ಬಳ್ಳಾರಿ:
ಈ ಕಾರ್ಯಕ್ರಮವನ್ನು ವೇದಿಕೆಯ ಮೇಲೆ ಇರುವ ಗಣ್ಯರು, ಅತಿಥಿಗಳು, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗು ಸದಸ್ಯರು ಶೆಟ್ರ ಮರೆಮ್ಮನವರ ಭಾವಚಿತ್ರಕ್ಕೆ ಪುಷ್ಪವನ್ನು ಹಾಕುವ ಮೂಲಕ ಜೊತೆಗೆ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನೆರೆವೇರಿಸಿದರು. ಸ್ವಾಗತವನ್ನು ಉಪ ಪ್ರಾಚಾರ್ಯರು ಎಸ್. ಕೊಟ್ರೇಶ್ ಅವರು ವೇದಿಕೆಮೇಲೆಹಾಸಿನರಾಗಿರುವಂತ ಕೆ. ರಾಮನ ಗೌಡರು ( ಆಡಳಿತ ಮಂಡಳಿ ಅಧ್ಯಕ್ಷರು) ಖೇಣಿ ಎರ್ರಣ್ಣ, ಜಾನೆಕುಂಟೆ ಪಂಪನಗೌಡ, ಹೆಚ್. ಸದಾಶಿವ ಗೌಡ ಹಾಗು ದಾನಿಗಳು ನಿವೃತ್ತ ಶಿಕ್ಷಕರು ಕಪ್ಪಗಲ್ ತಿಪ್ಪೇಸ್ವಾಮಿ, ಪ್ರಾಚಾರ್ಯರು ಟಿ. ಎಂ. ಲಿಂಗರಾಜ್ ಪುಷ್ಟಕೊಡುವದರ ಮೂಲಕ ಸ್ವಾಗತ ಕೋರಿದರು.
ಪ್ರಾಸ್ತವಿಕ ನುಡಿಗಳನ್ನು ಪ್ರಾಚಾರ್ಯರಾದ ಟಿ. ಎಂ. ಲಿಂಗರಾಜ್‍ರವರು ಶಾಲೆ ಹುಟ್ಟಿದ ಪರಂಪರೆಯನ್ನು, ದಾನಿಗಳು ನೀಡಿದ ಕೊಡುಗೆಯನ್ನು ಮಕ್ಕಳಿಗೆ ತಿಳಿಸಿದರು.ನಮ್ಮ ಶಾಲೆ 75 ರ ಸಂಭ್ರಮವನ್ನು ಕಾಣುತ್ತಿದೆ ಎಂದು ಸವಿಸ್ತಾರವಾಗಿ ತಿಳಿಸಿದರು. ನಮ್ಮ ಕಾಲೇಜಿನ ಗಣಿತ ಉಪನ್ಯಾಸಕರಾದ ದೇವೇಂದ್ರಪ್ಪ ನವರಿಗೆ ಪಿ. ಹೆಚ್.ಡಿ. ಪದವಿಯನ್ನು ಪಡೆದಿರುವದರಿಂದ ಗೌರವ ಸನ್ಮಾನಮಾಡಲಾಯಿತು. ನಂತರ ದತ್ತಿ ಬಹುಮಾನದ ವಿತರಣೆಯನ್ನು ಜಿ. ಮಂಗಳ ಗೌರಿ ಸಹ ಶಿಕ್ಷಕಿ ಹಾಗು ಇತಿಹಾಸ ಉಪನ್ಯಾಸಕರಾದ ಓ. ವೆಂಕಟೇಶಪ್ಪ ನವರು ನೆರವೇರಿಸಿಕೊಟ್ಟರು.
10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿನಿಯರು ಎಸ್. ಮಾಧುರಿ ,ಸವಿತ, ಭುವನೇಶ್ವರಿ. ಕಾಲೇಜು ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿ ಲೋಕೇಶ್ ಈ. ಕೆ., ಅಂಬಿಕಾ.ಡಿ.ಗಾದಿಲಿಂಗಪ್ಪ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಕಿರುಕಾಣಿಕೆಯನ್ನು ವೇದಿಕೆಯ ಮೇಲಿನ ಗಣ್ಯರಿಂದ ನೀಡಲಾಯಿತು.
ವೇದಿಕೆಯ ಮೇಲೆ ಅಧ್ಯಕ್ಷತೆಯನ್ನುವಯಿಸಿದಂತಹ ಶಾಲಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ. ರಾಮನಗೌಡರು, ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ಅಂಕಪಡೆದು ಹಾಗು ಸಂಸ್ಥೆಗೆ ಕೀರ್ತಿತರಬೇಕೆಂದು ಅಧ್ಯಕ್ಷಿಯ ನುಡಿಗಳನ್ನು ಹೇಳಿದರು.
ಉಪನ್ಯಾಸಕರಾದ ಯು. ನಾಗಪ್ಪನವರು ಗಣ್ಯರಿಗು, ಅತಿಥಿಗಳಿಗು, ದಾನಿಗಳಿಗು, ಭೋದಕ ಹಾಗು ಭೋದಕೇತರ ವರ್ಗದವರಿಗೂ ವಂದನೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ