ದಾವಣಗೆರೆ
ಜ.26 ರಂದು ಬೆಳಿಗ್ಗೆ 9 ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಆರ್ ಶ್ರೀನಿವಾಸ್ ಇವರು 70 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸುವರು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.
ಜಿಲ್ಲಾಡಳಿತ ವತಿಯಿಂದ ಜ.26 ರಂದು ಆಚರಿಸಲಿರುವ ಗಣರಾಜ್ಯೋತ್ಸವ ದಿನಾಚರಣೆ ಕುರಿತು ಚರ್ಚಿಸಲು ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಕರೆಯಲಾಗಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರದ ಎಲ್ಲಾ ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಅಂದು ಬೆಳಿಗ್ಗೆ 7-30 ಗಂಟೆ ಒಳಗೆ ಧ್ವಜಾರೋಹಣ ಮಾಡಿ ಬೆಳಿಗ್ಗೆ 8-30 ಗಂಟೆಯೊಳಗೆ ನಗರದ ಶಾಲಾ ಮಕ್ಕಳು ಅಧಿಕಾರಿಗಳು, ಚುನಾಯಿತಾ ಪ್ರತಿನಿಧಿಗಳು, ಸಾರ್ವಜನಿಕರು ಜಿಲ್ಲಾ ಕ್ರೀಡಾಂಗಣದಲ್ಲಿ ಸೇರುವರು.
ಧ್ವಜಾರೋಹಣ ಮತ್ತು ಇಳಿಸುವ ಜವಾಬ್ದಾರಿಯನ್ನು ಆರಕ್ಷಕ ವೃತ್ತ ನಿರೀಕ್ಷಕರು, ಸಶಸ್ತ್ರ ಮೀಸಲು ಪಡೆ ದಾವಣಗೆರೆ ಇವರಗೆ ವಹಿಸಲಾಯಿತು. ತೆರೆದ ಜೀಪು ಮತ್ತು ಅದರ ಅಲಂಕಾರದ ಜವಾಬ್ದಾರಿಯನ್ನು ಉಪ ಅಧೀಕ್ಷಕರು (ನಗರ) ಪೊಲೀಸ್ ಠಾಣೆ, ದಾವಣಗೆರೆ ಇವರಿಗೆ ವಹಿಸಲಾಯಿತು.
ವೇದಿಕೆ ನಿರ್ಮಾಣ, ಕುರ್ಚಿ, ಶಾಮಿಯಾನ ವಿದ್ಯುತ್/ ಪುಷ್ಪಾಲಂಕಾರ, ಧ್ವನಿವರ್ಧಕಗಖ ಅಳವಡಿಕೆ ಹಾಗೂ ಅಗತ್ಯ ಕೆಲಸ ಕಾರ್ಯಗಳನ್ನು ಪೂರೈಸುವಂತೆ ಆಯಕ್ತರು ಮಹಾನಗರ ಪಾಲಿಕೆ ಇವರಿಗೆ, ವೇದಿಕೆಯನ್ನು ಹೂವಿನಿಂದ ಅಲಂಕರಿಸುವ ಮತ್ತು ಹೂಗಿಡಗಳ ಕುಂಡಗಳಿಂದ ಅಲಂಕಾರ ಮಾಡುವ ಜವಾಬ್ದಾರಿಯನ್ನು ಉಪನಿರ್ದೇಶಕರು, ಜಿಲ್ಲಾ ತೋಟಗಾರಿಕೆ ಇಲಾಖೆ, ದಾವಣಗೆರೆ ಇವರಿಗೆ ವಹಿಸಲಾಯಿತು.
ವೇದಿಕೆ ನಿರ್ಮಾಣ:- ಕ್ರೀಡಾಂಗಣದಲ್ಲಿ ವೇದಿಕೆ ನಿರ್ಮಾಣ, ಶಾಮಿಯಾನ, ಧ್ವನಿವರ್ಧಕ, ಕಾರ್ಪೆಟ್ ಹೂವಿನಹಾರ ವಗೈರಗಳ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೆ.ಆರ್.ಐ.ಡಿ.ಎಲ್, ಮಹಾನಗರಪಾಲಿಕೆ, ನಿರ್ಮಿತಿ ಕೇಂದ್ರ ಇವರಿಗೆ ವಹಿಸಲಾಯಿತು.
ಆಹ್ವಾನ ಪತ್ರಿಕೆ ಮುದ್ರಣ: ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಯನ್ನು ಮುದ್ರಿಸುವ ವ್ಯವಸ್ಥೆಯನ್ನು ಉಪವಿಭಾಗಾಧಿಕಾರಿ, ವಿತರಿಸುವ ಜವಾಬ್ದಾರಿಯನ್ನು ತಹಶೀಲ್ದಾರ್ ಇವರಿಗೆ ವಹಿಸಲಾಯಿತು. ಸ್ವಚ್ಛತೆ ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಹಾನಗರ ಪಾಲಿಕೆ ಹಾಗೂ ಭೂಸೇನಾ ನಿಗಮಕ್ಕೆ ವಹಿಸಲಾಯಿತು.
ಸರ್ಕಾರಿ ಅಧಿಕಾರಿ/ನೌಕರರಿಗೆ ನೀಡಲಾಗುವ ಸರ್ವೋತ್ತಮ ಪ್ರಶಸ್ತಿ ಹಾಗೂ ಸನ್ಮಾನ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು. ಮಕ್ಕಳಿಗೆ ಸಿಹಿ ವಿತರಣೆ ಜವಾಬ್ದಾರಿಯನ್ನು ಆಹಾರ ಸರಬರಾಜು ಇಲಾಖೆಗೆ ವಹಿಸಲಾಯಿತು.
ಸರ್ಕಾರಿ ಕಟ್ಟಡಗಳ ಮೇಲೆ ಗಣರಾಜ್ಯೋತ್ಸವ ಪ್ರಯುಕ್ತ ವಿದ್ಯುತ್ ದೀಪಾಲಂಕಾರಕ್ಕೆ ಎಲ್ಲ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಗಣರಾಜ್ಯೋತ್ಸವ ದಿನಾಚರಣೆಯ ಸಂಪೂರ್ಣ ಉಸ್ತುವಾರಿಯನ್ನು ಅಪರ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಪಾಲಿಕೆ ಆಯುಕ್ತರು, ಪೊಲೀಸ್ ಉಪ ಅಧೀಕ್ಷಕರು ಇವರು ನಿರ್ವಹಿಸಬೇಕು ಎಂದು ತಿಳಿಸಿದ ಅವರು ಸಭೆಗೆ ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತಹಶೀಲ್ದಾರ್ ಸಂತೋಷ್‍ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
