ದಸರಾ ಉತ್ಸವ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ :ಸುಧಾಮೂರ್ತಿ

ಬೆಂಗಳೂರು

     ನಾಡ ಹಬ್ಬ ಮೈಸೂರು ದಸರಾ ಉತ್ಸವ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ ಎಂದು ಇನ್ಪೋಸಿಸ್ ಪೌಂಡೇಷನ್ ಮುಖ್ಯಸ್ಥೆ ಹಾಗೂ ದಸರಾ ಉತ್ಸವ ಉದ್ಘಾಟಕರಾಗಿರುವ ಸುಧಾಮೂರ್ತಿ ಹೇಳಿದ್ದಾರೆ.

      ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಪ್ರತಿಯೊಂದು ರಾಜ್ಯಕ್ಕೂ ಅವರದೇ ಆದ ಐತಿಹಾಸಕ ಪರಂಪರೆಯಿದ್ದು, ಅದೇ ರೀತಿ ದಸರಾ ಉತ್ಸವ ಕೂಡ ನಮ್ಮ ರಾಜ್ಯದ ಐತಿಹಾಸಕ ಪರಂಪರೆಯನ್ನು ದೇಶಕ್ಕೆ ತೋರಿಸಿ ಕೊಡುವ ಮಹಾನ್ ಹಬ್ಬವಾಗಿದೆ ಎಂದು ತಿಳಿಸಿದರು.

       ಈ ಭಾರಿ ದಸರಾ ಉತ್ಸವ ಉದ್ಘಾಟನೆಗೆ ತಮ್ಮನ್ನು ರಾಜ್ಯ ಸರ್ಕಾರ ಆಹ್ವಾನಿಸಿರುವುದು ಅತ್ಯಂತ ಖುಷಿ ತಂದಿದೆ. ಮೈಸೂರು ಮಹಾರಾಜರು ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕ ಎಂಬುದು ಒಂದೇ ನಾವೆಲರೂ ಮೂಲತಃ ಕನ್ನಡಿಗರಾಗಿದ್ದು, ಅಖಂಡ ಕರ್ನಾಟಕವನ್ನು ವಿಭಜಿಸುವುದು ಸರಿಯಲ್ಲ ಎಂದು ಸುಧಾಮೂರ್ತಿ ಅಭಿಪ್ರಾಯಪಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link