ಗುಬ್ಬಿ ಪಟ್ಟಣದಲ್ಲಿ ವೈಭವದ ದಸರಾ ಹಬ್ಬ ಆಚರಣೆ

ಗುಬ್ಬಿ

         ವಿಜಯ ದಶಮಿ ಉತ್ಸವದ ಅಂಗವಾಗಿ ಪಟ್ಟಣದ ಶ್ರೀಬೇಟೆರಾಯಸ್ವಾಮಿ, ಶ್ರೀರಾಮಲಿಂಗೇಶ್ವರಸ್ವಾಮಿ ದೇವರುಗಳನ್ನು ಮೆರವಣಿಗೆ ಮೂಲಕ ಕರೆತಂದು, ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದ ಉಪ್ಪರಿಗೆ ಸಮೀಪ ಬನ್ನಿ ಮರಕ್ಕೆ ಸಾಂಪ್ರದಾಯಿಕ ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ ಪೂಜೆಗೈಯ್ಯುವ ಮೂಲಕ ವಿಜಯ ದಶಮಿಯನ್ನು ಅತ್ಯಂತ ವೈಭವಯುತವಾಗಿ ನಡೆಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಪಟೇಲ್ ಕೆಂಪೇಗೌಡ, ಕಂದಾಯ ನಿರೀಕ್ಷ ರಮೇಶ್ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಭಕ್ತಾದಿಗಳು ಭಾಗವಹಿಸಿದ್ದರು.

          ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯ, ಶ್ರೀಗ್ರಾಮದೇವತೆ ಅಮ್ಮನವರ ದೇವಾಲಯ, ಜೈನ ದೇವಾಲಯ, ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಾಲಯ, ಶ್ರೀಕೋಟೆ ಆಂಜನೇಯಸ್ವಾಮಿ ದೇವಾಲಯ ಮತ್ತು ಶ್ರೀಬೇಟೆ ರಾಯಸ್ವಾಮಿ ದೇವರುಗಳಿಗೆ ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ ವಿಶೇಷ ಪೂಜೆ ಸಲ್ಲಿಸಿದರು.

         ನವರಾತ್ರಿ ಅಂಗವಾಗಿ ತಾಲ್ಲೂಕಿನ ನಿಟ್ಟೂರು, ಕಡಬ, ಕಿಟ್ಟದಕುಪ್ಪೆ ಸೇರಿದಂತೆ ಹಲವು ಗ್ರಾಮದಲ್ಲಿ ವಿಜಯ ದಶಮಿ ಪೂಜಾ ಕಾರ್ಯಕ್ರಮಗಳನ್ನು ವೈಭವಯುತವಾಗಿ ನಡೆಸಲಾಯಿತು. ಗ್ರಾಮದ ದೇವರುಗಳನ್ನು ವಿವಿಧ ಹೂಗಳಿಂದ ಸಿಂಗರಿಸಿ ಮೆರವಣಿಗೆ ನಡೆಸುವ ಮೂಲಕ ವಿಜಯದಶಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link