ತುರುವೇಕೆರೆ
ಉತ್ತರಪ್ರದೇಶದ ರಾಜ್ಯದ ಹತ್ರಾಸ್‍ನಲ್ಲಿ ಯುವತಿ ಮೇಲಿನ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲ್ಲೂಕು ಘಟಕದ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.
ಮಹಿಳೆಯರನ್ನು ಪೂಜನೀಯ ಸ್ಥಾನದಲ್ಲಿಟ್ಟಿರುವ ಜಗತ್ತಿನ ಏಕೈಕ ಭಾರತ ದೇಶದಲ್ಲಿ ಇಂತಹ ಕ್ರೂರ ಅವಮಾನವೀಯ ಘಟನೆಗಳು ಹೆಚ್ಛಾಗುತ್ತಿರುವುದು ಅತ್ಯಂತ ದುಃಖಕರ ಸಂಗತಿ. ಅತ್ಯಾಚಾರ ಮತ್ತು ಕಿರುಕುಳ ನೀಡಿದ ದುಷ್ಕರ್ಮಿಗಳಿಗೆ ತಕ್ಷಣವೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಿರಸ್ತೆದಾರ್ ಬಸವರಾಜುಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ತಾಲ್ಲೂಕು ಪ್ರಮುಖ್ ಎ.ಬಿ.ಶಶಿಕುಮಾರ್, ಗಣೇಶ್, ಉದ್ಭ್ಬವ್, ಕಾರ್ತಿಕ್, ಕಲ್ಲೇಶ್, ಉಲ್ಲಾಸ್, ಅಕ್ಷಯ್, ರಾಹುಲ್, ಚೇತನ್, ಪ್ರತೀಕ್, ಪುನೀತ್, ಜಯಂತ್, ಶಶಿಕುಮಾರ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
