ಹಗರಿಬೊಮ್ಮನಹಳ್ಳಿ
ರಾಜಕಾರಣಿಗಳ ಧೋರಣೆಗಳನ್ನು ಪ್ರಶ್ನಿಸದೇ ಒಪ್ಪಿಕೊಂಡಿದ್ದಕ್ಕಾಗಿ ಈ ಭಾಗದ ಜನರೂ ಹಿಂದುಳಿಯುವಿಕೆಗೆ ಕಾರಣ ಎಂದು ಹಡಗಲಿಯ ಜಿಬಿಆರ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್.ಎಸ್. ಪಾಟೀಲ್ ಅಭಿಪ್ರಾಯಪಟ್ಟರು.
ಪಟ್ಟಣದ ಜಿ.ವಿ.ಪಿ.ಪಿ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಆಂತರಿಕ ಗುಣಮಟ್ಟ ಭರವಸಾ ಕೋಶದ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಹೈದರಾಬಾದ್ ಕರ್ನಾಟಕ ಹಿಂದುಳಿಯಲು ದೀರ್ಘಾವಧಿಯ ಯೋಜನೆಗಳನ್ನು ರೂಪಿಸದಿರುವುದೇ ಕಾರಣ, ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಲ್ಪಕಾಲದ ಕಾರ್ಯಕ್ರಮಗಳ ಮೂಲಕ ಅಭಿವೃಧ್ಧಿಯ ಪಥ ತಲುಪಿಸುವಲ್ಲಿ ವಿಫಲರಾಗಿದ್ದು ಇದೇ ರೀತಿಯ ದಿರ್ಘಾವಧಿಯ ನೀರಾವರಿ ಯೋಜನೆ ಸೇರಿದಂತೆ ರೈಲ್ವೇ, ಕೈಗಾರಿಕಾ ಕ್ಷೇತ್ರಗಳಲ್ಲಿ ರೂಪಿಸಿದ್ದರೆ ಈ ಭಾಗವು ಅಬಿವೃಧ್ಧಿಯಲ್ಲಿ ಮುಂಚೂಣಿಯಲ್ಲಿರತಿತ್ತು ಹಾಗೂ ನಂಜುಂಡಪ್ಪ ವರದಿಯಲ್ಲಿನ ಅಂಕಿ-ಅಂಶಗಳ ಸೂಕ್ತ ರೀತಿಯಲ್ಲಿ ಜಾರಿಯಾಗಿದ್ದರೆ ಹಿಂದುಳಿಯುವ ಪ್ರಶ್ನೆ ಇರುತ್ತಿರಲಿಲ್ಲವೆಂದು ತಿಳಿಸಿದರು.
ಐಕ್ಯುಎಸಿ ಸಂಚಾಲಕರಾದ ಡಾ. ಹರಾಳು ಬುಳ್ಳಪ್ಪ ಮಾತನಾಡಿ ವಿಧ್ಯಾರ್ಥಿಗಳಿಗೆ ಉಪಯೋಗವಾಗುವಂತೆ ನಡೆಸಲಾಗುತ್ತಿರುವ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿವಿವಿಪಿ ಕಾಲೇಜು ಪ್ರಾಚಾರ್ಯ ಗುರುರಾಜ್ ವಹಿಸಿಕೊಂಡಿದ್ದರು. ಸಹಾಯಕ ಪ್ರಾಧ್ಯಾಪಕ ಯಮುನ ನಾಯ್ಕ್ ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಗಜೇಂದ್ರಿ ಸ್ವಾಗತಿಸಿದರು.
ಸಂಧರ್ಭದಲ್ಲಿ ಡಾ. ಸತೀಶ್‍ಪಾಟೀಲ್, ಡಾ. ಮಲ್ಲಿಕಾರ್ಜುನ ಎಂ. ,ವೀರೇಶ್ವರ ನಾಯ್ಕ್, ಡಾ. ಡಿ.ಬಿ. ಜ್ಯೋತಿ, ಸಂಧ್ಯಾ ಈ. , ರೀಟಾ ಕೆ. ಪ್ರೀತಿ, ವಸಂತ್ ಕುಮಾರ್, ಎ.ಎಂ. ಚಂದ್ರಮೌಳಿ, ಹೆಚ್.ಈಶಪ್ಪ ಸೇರಿದಂತೆ ವಿಧ್ಯಾರ್ಥಿಗಳು ಹಾಗೂ ಸಿಬ್ಬಂಧಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
