ಇಂತಹ ಸಮಯದಲ್ಲಿ ಕಳ್ಳಬಟ್ಟಿ ಸಾರಾಯಿ ತಯಾರಿಕೆಯಿಂದ ಜನಸಂದಡಿ್ಳುನ್ನೂ ಓಡಾಟ ಹೆಚ್ಚಾಗಿ ಸೋಂಕು ತಗುಲುವ ಸೂಚನೆಗಳು ಕಾಣುತ್ತಿವೆ.

     ಕುಡಿತವೇ ಜೀವನವಲ್ಲ,ಜೀವವಿದರೆ ಏನಾದರು ಸಾಧಿಸಬಹುದು,ಲಾಕ್ ಡೌನ್ ಮುಗಿಯವರಿಗೂ ಕುಡಿತಕ್ಕೆ ಒಳಗಾಗದೆ ಮಧ್ಯದ ಪ್ರಿಯರು ಸರ್ಕಾರಕ್ಕೆ ಸಹಾಕಾರ ನೀಡಬೇಕೆಂದು ಪ್ರಜ್ಞಾವಂತ ನಾಗರಿಕರ ಕೋರಿಕೆಯಾಗಿದೆ.ತಾಲ್ಲೂಕಿನಾದ್ಯಾಂತ ಕಳ್ಳಬಟಿ ಸಾರಾಯಿ ತಯಾರಿಕೆ ನಡೆಯುತ್ತಿದ್ದು,ಇದನ್ನು ತಡೆಗಟ್ಟುವುದರಲ್ಲಿ ಅಬಕಾರಿ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.ತಾಲ್ಲೂಕಿನ ಪ್ರತಿ ಗ್ರಾಮದಲ್ಲಿಯೂ ನಾಟಿ ಸಾರಾಯಿ ಮಾರಾಟ ನಡೆಯುತ್ತಿದ್ದು,ನಾಟಿ ಸರಾಯಿ ಮಾರಾಟ ಕೇಂದ್ರಗಳಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಮತ್ತು ಪೋಲೀಸ್ ಇಲಾಖೆ ಜಂಟಿಯಲ್ಲಿ ಕಾರ್ಯಾಚರಣೆ ನಡೆಸಿ ದಂದೆಯನ್ನು ನಿಲ್ಲಸಲು ಶ್ರಮವಹಿಸಲು ಮುಂದಾಗಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link