ಕೆ. ಅಯ್ಯನಹಳ್ಳಿಯಲ್ಲಿ ಗ್ರಾ,ಪಂ.ಯಿಂದ ದನದ ಕೊಟ್ಟಿಗೆ ತೆರವು

ಕೊಟ್ಟೂರು 

        ಕೊಟ್ಟೂರು ತಾಲೂಕು ಕೆ. ಅಯ್ಯನಹಳ್ಳಿಯ ಕೆ. ಉಮೇಶ ಅವರಿಗೆ ಸೇರಿದ್ದ ಎನ್ನಲಾದ ದನದ ಕೊಟ್ಟಿಗೆಯನ್ನು ಶುಕ್ರವಾರ ಗ್ರಾ.ಪಂ ಪಿಡಿಒ, ತಾಲೂಕು ಪಂಚಾಯ್ತಿ ಇಓ, ತಹಶೀಲ್ದಾರ್ ಹಾಗೂ ಪೋಲೀಸ್ ಸಿಬ್ಬಂದಿ ಜೆಸಿಬಿಯಿಂದ ತೆರವುಗೊಳಿಸಿದ್ದಾರೆ.

        ಈ ದನಕೊಟ್ಟಿಗೆ ಕಳೆದ ಹತ್ತು ವರ್ಷಗಳಿಂದ ನಮ್ಮ ವಶದಲ್ಲಿದೆ. ಈ ಜಾಗ ಪಂಚತಂತ್ರದಲ್ಲಿಯೂ ಸೇರಿದೆ. 2008ರಿಂದಲೂ ಈ ಜಾಗಕ್ಕೆ ಕಂದಾಯ ಹಾಗೂ ಅಭಿವೃದ್ದಿ ಶುಲ್ಕವನ್ನು ಪಂಚಾಯ್ತಿಗೆ ಕಟ್ಟಿದ್ದೇನೆ, ಖಾತನಕಲು ಇದೆ ಆದರೂ ನಮಗೆ ಯಾವುದೇ ಮಾಹಿತಿ ಇಲ್ಲದೆ ಕೊಟ್ಟಿಗೆಯನ್ನು ನೆಲ ಸಮ ಮಾಡಿದ್ದಾರೆ ಎಂದು ಕೆ. ಉಮೇಶ ತಮ್ಮ ಅಳಲನ್ನು ಪತ್ರಿಕೆಯೊಂದಿಗೆ ತೋಡಿಕೊಂಡರು.

       ಈ ಜಾಗದ ವ್ಯಾಜ್ಯಾ ಕೋರ್ಟನಲ್ಲಿದೆ. ಆದರೂ ಯಾವ ಕಾರಣಕ್ಕೆ ದನದ ಕೊಟ್ಟಿಗೆಯನ್ನು ನೆಲಸಮ ಮಾಡಿದರು ಎಂಬುದು ಅರ್ಥವಾಗುತ್ತಿಲ್ಲ. ನೆಲಸಮ ಮಾಡಲು ನಿಮ್ಮಲ್ಲಿ ಏನು ಆದೇಶ ಇದೆ ಎಂದು ಕೇಳಿದರೂ ಉತ್ತರಿಸದೆ. ಆದೇಶವನ್ನು ತೋರಿಸದೆ ನೆಲ ಸಮಮಾಡಿದ್ದಾರೆ ಎಂದು ಆರೋಪಿಸಿದರು.

       ತೆರವು ಕಾರ್ಯಚರಣೆಯಲ್ಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿ ಬಸಣ್ಣ, ತಹಶೀಲ್ದಾರ ಮಂಜುನಾಥ್, ಪೋಲೀಸ್ ಸಿಬ್ಬಂದಿ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link