ದಲಿತರಿಗೆ ಅಧಿಕಾರವನ್ನು ಅನುಭವಿಸುವ ಅರ್ಹತೆ ಇಲ್ಲವೆ : ರಾಮಕೃಷ್ಣ

ತಿಪಟೂರು :

     ಜಿರೋಟ್ರಾಫಿಕ್ ಮಂತ್ರಿ ಎಂದು ಮೂದಲಿಸಿ ಅವರು ದಲಿತರೆಂದು ಗೌರವಕ್ಕೆ ಚ್ಯುತಿತರಲೆಂದೇ ಹತಾಶಭಾವನೆಯಿಂದ ಇಲ್ಲಸಲ್ಲದ ಹೇಳಿಕೆನೀಡುತ್ತಿರುವ ದಲಿತವಿರೋಧಿ ಮತ್ತು ಪಕ್ಷವಿರೋಧಿ ಚಟುವಟಿಕೆಯಲ್ಲಿ ಕೆ.ಎನ್.ರಾಜಣ್ಣನ ವಿರುದ್ದ ದಿನಾಂಕ:11-06-2019ರ ಮಂಗಳವಾರ ತುಮಕೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

      ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿ ಪತ್ರಿಕಾಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇಲ್ಲಿ ಪಕ್ಷಬೇದವನ್ನು ಮರೆತು ಎಲ್ಲಾ ದಲಿತರು ಸಭೆಸೇರಿದ್ದು ಒಬ್ಬ ದಲಿತ ಉನ್ನತಹುದ್ದೆಯಲ್ಲಿರುವುದನ್ನು ಸಹಿಸದೇ ಕೆಲವು ಪಟ್ಟಭದ್ರಹಿತಾಸಕ್ತಿಗಳು ಟೀರೋ ಟ್ರಾಫಿಕ್ ಮಂತ್ರಿ ಎಂದು ಮೂದಲಿಸುತ್ತಿರುವುದು ಮತ್ತು ಚುನಾವಣೆಯಲ್ಲಿ ತುಮಕೂರು ಜಿಲ್ಲಾಧ್ಯಕ್ಷ 10% ತೆಗೆದುಕೊಂಡು ಬಿ.ಜೆ.ಪಿ ಬೆಂಬಲಿಸಿದ್ದಾರೆಂದು ಹೇಳಿಕೆಯನ್ನು ನೀಡುತ್ತಿದ್ದು ಮತ್ತು ತುಮಕೂರಿನ ಕಾಂಗ್ರೆಸ್ ಕಛೇರಿಗೆ ಬಂದು ಉಪಮುಖ್ಯಮಂತ್ರಿ ಮತ್ತು ನನ್ನನ್ನು ಅಸಂವಿಧಾನಿಕ ಪದ ಬಳಸಿ ಅವ್ಯಾಚಶಬ್ದಗಳಿಂದ ನಿಂದಿಸಿದ್ದಲ್ಲದೇ ನನ್ನ ವಿರುದ್ದಮಾತನಾಡವವರ ನಾಲಿಗೆ ಸೀಳುತ್ತೇನೆಂದು ಧಮಕಿಹಾಕಿದ್ದು ಇವರ ವಿರುದ್ದ ನಾನೀಗಾಗಲೇ ಕೆ.ಪಿ.ಸಿ.ಸಿ ಮತ್ತು ಎ.ಐ.ಸಿ.ಸಿಗೆ ಮಾಜಿ ಕಾಂಗ್ರೇಸ್ ಶಾಸಕ ರಾಜಣ್ಣನನ್ನು ಪಕ್ಷದಿಂದ ಉಚ್ಛಾಟಿಸುವಂತೆ ವರದಿಯನ್ನು ಕಳುಹಿಸಿರುವದಾಗಿ ತಿಳಿಸಿದ ಅವರು ಇನ್ನು ನನ್ನ ವಿರುದ್ದ ರಾಜಣ್ಣ ಮತ್ತು ಅವನ ಮಗ ಜೂನ್ 6ರ ಸೋಮವಾರ ಅವರ ಸ್ವಜಾತಿ ಹೆಣ್ಣುಮಕ್ಕಳನ್ನು ಕಳುಹಿಸಿ ಪತ್ರಿಕಾಘೋಷ್ಟಿನಡೆಸಿ ನನ್ನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಮತ್ತು ಜೂನ್ 7ರ ಮಂಗಳವಾರ ನಮ್ಮ ಕೆಲವು ದಲಿತ ಸಮುದಾಯದವರಿಂದ ಪತ್ರಿಕಾಘೋಷ್ಟಿ ನಡೆಸಿ ನನ್ನ ಗೌರವಕ್ಕೆ ಚ್ಯುತಿತರಿಸುವಂತಹ ಕೆಲಸಮಾಡುವುದು ಇದು ನನ್ನ ವಿರುದ್ದ ಮಾಡುತ್ತಿರುವ ಷಡ್ಯಂತ್ರ ಎಂದು ತಿಳಿಸಿದರು.

      ಪರಮೇಶ್ವರ್ ವಿರುದ್ದ ನಾನು ಬಿತ್ತಿಪತ್ರಗಳನ್ನು ಅಂಟಿಸಿದ್ದೇನೆಂದು ದೂರಿದ್ದರು ಅದರ ಬಗ್ಗೆ ನಾನು ಪೋಲೀಸ್ ದೂರನ್ನು ನೀಡಿದ್ದು ತನಿಕೆ ನಡೆದಿದ್ದು ಸತ್ಯಾಸತ್ಯತೆ ಹೋರಬಿದ್ದ ನಂತರ ಯಾರು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದೆಂದು ತಿಳಿಯುತ್ತದೆ ಇದಕ್ಕಾಗಿ ನಾವು ಜುಲೈ 11 ರಂದು ಜಿಲ್ಲಾಕೇಂದ್ರ ತುಮಕೂರಿನಲ್ಲಿ ಸುಮಾರು 15 ರಿಂದ 20 ಸಾವಿರ ಪರಮೇಶ್ವರ್ ಅಭಿಮಾನಿಬಳಗ ಮತ್ತು ದಲಿತಪರ ಸಂಘಟನೆಗಳು ರಾಜಣ್ಣನವಿರುದ್ದ ಪತ್ರಿಭಟನೆಯನ್ನು ನಡೆಸಲಾಗುವುದೆಂದು ತಿಳಿಸಿದರು.

       ಇದೇ ಸಂದರ್ಭದಲ್ಲಿ ಮಾತನಾಡಿದ ತಿಪಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್ ಕಾಂತರಾಜು ಮಾತನಾಡಿ ಪಕ್ಷದ ಹಿರಿಯ ನಾಯಕರುಗಳೇ ಈ ರೀತಿಮಾಡುತ್ತಿದ್ದು ಎಲ್ಲರಿಗೂ ಇರಿಸುಮುರಿಸು ವಾತಾವರಣ ನಿರ್ಮಾಣವಾಗುತ್ತಿದ್ದು ಇದು ಪಕ್ಷಸಂಘಟನೆ ಹಿನ್ನಡೆಯಾಗುತ್ತಿದೆ ಎಂದು ಇಲ್ಲಿ ಪಕ್ಷಕ್ಕೆ ಯಾರು ಅವಶ್ಯಕತೆಯಲ್ಲ, ಎಲ್ಲರಿಗೂ ಬೆಳೆಯಲು ಪಕ್ಷವ್ಯಕವೆಂದು ತಿಳಿಸಿದ ಅವರು ಎಲ್ಲಾ ಪಕ್ಷಗಳಲ್ಲೂ ಒಳಜಗಳ ಇದ್ದದ್ದೇ ಆದರೆ ಅದನ್ನು 4 ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕೆಂದರು.

      ಪತ್ರಿಕಾಗೋಷ್ಟಿಯಲ್ಲಿ ವಾಲೆಚಂದ್ರ, ಕೆಂಚಮಾರಯ್ಯ, ತಿಪಟೂರು ತಾ.ಪಂ ಶಿವಸ್ವಾಮಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಮಾಜಿ ನಗರಸಭಾ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ್, ಎ.ಪಿ.ಎಂ.ಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap