ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯದಲ್ಲಿ ದಾವಣಗೆರೆಗೆ 9ನೇ ಸ್ಥಾನ

ದಾವಣಗೆರೆ

    2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯು ಶೇ.85.94 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ 9ನೇ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

     ಕಳೆದ ಸಾಲಿನಲ್ಲಿ ಅಂದರೆ, 2017-18ನೇ ಸಾಲಿನಲ್ಲಿ ಜಿಲ್ಲೆಯು ಶೇ.81.56 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ 15ನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ 4.38 ರಷ್ಟು ಹೆಚ್ಚು ಫಲಿತಾಂಶ ಪಡೆಯುವ ಮೂಲಕ 15ನೇ ಸ್ಥಾನದಿಂದ 9ನೇ ಸ್ಥಾನಕ್ಕೆ ನೆಗೆದಿದ್ದು, ಜಿಲ್ಲೆಯು ಉತ್ತಮ ಸಾಧನೆ ಮಾಡಿದೆ.

ಕ್ಷೇತ್ರವಾರು ಫಲಿತಾಂಶ:

     ಹರಪನಹಳ್ಳಿ ಶೈಕ್ಷಣಿಕ ಕ್ಷೇತ್ರದಲ್ಲಿ ಪರೀಕ್ಷೆ ಬರೆದಿದ್ದ 1,607 ಬಾಲಕರು, 1,711 ಬಾಲಕಿಯರು ಸೇರಿದಂತೆ ಒಟ್ಟು 3318 ವಿದ್ಯಾರ್ಥಿಗಳ ಪೈಕಿ 1,423 ಬಾಲಕರು, 1,541 ಸೇರಿದಂತೆ ಒಟ್ಟು 2,964 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.89.33 ಫಲಿತಾಂಶ ಲಭಿಸಿದೆ.

    ಜಗಳೂರು ಕ್ಷೇತ್ರದಲ್ಲಿ 1,054 ಬಾಲಕರು, 992 ಬಾಲಕಿಯರು ಸೇರಿದಂತೆ ಒಟ್ಟು 2046 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 902 ಬಾಲಕರು, 907 ಬಾಲಕಿಯರು ಒಟ್ಟು 1,809 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಶೇ.88.42 ರಷ್ಟು ಫಲಿತಾಂಶ ದೊರೆತಿದೆ. ಇನ್ನೂ ಹರಿಹರದಲ್ಲಿ 1,512 ಬಾಲಕರು, 1,563 ಬಾಲಕಿಯರು ಸೇರಿದಂತೆ ಒಟ್ಟು 3,075 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1,272 ಬಾಲಕರು, 1,419 ಬಾಲಕಿರಯರು ಸೇರಿ ಒಟ್ಟು 2,691 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.87.51 ಫಲಿತಾಂಶ ಪಡೆದಿದ್ದಾರೆ.

    ಹೊನ್ನಾಳಿಯಲ್ಲಿ 1276 ಬಾಲಕರು, 1481 ಬಾಲಕಿಯರು ಸೇರಿದಂತೆ ಒಟ್ಟು 2,757 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 1089 ಬಾಲಕರು, 1323 ಬಾಲಕಿಯರು ಸೇರಿದಂತೆ ಒಟ್ಟು 2412 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಹೊನ್ನಾಳಿ ಕ್ಷೇತ್ರ ಶೇ.87.49 ಫಲಿತಾಂಶ ಪಡೆದಿದೆ.

     ಇನ್ನೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2788 ಬಾಲಕರು, 2852 ಬಾಲಕಿಯರು ಸೇರಿದಂತೆ ಒಟ್ಟು 5640 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 2,366 ಬಾಲಕರು, 2512 ಬಾಲಕಿಯರು ಒಟ್ಟು 4878 ವಿದ್ಯಾರ್ಥಿಗಳು ಉತ್ತೀರ್ಣರಾದ್ದು, ಶೇ.86.49 ಫಲಿತಾಂಶ ಲಭಿಸಿದೆ. ಇನ್ನೂ ದಾವಣಗೆರೆ ಉತ್ತರದಲ್ಲಿ 1535 ಬಾಲಕರು, 1555 ಬಾಲಕಿಯರು ಸೇರಿದಂತೆ 3090 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1275 ಬಾಲಕರು, 1345 ಬಾಲಕಿಯರು ಒಟ್ಟು 2620 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 84.79 ಹಾಗೂ ಚನ್ನಗಿರಿಯಲ್ಲಿ 1749 ಬಾಲಕರು, 1882 ಬಾಲಕಿಯರು ಸೇರಿದಂತೆ ಒಟ್ಟು 3631 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1349 ಬಾಲಕರು, 1602 ಬಾಲಕಿಯರು ಒಟ್ಟು 2951 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 81.27 ಫಲಿತಾಂಶ ಬಂದಿರುತ್ತದೆ.

     ಜಿಲ್ಲೆಯ 29 ಸರ್ಕಾರಿ, 7 ಅನುದಾನಿತ ಮತ್ತು 24 ಅನುದಾನರಹಿತ ಪ್ರೌಢಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ಡಿಡಿಪಿಐ ಪರಮೇಶ್ವರಪ್ಪ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap