ಹುಳಿಯಾರು
ಹುಳಿಯಾರು ಹೊಬಳಿಯ ದಸೂಡಿ ಗ್ರಾಪಂನ ಮಾರುತಿ ಬಡಾವಣೆಯ ಹೈಸ್ಕೂಲ್ ರಸ್ತೆಯ ಅರಳಿ ಮರದ ಬಳಿ ಕುಡಿಯುವ ನೀರಿನ ಪೈಲ್ ಹೊಡೆದಿದೆ. ಈ ಪೈಪ್ ಚರಂಡಿ ಒಳಗೆ ಹಾದು ಹೋಗಿದ್ದು ಚರಂಡಿಯ ಕೊಳಚೆ ನೀರು ಈ ಪೈಪ್ ಮೂಲಕ ನಲ್ಲಿಗಳಿಂದ ಮನೆಗಳಿಗೆ ಹೋಗುತ್ತಿದೆ ಎಂದು ಸ್ಥಳೀಯರ ಆರೋಪಿಸಿದ್ದರು.
ಅಲ್ಲದೆ ಮೊದಲೇ ನೀರಿಗೆ ಹಾಹಾಕಾರವಿದ್ದು ಪೈಪ್ ಒಡೆದು ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತಿದ್ದರೂ ಗ್ರಾಪಂ ನಿರ್ಲಕ್ಷ್ಯತೆ ತಾಳಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಇದರಿಂದ ಗ್ರಾಪಂ ಸೇರಿದಂತೆ ಆರೋಗ್ಯ ಇಲಾಖೆ ಸಹ ಎಚ್ಚೆತ್ತೆಕೊಂಡು ದುರಸ್ಥಿ ಮಾಡಿ ಶುದ್ಧ ಹಾಗೂ ಸಮರ್ಪಕ ನೀರು ಪೂರೈಕೆಗೆ ಮುಂದಾಗಿದೆ.
ಸ್ಥಳೀಯರು ಆರೋಪ ಮಾಡಿದಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಚರಂಡಿ ಒಳಗೆ ಹಾದು ಹೋಗಿದ್ದ ಪೈಪ್ ಹೊಡೆದಿರುವುದು ದೃಢವಾಯಿತು. ಅಲ್ಲದೆ ಇದೇ ಪೈಪ್ ಇನ್ನೊಂದು ಕಡೆಯೂ ಸಹ ಹೊಡೆದಿತ್ತು. ಹಾಗಾಗಿ ಹೊಡೆದಿರುವ ಪೈಪ್ ದುರಸ್ಥಿ ಮಾಡುವ ಬದಲು ಇಡೀ ಪೈಪ್ ಬದಲಾಯಿಸಿ ಹೊಸ ಪೈಪ್ ಅಳವಡಿಸಲಾಯಿತು ಎಂದು ಆರೋಗ್ಯ ಇಲಾಖೆಯ ವೆಂಟಕರಾಮಯ್ಯ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ರಂಗಮ್ಮ ಅವರ ಪತಿ ಮರಿಯಪ್ಪ ಸಹ ಪೈಪ್ ಹೊಡೆದಿರುವ ಬಗ್ಗೆ ನನಗೆ ಮೊದಲೇ ಮಾಹಿತಿ ಕೊಟ್ಟಿದ್ದರೆ ನಾನೇ ಖುದ್ದು ಹೋಗಿ ಸರಿಪಡಿಸುತ್ತಿದ್ದೆ. ಆದರೆ ಪೇಪರ್ಗೆ ಹಾಕಿಸಿರುವುದರಿಂದ ಚೆನ್ನಾಗಿ ಕೆಲಸ ಮಾಡುವ ನಮ್ಮ ಬಗ್ಗೆ ಜಿಲ್ಲೆಯ ಜನತೆಗೆ ಕೆಟ್ಟ ಅಭಿಪ್ರಾಯ ಬರುತ್ತದೆ. ಆದರೂ ಪತ್ರಿಕೆಯಲ್ಲಿ ಬಂದಿರುವುದು ನಮ್ಮನ್ನು ಎಚ್ಚರಿಸಿದಂತ್ತಾಗಿದ್ದು ಪೈಪ್ ದುರಸ್ಥಿಯ ಜೊತೆಗೆ ಕೊಳಚೆ ನಿಂತಿದ್ದ ಚರಂಡಿಯನ್ನೂ ಸಹ ಕ್ಲೀನ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.ದುರಸ್ತಿ ಸಂದರ್ಭದಲ್ಲಿ ಗ್ರಾಪಂ ಸದಸ್ಯ ದೇವರಾಜು, ಆಶಾ ಕಾರ್ಯಕರ್ತರಾದ ಲಕ್ಷ್ಮೀದೇವಮ್ಮ, ಲಲಿತಮ್ಮ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








