ಹಾವೇರಿ :
ಆಧುನಿಕ ಜೀವನದ ಭರಾಟೆಯಲ್ಲಿ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕತಿ ಮತ್ತು ಸಂಸ್ಕಾರವನ್ನು ನೀಡುವುದನ್ನು ಮರೆಯುತ್ತಿರುವುದು ಕಳವಳಕಾರಿಯಾಗಿದೆ ಎಂದು ಗುರುಪಾದದೇವರಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು ವಿಷಾಧಿಸಿದರು.ನಗರದ ದಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಂಜೆ ಕಾರ್ಯಕ್ರಮದ ಸಾನಿದ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಬಾಲ್ಯದಲ್ಲಿ ಸರಿಯಾಗಿ ಸಂಸ್ಕಾರವನ್ನು ನೀಡದೇ ಇರುವುದರಿಂದ ಇಂದಿನ ಸಾಕ್ಷರದಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವುದನ್ನು ಎಂಬ ಭಾವನೆ ಮೂಡುತ್ತಿದೆ. ಶಾಂತಿ ನೆಮ್ಮದಿ, ಇವರಲ್ಲಿ ಕಡಿಮೆಯಾಗುತ್ತಿದೆ. ಹೀಗಾಗಿ ಮಕ್ಕಳನ್ನು ಬಾಲ್ಯದಿಂದಲೇ ಅವರಿಗೆ ಯೋಗ, ಧ್ಯಾನ ಇತ್ಯಾದಿಗಳಲ್ಲಿ ಭಾಗವಹಿಸಲು ಅವರನ್ನು ಪ್ರೇರೆಪಿಸಬೇಕು ಇದರಿಂದ ಅವರು ಸದೃಢವಾಗಿ ಬೆಳೆಯುತ್ತಾರೆ ಎಂದರು.
ಮಾತುಗಳನ್ನು ಆಡುವ ಮೊದಲು ನಾವು ಯಾವ ಶಬ್ಧ ಬಳಕೆ ಮಾಡುತ್ತಿದ್ದೇವೆ ಎಂಬುದರ ಅರಿವಿರಬೇಕು. ಸಮಯ ಪಾಲನೆ ತಿಳಿದಿರಬೇಕು. ಒಳ್ಳೆಯ ಚಿಂತನೆಗಳಿಂದ ಮನಸ್ಸನ್ನು ಕ್ರೀಯಾಶೀಲವಾಗಿಸಿಕೊಳ್ಳಬೇಕು. ಇವೆಲ್ಲವುಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಲಭಿಸುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಾಮಾನ ನೀಡಿದಾಗ ಮಾತ್ರ ದೇಶ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಎಲ್ಲಿ ಮಹಿಳೆಯನ್ನು ಪೂಜಿಸಲಾಗುತ್ತದೇಯೋ, ಎಲ್ಲಿ ಮಹಿಳೆಯನ್ನು ಆರಾಧಿಸಲಾಗುತ್ತದೆಯೋ ಅಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆ. ಅಲ್ಲಿ ಮಹಿಳೆ ಹಿಂಸಿಸಲ್ಪಡುತ್ತಾಳೋ ಅಲ್ಲಿ ರಾಕ್ಷಸರು ನೆಲೆಸುತ್ತಾರೆ ಎಂದ ಅವರು 12ನೇ ಶತಮಾನದ ಬಸವಾದಿ ಶಿವಶರಣರು ಸ್ಥಾಪಿಸಿದ ಅನುಭವ ಮಂಟಪದ ಸ್ಥಾಪನೆಯ ಆರಾಧನೆಯ ಮೇಲೆ ಡಾ. ಬಿ.ಆರ್. ಅಂಬೇಡ್ಕರ ರವರು ಭಾರತೀಯ ಸಂವಿಧಾನವನ್ನು ರಚನೆ ಮಾಡಿದ್ದರಿಂದ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವೆಂದು ಹೆಸರು ಪಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸುವರ್ಣಮ್ಮ ಪಾಟೀಲ್, ಇಂದು ಎಲ್ಲರೂ ಶಿವಧ್ಯಾನವನ್ನು ಶಿವಚಿಂತನೆಯನ್ನು ಮರೆತು ಎಲ್ಲವು ನನ್ನಿಂದಲೇ ನಡೆಯುತ್ತಿದೆ ಎಂಬ ಅಹಂಕಾರದಿಂದ ಮುನ್ನಡೆಯುತ್ತಿರುವುದು ಹಲವಾರು ಅನಾಹುತಕ್ಕೆ ಕಾರಣವಾಗುತ್ತಿದೆ. ಬಸವಾದಿ ಶಿವಶರಣರು ದೀನ ದುರ್ಬಲರ ಸೇವೆಯಲ್ಲಿ ದೇವರನ್ನು ಕಾಣಬೇಕೆಂದಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕು ಎಂದರು.
ಪ್ರ್ರಾಸ್ತಾವಿಕವಾಗಿ ದಾನಮ್ಮದೇವಿಯ ದೇವಸ್ಥಾನ ಟ್ರಸ್ಟ ಕಮಿಟಿಯ ಅಧ್ಯಕ್ಷೆ ಶೋಭಾ ಮಾಗಾವಿ ಮಾತನಾಡಿ, ದಾನಮ್ಮ ದೇವಿಯ ದೇವಸ್ಥಾನವು ಕೇವಲ ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೇ ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ರಾಜಶೇಖರ ಮಾಗಾವಿ, ಸಂಜೀವ ನೀರಲಗಿ, ಗಿರೀಶ ತುಪ್ಪದ, ಬೆಳೆಗಾಂವಪ್ಪ ಬೆಳಗಾಂವಿ, ಉಳಿವೆಪ್ಪ ಪಂಪಣ್ಣನವರ, ಶಿವಯೋಗೆಪ್ಪ ವಾಲಿಶೆಟ್ಟರ, ಮಲ್ಲಿಕಾರ್ಜುನ ಹಿಂಚಿಗೇರಿ, ಮುರಿಗೆಪ್ಪ ಕಡೆಕೊಪ್ಪ, ಶಿವಬಸಪ್ಪ ಮುದ್ದಿ, ಶಿವಬಸಪ್ಪ ನಂದಿವಾಡ, ಶಿವಬಸಪ್ಪ ಹಲಗಣ್ಣನವರ, ಸಿ.ಜಿ. ತೋಟಣ್ಣನವರ, ಮಲ್ಲಿಕಾರ್ಜುನ ಸಾತೇನಹಳ್ಳಿ, ಮಹಾಂತಪ್ಪ ಹಲಗಣ್ಣನವರ ಸೇರಿದಂತೆ ಟ್ರಸ್ಟ್ ಕಮಿಟಿಯ ಎಲ್ಲಾ ಸದಸ್ಯನೀಯರು ಸೇರಿದಂತೆ ಇತರರು ಹಾಜರಿದ್ದರು. ಇಂದುಧರ ಯರೇಶಿಮಿ ನಿರೂಪಿಸಿದರು. ಭಾರತಿ ಯಾವಗಲ್ ಪ್ರಾರ್ಥಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ