ಹಾವೇರಿ :
ಪ್ರಸುತ ದಿನಗಳಲ್ಲಿ ಸಂವಿಧಾನದ ಬಗ್ಗೆ ಅವಹೇಳನಕಾರಿ ಹಾಗೂ ವಿಕೃತತೆ ಮಾಡುವ ಮನೋಭಾವನೆಯ ಹೆಚ್ಚಳಕ್ಕೆ ಖಂಡನೀಯ.ಶೋಷಿತರ, ಹಿಂದುಳಿದವರ ಹಾಗೂ ಎಲ್ಲ ವರ್ಗದ ಹಿತಾಸಕ್ತಿ ಕಾಯುವ ಕೆಲಸವನ್ನು ಸಂವಿಧಾನ ಮಾಡುತ್ತಿದೆ. ಎಲ್ಲರ ಪರವಾಗಿರುವ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಡಿಎಸ್‍ಎಸ್ ರಾಜ್ಯ ಸಮಿತಿ ರಾಜ್ಯ ಮುಖಂಡರಾದ ಸತ್ಯಾ ಭದ್ರಾವತಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶೋಷಿತರ ಸಾಂವಿಧಾನಿಕ ಭೂ ಕಾಯ್ದೆಗಳ ಸುಪ್ರೀಂ ಕೋರ್ಟ್ ವಿರುದ್ಧ ತೀರ್ಪುಗಳು ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಬೃಹತ್ ಕಾರ್ಯಕ್ರಮವನ್ನು ರಾಜ್ಯ ಡಿಎಸ್‍ಎಸ್ ಸಂಘಟನೆಯಿಂದ ಅಕ್ಟೋಬರ 31 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದೆ ಈ ಕುರಿತು ಜಿಲ್ಲಾ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಂವಿಧಾನಿಕ ಭೂ ಕಾಯ್ದೆಗಳ ಸುಪ್ರೀಂ ಕೋರ್ಟ್ ವಿರುದ್ಧ ತೀರ್ಪುಗಳು ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯ ಬಗ್ಗೆ ಚರ್ಚೆಯಾಗುತ್ತಿದ್ದು, ಅಕ್ಟೋಬರ 31 ರಂದು ಜಿಲ್ಲೆಯ ಪದಾಧಿಕಾರಿಗಳು, ಮುಖಂಡರು, ರಾಜ್ಯ ಮಟ್ಟದ ವಿಚಾರ ಸಂಕಿರಣ ಬೃಹತ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸುವಂತಾಗಬೇಕು ಎಂದರು.
ಡಿಎಸ್‍ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ ಶೋಷಿತರಿಗೆ ಸಂವಿಧಾನದಿಂದ ಬರುವಂತಹ ಸೌಲಭ್ಯಗಳನ್ನು ಸರ್ಕಾರಗಳು ಕಸಿದುಕೊಳ್ಳುವ ಹುನ್ನಾರ ಮಾಡುತ್ತಿರುವ ಈ ದಿನಗಳಲ್ಲಿ ಜಾಗೃತೆಯಿಂದ ಸಂವಿಧಾನ ಅರ್ಥ ಮಾಡಿಕೊಂಡು ಶೋಷಿತರ ಧ್ವನಿಯಾಗಿ ದಲಿತ ಸಂಘಟನೆಗಳು ಕೆಲಸ ಮಾಡಬೇಕಾಗಿದೆ. ಸಮಾನತೆ ಹರಿಕಾರ ಡಾ|| ಬಿ ಆರ್ ಅಂಬೇಡ್ಕರ್ ಹೇಳುವಂತೆ ಶಿಕ್ಷಣ ಸಂಘಟನೆ ಹಾಗೂ ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯಬೇಕು ಎಂಬ ಮಾತು ಜೀವನದಲ್ಲಿ ಅನ್ವಯಿಸಿಕೊಳ್ಳಬೇಕಾಗಿದೆ.
ಅಕ್ಟೋಬರ 31 ರಂದು ನಡೆಯುವ ವಿಚಾರ ಸಂಕಿರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಲು ತಿಳುವಳಿಕೆಯ ಕಾರ್ಯಕ್ರಮ ಎಂದು ಭಾವಿಸಿ ಎಲ್ಲ ಶೋಷಿತರ ಅಭಿವೃದ್ಧಿಗಾಗಿ ಸಜ್ಜಾಗಬೇಕಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಹಾಗೂ ಶಿವಮೊಗ್ಗ ಜಿಲ್ಲಾ ಸಂಚಾಲಕರಾದ ಚಿನ್ನಯ್ಯ. ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪೂರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ನಿಂಗಣ್ಣ ಕಡೂರ.,ನಿಂಗಪ್ಪ ನಿಂಬಕ್ಕನವರ. ವಕೀಲರಾದ ಮಹೇಶ ಹರಿಜನ.
ಮಂಜಪ್ಪ ಮರೋಳ, ಬಸಪ್ಪ ಮುಗಳಿ,ಪ್ರಶಾಂತ ತಿರಕಪ್ಪನವರ ದುರಗೇಶ ಗೋಣ್ಣೆಮ್ಮನವರ, ಪರಮೇಶ ಮಲ್ಲಮ್ಮನವರ, ಗುಡ್ಡಪ್ಪ ಚಿಕ್ಕಪ್ಪನವರ,ಬಸವರಾಜ ಕಾಳೆ.ಶವು ಮುದಿಮಲ್ಲನ್ಣನವರ.ದುರಗಪ್ಪ ಹರಿಜನ.ರಘು ಮಾಳಗಿ. ಮೈಲಪ್ಪ ದಾಸಪ್ಪನವರ, ಸಿದ್ದಪ್ಪ ಹರಿಜನ, ರಂಗಪ್ಪ ಮೈಲಮ್ಮನವರ, ಪರಶುರಾಮ ತಿಮಾಪೂರ.ರವಿ ಹುಣಸಿಮರದ, ರಾಜು ಹರಿಜನ.ಫಕ್ಕಿರೇಶ ಮುಗಕಮ್ಮನವರ. ನಿಂಗಪ್ಪ ಅಂಗೂರ.ಹನಮಂತ ಹರಿಜನ.ಸೇರಿದಂತೆ ಅನೇಕ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
