ಮೈಸೂರು
ದಕ್ಷಿಣ ಭಾರತದಲ್ಲಿ ಕುಂಭಮೇಳ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿರುವ ತಿರಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಇಂದು 11ನೇ ಕುಂಭಮೇಳಕ್ಕೆ ಚಾಲನೆ ಸಿಕ್ಕಿದೆ.
ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಸನಾತನ ಧರ್ಮ, ಸಂಸ್ಕೃತಿಗಳ ತವರು ಉತ್ತರ ಭಾರತದ ಪ್ರಯಾಗ, ಹರಿದ್ವಾರ, ಉಜ್ಜಯಿನಿ, ನಾಸಿಕ ಭಾಗದ ನದಿ ಸಂಗಮ ಕ್ಷೇತ್ರದಲ್ಲಿ ಶತಮಾನಗಳಿಂದ ಕುಂಭಮೇಳ ಉತ್ಸವ ಆಚರಣೆಯಲ್ಲಿದೆ.
ಈ ಮೇಳಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಮೈಸೂರು : ತಿ.ನರಸೀಪುರ ಕುಂಭಮೇಳಕ್ಕೆ ಸಕಲ ಸಿದ್ಧತೆ ದೇವತೆಗಳು, ಅಸುರರ ನಡುವೆ ಸಮುದ್ರ ಮಥನ ನಡೆದ ವೇಳೆ ಕ್ಷೀರಸಾಗರದ ಗರ್ಭದಲ್ಲಿರುವ ಅಮೃತ ಕಳಶವನ್ನು ದೇವತೆಗಳ ವೈದ್ಯ ಧನ್ವಂತರಿ ಮೇಲೆತ್ತಿ ತರುವಾಗ ಅದನ್ನು ಅಪಹರಿಸಲು ಅಸುರರು ಯತ್ನಿಸುತ್ತಾರೆ. ಆಗ ಅಮೃತ ಬಿಂದು ಈ ಪುಣ್ಯ ಕ್ಷೇತ್ರಗಳಲ್ಲಿ ಬಿದ್ದಿತ್ತು ಎಂಬ ಪ್ರಥೀತಿ ಇದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








