ದರ ಏರಿಕೆ ವಿರುದ್ಧ ರೈತರ ಪ್ರತಿಭಟನೆ

ಪಾವಗಡ :

      ರೈತರಿಗೆ ರಿಯಾಯಿತಿ ಧರದಲ್ಲಿ ವಿತರಣೆ ಮಾಡುವಾ ಬಿತ್ತನೆ ಶೇಂಗಾ ಧರವನ್ನು ಏಕಾಏಕಿ ಏರಿಕೆ ಮಾಡಿರುವುದನ್ನು ಖಂಡಿಸಿ ರೈತಸಂಘಗಳು ಹಾಗೂ ಸಂಘಸಂಸ್ಥೆಗಳು ಮುಖಂಡರು ಕೃಷಿ ಇಲಾಖೆಗೆ ಮುತ್ತಿಗೆ ಹಾಕಿದ ಘಟನೆ ಬುದವಾರ ನಡೆದಿದೆ.

      ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಅದ್ಯಕ್ಷರಾದ ಪೂಜಾರಪ್ಪ ಮಾತನಾಡಿ ತಾಲೂಕಿನಲ್ಲಿ ಸತತವಾಗಿ ಹಲವು ವರ್ಷಗಳಿಂದ ಬರತಾಂಡವಾಡುತ್ತಿದೆ ಶೇಂಗಾ ಬೆಳೆಯುವಾ ರೈತರ ಕ್ರಮೇಣ ತೀರ ಕಡಿಮೆಯಾಗುತ್ತಿದ್ದು ಅಲ್ಪಸ್ವಲ್ಪ ಬೆಳೆಯಲು ಮುಂದಾದ ರೈತರು ಬಿತ್ತನೆ ಶೇಂಗಾ ಖರೀದಿಗೆ ಮುಂದಾದ ಬೆನ್ನಲ್ಲೇ ಏಕಾಏಕಿ ಧರ ಹೆಚ್ಚಳ ಮಾಡಿರುವುದು ಖಂಡನೀಯ ಸರ್ಕಾರ ಮತ್ತೋಮ್ಮೆ ಪರಿಶೀಲಿಸಿ ಹಳೆಧರದಲ್ಲಿ ಬಿತ್ತನೆ ಶೇಂಗಾ ಬೀಜ ಮಾಡಮಾಡಬೇಕೆಂದು ಒತ್ತಾಯಿಸಿದರು.

       ಇದೇ ವೇಳೆ ತಾಲೂಕು ರೈತ ಸಂಘದ ಅದ್ಯಕ್ಷರಾದ ನರಸಿಂಹ್ಮರೆಡ್ಡಿ ಮಾತನಾಡಿ ಇಲಾಖೆ ರೈತರಿಗೆ ಒಂದು ಕೈಯಲ್ಲಿ ರಿಯಾಯಿತಿ ಎಂದು ದಿಡೀರನೆ ಬಿತ್ತನೆ ಶೇಂಗಾಬೀಜದ ಧರ ಹೆಚ್ಚಳ ಮಾಡಿದ್ದು ಹಳೆಧರದಲ್ಲಿ ಬಿತ್ತನೆ ಬೀಜ ಮಾರಾಟ ಮಾಡದ ಪಕ್ಷದಲ್ಲಿ ಇಲಾಖೆ ಮತ್ತು ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

       ರೈತರ ಮನವಿಗೆ ಸ್ಪಂದಿಸಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಹಳೆಧರ 30 ಕೆಜಿ 1320 ,ಸಾಮಾನ್ಯವರ್ಗಕ್ಕೆ 30 ಕೆಜಿಗೆ 1590 ರೂ ಆಗಿರುತ್ತದೆ ಹೋಸದರ ಪಜಾ.ಪಪ.ಕ್ಕೆ 30 ಕೆಜಿಗೆ 1530 ರೂ ಆಗಿದ್ದು ,ಸಾಮಾನ್ಯರಿಗೆ 1820 ರೂ ಆಗಿರುತ್ತದೆ ರೈತರ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಸರ್ಕಾರದ ನಿದರ್ಶನದಂತೆ ಮಾರಾಟ ಮಾಡಲಾಗುವುದೆಂದ ಅವರು ಕಸಬಾ ಮತ್ತು ಪಳವಳ್ಳಿಯಲ್ಲಿ ಮಾತ್ರ ಹಳೆ ಸ್ಟಾಕ್ ಇದ್ದು ಹಳೆದರದಲ್ಲಿ ಮಾರಾಟ ಮಾಡಲು ಸೂಚಿಸಲಾಗಿದೆ ಎಂದರು.

     ತಹಶೀಲ್ದರ್ ವರದರಾಜು ಮಾತನಾಡಿ ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ದರನಿಗದಿ ಮಾಡಲಾಗುವುದು ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ ಸೀಗುವಾ ಶೇಂಗಾ ಆಕ್ರಮ ಮಾರಾಟದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದೆಂದರು.

      ಈ ಸಂದರ್ಭದಲ್ಲಿ ರೈತ ಸಂಘದ ಪದಾದಿಕಾರಿಗಳಾದ ಕರಿಯಣ್ಣ ,ವಳ್ಳೂರು ನಾಗೇಶ್ ,ಸದಾಶಿವಪ್ಪ ಹಾಗೂ ಇತರೆ ರೈತರು ಉಪಸ್ಥಿರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap