2ಕೋಟಿ ರೂ ವೆಚ್ಚದ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ..!!

ದೋಡ್ಡೇರಿ

     ಸ್ಥಳೀಯ ಗ್ರಾಮ ಪಂಚಾಯಾತಿಯು ಕಾಂಗ್ರೆಸ್ ಪಕ್ಷದ ಬೆಂಬದಲ್ಲಿದ್ದರೂ ಸಹ ಕಳೆದ ವಿಧಾನ ಸಭೆಯ ಚುನಾವಣೆಯಲ್ಲಿ ಇಲ್ಲಿನ ಗ್ರಾಮಸ್ಥರು ಜೆಡಿಎಸ್ ಪಕ್ಷದ ಪರ ಮತ ಚಲಾಯಿಸಿ ಅತ್ಯಧಿಕ ಮತಗಳ ಆಂತರದಿಂದ ನನ್ನನ್ನು ಚುನಾಯಿಸಿದ್ದಾರೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು .

      ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಚಂದ್ರಗಿರಿ ಗ್ರಾಮದಲ್ಲಿ ಸುಮಾರು 2ಕೋಟಿ ರೂ ವೆಚ್ಚದ ಹನುಮನಹಳ್ಳಿ-ಬೊಮ್ಮರಸನಹಳ್ಳಿಯ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು. ಚುನಾವಣೆಯ ಸಂಧರ್ಭದಲ್ಲಿ ಗ್ರಾಮಸ್ಥರ ಮನವಿಯಂತೆ ಗ್ರಾಮಕ್ಕೆ ರಸ್ತೆ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದರ ಫಲವಾಗಿ ಇಂದೂ ಗ್ರಾಮದಿಂದ ರಾಜ್ಯದ ಗಡಿ ಭಾಗದವರೆಗೆ ರಸ್ತೆಗೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಇನ್ನೂ ಎರಡು ತಿಂಗಳಲ್ಲಿ ಗುಣಮಟ್ಟದ ರಸ್ತೆಯ ಕಾಮಗಾರಿಯನ್ನು ಗುತ್ತಿಗೆದಾರರು ಪೂರ್ಣಗೊಳಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಸರಕಾರದ ಅನುದಾನದಲ್ಲಿ ಹಂತ ಹಂತವಾಗಿ ಮತ್ತಷ್ಟೂ ಅಭಿವೃದ್ಧಿ ಪಡಿಸಲಾಗುವುದು ಎಂದರು.

      ಲೋಕಪಯೋಗಿ ಇಲಾಖೆಯ ಎಇಇ ತಿಪ್ಪೇಸ್ವಾಮಿ, ಗುತ್ತಿದಾರರಾದ ಎಸ್.ಆರ್. ರೇಣುಕಾಪ್ರಸಾದ್, ಆರ್‍ಎಸ್.ಆರಾಧ್ಯ, ಅನಿಲ್, ಮುಖಂಡರಾದ ತುಂಗೋಟಿ ರಾಮಣ್ಣ, ಶೈಲಿರವೀಶಾರಾಧ್ಯ, ವಿಜಯಕುಮಾರ್, ಮಾರುತಿ, ಹನುಮಂತೇಗೌಡ, ಹಾಗೂ ಗ್ರಾಮಸ್ಥರು ಮುಂತಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap