ಕೋಮುವಾದಿ ಮತ್ತು ಬಂಡವಾಳ ಶಾಹಿ ಪಕ್ಷಗಳನ್ನು ಜನತೆ ದೂರವಿಡಬೇಕು

ಚಿಕ್ಕನಾಯಕನಹಳ್ಳಿ

          ಕೋಮುವಾದಿ ಮತ್ತು ಬಂಡವಾಳ ಶಾಹಿ ಪಕ್ಷಗಳನ್ನು ಜನತೆ ದೂರವಿಟ್ಟು ಕಾರ್ಮಿಕರ ಹಾಗೂ ಬಡವರ ಪರವಾಗಿ ಕೆಲಸ ಮಾಡುತ್ತಿರುವ ಭಾರತ ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುವಂತೆ ತುಮಕೂರು ಲೋಕಸಭಾ ಕ್ಷೇತ್ರದ ಭಾರತ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಎನ್.ಶಿವಣ್ಣ ಮನವಿ ಮಾಡಿದರು.

        ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಟ್ಟಣದಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕಾಗಿ 70ವರ್ಷಗಳಿಂದ ಹೋರಾಡುತ್ತಿರುವ ಭಾರತ ಕಮ್ಯೂನಿಷ್ಠ್ ಪಕ್ಷ ಆಗಿನಿಂದಲೂ ಕೂಲಿ-ಕಾರ್ಮಿಕರ, ಬಡವರ ಪರವಾಗಿ ಕೆಲಸ ಮಾಡುತ್ತಿದೆ ಎಂದ ಅವರು, ತುಮಕೂರು ಜಿಲ್ಲೆಯ ಲೋಕಸಭೆಯ ಚುನಾವಣೆಯಲ್ಲಿ ಎರಡೂ ಪಕ್ಷಗಳಿಂದ ಪ್ರತಿನಿಧಿಸುತ್ತಿರುವ ಜಿ.ಎಸ್.ಬಸವರಾಜುರವರು ಮಾತನಾಡಿದರೆ ಒಳ್ಳೆಯ ಶಬ್ದಗಳೇ ಬರುವುದಿಲ್ಲ ಹಾಗೂ ಕುಟುಂಬ ರಾಜಕಾರಣಕ್ಕೆ ಹೆಸರಾದ ದೇವೇಗೌಡರು ಮೊಮ್ಮನಿಗೆ ಅವಕಾಶ ಮಾಡಿಕೊಡಲು ಜಿಲ್ಲಾ ಜೆಡಿಎಸ್ ಪಕ್ಷದವರಿಗೆ ಟಿಕೆಟ್ ನೀಡದೆ ತಾವೇ ನಿಂತಿದ್ದಾರೆ ಎಂದು ಆರೋಪಿಸಿದರು.

          ತುಮಕೂರು ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ಜಾರಿ, ತೆಂಗು-ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರ, ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ, ಮಹಿಳೆಯರ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ದಿ, ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿ ಮಾಡುವುದು ಸೇರಿದಂತೆ ತುಮಕೂರಿನಲ್ಲಿ ಇಎಸ್‍ಐ ಆಸ್ಪತ್ರೆ, ಸ್ಥಾಪನೆ ಎಐಐಎಮ್‍ಎಸ್ ಘಟಕ ಸ್ಥಾಪನೆ, ಹೆಚ್‍ಎಎಲ್ ಹೆಲಕ್ಯಾಪ್ಟರ್ ವಿಭಾಗ ಶೀಘ್ರ ಅನುಷ್ಠಾನ ಮಾಡುವುದು ಸೇರಿದಂತೆ ಉದ್ಯೋಗ ಸೃಷ್ಠಿಗಾಗಿ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ತುಮಕೂರಿನಲ್ಲಿ ಸ್ಥಾಪಿಸುವುದು, ಕಟ್ಟಡ ಕಾರ್ಮಿಕ ಮತ್ತು ಇತರೆ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿ ಉಳಿಸುವುದು, ಕೇಂದ್ರದ ಯೋಜನೆಗಳಿಗೆ ದುಡಿಯುತ್ತಿರುವ 1ಕೋಟಿ ಮಹಿಳೆಯರನ್ನು ಕಾರ್ಮಿಕರು ಎಂದು ಪರಿಗಣಿಸಿ ಅವರಿಗೆ ಕಾನೂನು ಬದ್ದ ಸೌಲಭ್ಯಗಳನ್ನು ನೀಡುವ ಸಲುವಾಗಿ ಹೋರಾಟ ಮಾಡುವ ಭರವಸೆ ನೀಡಿದರು.

         ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಬಡವರ ಪರವಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ಭಾರತ ಕಮ್ಯೂನಿಷ್ಟ್ ಪಕ್ಷ ಹಾಗೂ ಶಿವಣ್ಣನವರ ಆಯ್ಕೆಯು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಆದರೆ ಕೂಲಿ-ಕಾರ್ಮಿಕರಿಗೆ, ಬಡವರ ಪರವಾದ ಕೆಲಸಗಳು ಸುಗಮವಾಗಿ ಆಗುತ್ತವೆ ಎಂದ ಅವರು, ಮತದಾರರು ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ರೈತ ಹಾಗೂ ಬಡವರ ಪರವಾದ ಭಾರತ ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ಶ್ರೀನಿವಾಸಮೂರ್ತಿ(ಗಾರೆ ಮೂರ್ತಣ್ಣ) ನಾಗರಾಜು, ರವಿಕುಮಾರ್(ಪಲ್ಲಕ್ಕಿ), ವಿಶ್ವನಾಥ್, ಸೇರಿದಂತೆ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link