ಎನ್.ಎಸ್.ಎಸ್ ಶಿಭಿರದ ಉದ್ಟಾಟನೆ

0
25

ಬರಗೂರು ;

   ನಮ್ಮ ಗ್ರಾಮದಲ್ಲಿ ಗ್ರಾಮ ಸ್ವಚ್ಚತೆ ಮಾಡಲು ಬಂದಿರುವ ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಗೆ ಗುದ್ದಲಿ,ಚಾಲಕೆ ಕೊಟ್ಟು ಸಹಕಾರಿಸುವ ಜೊತೆಗೆ ತಮ್ಮಗಳ ಸಹಕಾರ ಅತೀ ಮುಖ್ಯವಾಗುವುದು ಎಂದು ಗ್ರಾಮದ ಮುಖಂಡ ಗೋವಿಂದಪ್ಪ ಸಾರ್ವಜನಿಕರಿಗೆ ತಿಳಿಸಿದರು.

     ಸಿರಾ ತಾಲ್ಲೂಕು ಹುಲಿಕುಂಟೆ ಹೋಬಳಿಯ ಬರಗೂರು ಸಮೀಪದ ನಾರಗೊಂಡನಹಳ್ಳಿ ಗ್ರಾಮದಲ್ಲಿ ಬರಗೂರಿನ ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜಿನವತಿಯಿಂದ 2018-19ನೇ ಸಾಲಿನ ಎನ್.ಎಸ್.ಎಸ್ ಶಿಭಿರದ ಕಾರ್ಯಕ್ರಮದ ಉದ್ಟಾಟನೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು

      ಗ್ರಾಮದ ಜನರು ಶಿಬಿರದ ವಿದ್ಯಾರ್ಥಿಗಳಿಗೆ ಸೌಜನ್ಯತೆಯಿಂದ ವರ್ತಿಸಿ ಸಹಕರಿಸಿ, ಯಾವುದೇ ತೊಂದರೆ ಬಾರದೆ ಈ ಶಿಬಿರದ ಶ್ರೇಯೋಭಿವೃದ್ದಿ ಯಾದರೆ ನಮ್ಮ ಗ್ರಾಮಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಮನವಿ ಮಾಡಿದರು.ಬರಗೂರು ಜ್ಞಾನಜ್ಯೋತಿ ಪಪೂ ಕಾಲೇಜಿನ ಪ್ರಾಂಶುಪಾಲ ಡಿ.ಎನ್.ಪರಮೇಶ್‍ಗೌಡ ಮಾತನಾಡಿ ಗ್ರಾಮದಲ್ಲಿ ಉತ್ತಮವಾದ ಸಹಾಕಾರ ನೀಡುವ ಮೂಖೇನ ಶಿಬಿರಕ್ಕೆ ಉತ್ತೇಜನ ನೀಡಿದಂತಗಿದೆ ಎಂದರು

      ಜಿಪಂ ಸದಸ್ಯ ರಾಮಕೃಷ್ಣ ಕಾರ್ಯಕ್ರಮ ಉದ್ಟಾಟಿಸಿರು. ಉಮೇಶ್,ಶ್ರೀನಿವಾಸ್,ಮಹಾಲಿಂಗಪ್ಪ,ಮೂರ್ತಣ್ಣ, ಉಪನ್ಯಾಸಕರಾದ ಕೆಜಿ ಮಧು.ಅರುಣೋದಯ ಶಾಲೆಯ ಶಿಕ್ಷಕ ಷೇಕ್ ಮಹಮ್ಮದ್ ಆಲಿ, ಎಸ್‍ಡಿಎಂಸಿ ಅಧ್ಯಕ್ಷ ನಾಗರಾಜು, ಶಿಬಿರಾಧಿಕಾರಿ ಜಿ.ಎನ್.ಮೂರ್ತಿ,ಕೆಂಚೇಗೌಡ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here