ದಾವಣಗೆರೆ :
ಕಕ್ಕರಗೊಳ್ಳ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ರಾತ್ರಿ ಕೊಲೆಗೈದು, ಅತ್ಯಾಚಾರ ಎಸಗಿ, ಪ್ರಕರಣ ಬೆಳಕಿಗೆ ಬಂದಾಗ ಬೆಳಿಗ್ಗೆ ಗ್ರಾಮಸ್ಥರೊಂದಿಗೆ ಬಂದು ಏನೂ ಅರಿಯದಂತೆ ವರ್ತಿಸಿದ್ದ ಅದೇಗ್ರಾಮದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಕಕ್ಕರಗೊಳ್ಳ ಗ್ರಾಮದ ನಿವಾಸಿ, ಭತ್ತ ಕೊಯ್ಯುವ ಯಂತ್ರದ ಚಾಲಕನಾಗಿರುವ ಎಸ್.ರಂಗಸ್ವಾಮಿ ಅಲಿಯಾಸ್ ಕುಂಟ ರಂಗ(24 ವರ್ಷ) ಬಂಧಿತ ಆರೋಪಿಯಾಗಿದ್ದಾನೆ. ವೈನಿಕ ಉಪಕರಣ ಬಳಸಿ, ಸಿಸಿ ಕ್ಯಾಮೆರಾದ ದೃಶ್ಯಾವಳಿ, ಸ್ಥಳೀಯ ಮಾಹಿತಿದಾರರಿಂದ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಡಿಸಿಐಬಿ ಇನ್ಸಪೆಕ್ಟರ್ ಡಾ.ಎಸ್.ಕೆ.ಶಂಕರ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ಅಕ್ಟೋಬರ್ 9 ರ ಸಂಜೆ ಕಕ್ಕರಗೊಳ್ಳದ ಯುವತಿ ರಂಜಿತಾ ಎಂಬ ಯುವತಿ ದಾವಣಗೆರೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಮರಳಲು ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಆರೋಪಿ ರಂಗಸ್ವಾಮಿ ಊರಿಗೆ ಕರೆದೊಯ್ಯುವುದಾಗಿ ಹೇಳಿ, ಆಕೆಯನ್ನು ಬೈಕ್‍ನಲ್ಲಿ ಹತ್ತಿಸಿಕೊಂಡು ಕೇಂದ್ರೀಯ ವಿದ್ಯಾಲಯದ ಪಕ್ಕದ ನಿರ್ಜನ ಪ್ರದೇಶದ ಮೆಕ್ಕೆಜೋಳದ ಹೊಲವೊಂದಕ್ಕೆ ಬಲವಂತದಿಂದ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಆದರೆ, ಯುವತಿ ರಂಜಿತಾ ಇದಕ್ಕೆ ಆಸ್ಪದ ನೀಡದೇ, ಪ್ರತಿರೋಧ ಒಡ್ಡಿದ್ದಾಳೆ. ಆಗ ಕೂಪಿತನಾದ ರಂಗಸ್ವಾಮಿ ಆಕೆಯ ಹತ್ಯೆ ಮಾಡಿ, ಅತ್ಯಾಚಾರ ಎಸಗಿರುವುದಾಗಿ ವಿಚಾರಣೆಯ ವೇಳೆಯಲ್ಲಿ ಆರೋಪಿ ಒಪ್ಪಿಕೊಂಡಿದ್ದಾನೆಂದು ಅವರು ಮಾಹಿತಿ ನೀಡಿದರು.
ದಿನವೂ ಬಟ್ಟೆ ಅಂಗಡಿಯ ಕೆಲಸ ಮುಗಿಸಿಕೊಂಡು ಸಂಜೆ 7.30ರ ಹೊತ್ತಿಗೆ ಬರುತ್ತಿದ್ದ ರಂಜಿತಾ ಅಂದು ರಾತ್ರಿ ಆದರೂ ಮನೆಗೆ ಬಂದಿರಲಿಲ್ಲ.
ಹೀಗಾಗಿ ಆಕೆಯ ತಂದೆ ದ್ಯಾಮಪ್ಪ, ಸಹೋದರ ಚೇತನ್ ಅವರುಗಳು ದಾವಣಗೆರೆ, ಕಕ್ಕರಗೊಳ್ಳ ಸುತ್ತಮುತ್ತಲಿನ ಗ್ರಾಮಗಳಲ್ಲೂ ಹುಡುಕಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಆದರೆ, ಅ.10ರಂದು ಬೆಳಿಗ್ಗೆ ವಿಷ್ಣುಪಂಥ ಎಂಬ ಪರಿಚಯಸ್ಥರು ಡಾ.ಕರಿಬಸಪ್ಪನವರ ಹೊಲದ ಬಳಿ ರಂಜಿತಾಳ ಮೃತ ದೇಹನೋಡಿ ಫೋನ್ ಮಾಡಿ ವಿಷಯ ತಿಳಿಸಿದ್ದರು. ಆಗ ರಂಜಿತಾಳ ಪೋಷಕರು, ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದ ಸಂದರ್ಭದಲ್ಲಿ ಆರೋಪಿ ರಂಗಸ್ವಾಮಿ ಅಲಿಯಾಸ್ ಕುಂಟ ರಂಗ ಸಹ ಬಂದು ಏನೂ ಗೊತ್ತಿಲ್ಲದವನಂತೆ ವರ್ತಿಸಿದ್ದ.
ಘಟನೆಯ ಹಿನ್ನೆಲೆಯಲ್ಲಿ ಮೃತಳ ಕುಟುಂಬ ರಂಜಿತಾ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು.
ಇಡೀ ಪ್ರಕರಣದ ತನಿಖೆಗಾಗಿ ಹಾಗೂ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ತಂಡವು ಅತಿ ಸೂಕ್ಷ್ಮ ಪ್ರಕರಣ ಆಗಿದ್ದರಿಂದ ವೈನಿಕ ಉಪಕರಣ ಬಳಸಿ, ಸಿಸಿ ಕ್ಯಾಮೆರಾದ ದೃಶ್ಯಾವಳಿ, ಸ್ಥಳೀಯ ಮಾಹಿತಿದಾರರಿಂದ ಮಾಹಿತಿ ಸಂಗ್ರಹಿಸಿ, ಆರೋಪಿ ರಂಗಸ್ವಾಮಿ ಅಲಿಯಾಸ್ ಕುಂಟ ರಂಗನನ್ನು ಇನ್ಸಪೆಕ್ಟರ್ ಡಾ.ಶಂಕರ್, ಮಹಿಳಾ ಠಾಣೆ ಇನ್ಸಪೆಕ್ಟರ್ ನಾಗಮ್ಮ, ಗ್ರಾಮಾಂತರ ಠಾಣೆ ಎಸ್‍ಐ ಕಿರಣಕುಮಾರ ತಂಡದಲ್ಲಿದ್ದ ಸಿಬ್ಬಂದಿಗಳಾದ ಅಶೋಕ, ಕೆ.ಸಿ.ಮಜೀದ್, ರಾಘವೇಂದ್ರ, ಷಣ್ಮುಖ, ಸಿದ್ದೇಶ, ಧನರಾಜ, ಬಾಲರಾಜ, ಹನುಮಂತಪ್ಪ ಗೋಪನಾಳ, ಶಾಂತರಾಜ, ರಮೇಶ ನಾಯ್ಕ, ಚಾಲಕರಾದ ನಾಗರಾಜ, ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್, ರಮೇಶ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದು. ಇವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ, ಗ್ರಾಮಾಂತರ ಡಿಎಸ್ಪಿ ಮಂಜುನಾಥ ಕೆ.ಗಂಗಲ್, ಇನ್ಸಪೆಕ್ಟರ್‍ಗಳಾದ ಡಾ.ಎಸ್.ಕೆ.ಶಂಕರ್, ನಾಗಮ್ಮ, ಎಸ್‍ಐ ಕಿರಣಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ