ಬೆಂಗಳೂರು:
ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಮೂಗು ಮತ್ತು ಗಂಟಲ ದ್ವರದ ಮಾದರಿ ಸಂಗ್ರಹಿಸಿದ ಪರೀಕ್ಷೆಗಳನ್ನು ಶೀಘ್ರಗತಿಯಲ್ಲಿ ನಡೆಸಿ 2 ಗಂಟೆಗೊಳಗಾಗಿ ವೈದ್ಯಕೀಯ ಫಲಿತಾಂಶ ನೀಡುವುದರ ಕುರಿತು ಆರೋಗ್ಯ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸೋಂಕಿತರ ಶೀಘ್ರಪತ್ತೆಗೆ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುತ್ತಿದೆ. ಆ್ಯಂಟಿಜನ್ ಟೆಸ್ಟ್’ನಿಂದಾಗಿ ಪ್ರಯೋಗಾಲಯಗಳ ಮೇಲಿನ ಹೊರೆ ಕಡಿಮೆಯಾಗಿದೆ. ಸ್ವಾಬ್ ಪಡೆದ ಒಂದು ಗಂಟೆಯೊಳಗೆ ಪರೀಕ್ಷೆಗೊಳಪಡಿಸಿದರೆ, ನಂತರದ ಮತ್ತೊಂದು ಗಂಟೆಯಲ್ಲಿ ಫಲಿತಾಂಶ ಬರಲಿದೆ. ಲಕ್ಷಣ ರಹಿತ ವ್ಯಕ್ತಿಗಳಿಗೆ ಆ್ಯಂಟಿಜನ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಬಂದಲ್ಲಿ ಮತ್ತೊಮ್ಮೆ ಆರ್’ಟಿಪಿಸಿಆರ್ ಪರೀಕ್ಷೆ ನಡೆಸಬೇಕು ಎಂದು ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಶಿಸಿದ್ದಾರೆ.
ಕೋವಿಡ್ ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರು, ಹಿರಿಯ ನಾಗರಿಕರು,ಅಸವಸ್ಥಗೊಂಡವರಿಗೆ ಆ್ಯಂಟಿಜೆನ್ ಪರೀಕ್ಷೆ ನಡೆಸಲಾಗುವುದು. ಈ ಮೂಲಕ ಸೋಂಕು ಹರಡುವಿಕೆಯನ್ನು ತಡೆಗಟ್ಟಲಾಗುತ್ತದೆ. ಪ್ರಯೋಗಾಲಯಗಳು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳು ಪರೀಕ್ಷೆಯ ಫಲಿತಾಂಶವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ಪೋರ್ಟಲ್ ನಲ್ಲಿ ದಾಖಲಿಸಬೇಕು ಎಂದು ಎಚ್ಚರಿಸಿದ್ದಾರೆ.
ದಿನನಿತ್ಯದ ಪರೀಕ್ಷಾ ಸಾಮರ್ಥ್ಯವನ್ನು ಇದೀಗ 50,000ದಿಂದ 55,000ಕ್ಕೆ ಏರಿಕೆಯ ಮಾಡಲಾಗಿದೆ. ರಾಜ್ಯದಲ್ಲಿ 100 ಪ್ರಯೋಗಾಲಯಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಬ್ಯಾಕ್ಲಾಗ್ ಗಳನ್ನು ಇಟ್ಟುಕೊಳ್ಳದಂತೆ ಸೂಚಿಸಲಾಗಿದ್ದು, ಪ್ರಯೋಗಾಲಯಗಳಲ್ಲಿ ಸ್ವಯಂಚಾಲಿತ ಯಂತ್ರಗಳನ್ನು ಸ್ಥಾಪಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್ ಅವರು ಹೇಳಿದ್ದಾರೆ.
ಬ್ಯಾಕ್ಲಾಗ್ ಗಳಾಗಿರುವ ಸ್ಯಾಂಪಲ್ಸ್ ಗಳನ್ನು ಮುಂದಿನ 48 ಗಂಟೆಗಳೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಸೋಂಕಿತರು ಕಾಯುವ ಸಮಯವನ್ನು ಕಡಿಮೆ ಮಾಡಲು ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎರಡು ಗಂಟೆಗಳಲ್ಲಿ ಜನರಿಗೆ ವೈದ್ಯಕೀಯ ಫಲಿತಾಂಶ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನಲ್ಲಷ್ಟೇ ಇಲ್ಲದೆ ಎಲ್ಲಾ ಜಿಲ್ಲೆಗಳಲ್ಲೂ ಎರಡು ಗಂಟೆಗಳಲ್ಲಿ ವೈದ್ಯಕೀಯ ಫಲಿತಾಂಶ ನೀಡುವ ಕಾರ್ಯಗಳನ್ನು ಮಾಡಲಾಗುತ್ತದೆ. ಪ್ರತೀ ಸ್ವಯಂಚಾಲಿತ ಯಂತ್ರಗಳ ದರ ರೂ.40-55 ಲಕ್ಷವಾಗಲಿದ್ದು, ಪ್ರಸ್ತುತ ರಾಜ್ಯದಲ್ಲಿ ದೊಡ್ಡ ಪ್ರಯೋಗಾಲಯಗಳನ್ನು ಹೊಂದಿರುವ ನಿಮ್ಹಾನ್ಸ್ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜುಗಳಲ್ಲಿ ಈ ಯಂತ್ರಗಳಿದ್ದು, ಈ ಪ್ರಯೋಗಾಲಯಗಳಲ್ಲಿ ಎರಡು ಆರ್‌ಟಿ-ಪಿಸಿಆರ್ ಮತ್ತು ರಿಬೊನ್ಯೂಕ್ಲಿಯಿಕ್ ಆಸಿಡ್ (ಆರ್‌ಎನ್‌ಎ) ಹೊರತೆಗೆಯುವ ಯಂತ್ರಗಳಿವೆ. ಇದನ್ನು ಐದಕ್ಕೆ ಹೆಚ್ಚಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
