ಜಗಳೂರು
ಸಮಾಜದಲ್ಲಿ ಅಪರಾಧ ಚಟುವಟಿಕೆ ನಡೆಯುವ ಬಗ್ಗೆ ಸಾರ್ವಜನಿಕರು ಜಾಗೃತೆ ವಹಿಸಿ ಪೊಲೀಸ್ ಇಲಾಖೆ ಗೆ ಸಹಕಾರ ನೀಡಬೇಕು ಸಿಪಿಐ ಬಿ.ಕೆ.ಲತಾ ಹೇಳಿದರು.
ಪಟ್ಟಣದ ಮಹಾತ್ಮಗಾಂಧಿ ಬಸ್ ನಿಲ್ದಾಣದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಯುವಸಮೂಹ ಕಾನೂನು ಪರಿಪಾಲನೆಯ ಕಡೆಗೆ ಗಮನ ಹರಿಸಿ ಸಮಾಜದಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆ ತಡೆಯುವಂತರಾ ಗಬೇಕು ಎಂದರು.
ಅಪರಾದ ನಡೆಯುವ ಮುನ್ನವೇಜಾಗೃತಿ ಮೂಡಿಸುವ ಕಾರ್ಯಕ್ರಮವೇ ಅಪರಾದ ತಡೆ ಮಾಸಾಚರಣೆಯ ಮುಖ್ಯ ಉದ್ದೇಶವಾಗಿದೆ. ನಮ್ಮ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುವಂತಹ ಸಂಧರ್ಭ ದಲ್ಲಿ ಅಪರಿಚಿತ ವ್ಯಕ್ತಿಗಳು ನೀಡುವಂತಹ ತಿಂಡಿ ತಿನಿಸುಗಳನ್ನು ಸ್ವೀಕರಿಸಬಾರದು. ಒಂಟಿ ಪ್ರಯಾಣ, ಕಾಡು ಪ್ರದೇಶ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಿಸುವಂತಹ ವಿದ್ಯಾರ್ಥಿಗಳು ಜಾಗೃತರಾಗಿದ್ದು, ಪೋಷಕರು ಇಲ್ಲವೇ ನಂಬಿಕಸ್ಥ ಜನರ ಜೊತೆ ಪ್ರಯಾಣಿಸಬೇಕು ಎಂದರು.
ದೈವ ಮತ್ತು ದೇವರ ಪೂಜೆ ಅಂತ ವಂಚಿಸುವ ತಂಡಗಳ ಬಗ್ಗೆ ಮತ್ತು ಕಡಿಮೆ ದರದಲ್ಲಿ ಮನೆಯ ಸಾಮಾನು ಸರಬರಾಜು ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಬ್ಬ ಹರಿದಿನ ಮತ್ತು ಸಮಾರಂಭಗಳಿಗೆ ತೆರಳುವ ವೇಳೆ ಮಹಿಳೆಯರು ತಮ್ಮ ಆಭರಣಗಳನ್ನು ಪ್ರದರ್ಶನ ಮಾಡಬಾರದು. ಶಾಲೆಗೆ ತೆರಳುವ ಮಕ್ಕಳ ಬಗ್ಗೆ ಪೋಷಕರು ತಿಂಗಳಿಗೊಮ್ಮೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಬೇಕುಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂಧಿಗಳಾದ ನಟರಾಜ್, ರಮೇಶ್ ಸೇರಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ