ಕೊಟ್ಟೂರು
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಲೋಕೋಪಯೋಗಿ, ಲ್ಯಾಂಡ್ ಆರ್ಮಿ ಇಲಾಖೆ ಹಗಲು ದರೋಡೆ ನಡೆಸುತ್ತಿದೆ ಎಂದು ಲೋಕ ಸಭಾ ಸದಸ್ಯೆ ವೈ. ದೇವೆಂದ್ರಪ್ಪ ಕಿಡಿ ಕಾರಿದರು.ಕೊಟ್ಟೂರು ಪಟ್ಟಣ ಮತ್ತು ತಾಲೂಕಿನ ವಿವಿಧ ಕಾಮಗಾರಿಗಳನ್ನು ಶನಿವಾರ ವೀಕ್ಷೀಸಿದ ಅವರು, ರಸ್ತೆ ಕಾಮಗಾರಿಗಳನ್ನು ಪರೀಶಿಲಿಸಿ ಕಳೆಪೆಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಗಾಂಧಿ ಸರ್ಕಲ್ ನಿಂದ ಉಜ್ಜಿನಿ ಸರ್ಕಲ್ ತನಕದ ನಡುವೆ ರಸ್ತೆ ನಿರ್ಮಾಣಕ್ಕೆ 1.42 ಕೋಟಿ ರು. ಅನುದಾನ ಮಂಜೂರಾಗಿದ್ದು, ರಸ್ತೆ ಸಂಪೂರ್ಣ ಕೆಟ್ಟಿಲ್ಲ. ಮೇಲಾಗಿ ಕೆಲವು ಕಡೆ ಸಣ್ಣ ಮಟ್ಟದ ರಿಪೇರಿಮಾಡಿದರೂ ಸಾಕು. ಇಲ್ಲಿ ವ್ಯರ್ಥವಾಗಿ ಹಣ ಪೊಲಾಗುವುದನ್ನು ಸಹಿಸುವುದಿಲ್ಲ ಎಂದರು.
ಇದೇ ಅನುದಾನವನ್ನು ಪಟ್ಟಣದಲ್ಲಿ ರಸ್ತೆ ಆಗದೇ ಇರುವ ಕಡೆ ವರ್ಗಾಹಿಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದು, ಆವರು ಈ ಕಾಮಗಾರಿಯನ್ನು ನಿಲ್ಲಿಸಲು ಆದೇಶಿಸಿದ್ದಾರೆ ಎಂದರು.ನಂತರ ಪಟ್ಟಣ ಮುದುಕನಕಟ್ಟೆ ರಸ್ತೆ ಡಾಂಬರಿಕರಣ ವೀಕ್ಷೀಸಿದ ಅವರು, ಡಾಂಬರ್ ರಸ್ತೆ ಮೇಲೆ ಪುನ: ಡಾಂಬರ್ ಹಾಕಿರುವುದು ಸಮಂಜಸವಲ್ಲ ಎಂದರು.
ಕೊಟ್ಟೂರು ಇಟಿಗಿ ಮಾರ್ಗದ ರಸ್ತೆಯಿಂದ ಸಂಗಮೇಶ್ವರಕ್ಕೆ ರಸ್ತೆ ಅಭಿವೃದ್ದಿಗೆ ವಿಶೇಷ ಅಭಿವೃದ್ದಿ ಯೋಜನೆಯಲ್ಲಿ 1.98 ಕೋಟಿ. ರು. ಅನುದಾನದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡು ಕೇವಲ 24 ದಿನಗಳಲ್ಲಿ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿರುವುದನ್ನು ವೀಕ್ಷೀಸಿ ಕೆಂಡಾಮಂಡಲವಾದ ಎಂ.ಪಿ. ದೇವೆಂದ್ರಪ್ಪ, ತಕ್ಷಣ ಇಂಜಿನಿಯರ್ ಸೋಮಣ್ಣ ಅವರನ್ನು ತರಾಟೆ ತೆಗೆದುಕೊಂಡು ಮತ್ತೊಮ್ಮೆ ರಸ್ತೆ ನಿರ್ಮಾಣವಾಗಲೇ ಬೇಕು ಅಲ್ಲಿಯ ತನಕ ಬಿಡುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ಇಟಗಿ ಕೊಟ್ಟೂರು ರಸ್ತೆ 3 ಕಿ.ಮೀ. ರಸ್ತೆ ಪ್ಯಾಚ್ ವರ್ಕಗೆ 8 ಲಕ್ಷ ರು. ಬಿಡುಗಡೆಯಾಗಿದ್ದು, ಲೋಕಸಭಾ ಸದಸ್ಯೆ ಕಳೆಪೆ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆದಾರ ಗಂಗಾಧರ ಅವರನ್ನು ಇಗ್ಗಾಮುಗ್ಗಾ ಝಾಡಿಸಿದರು.ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆಯುತ್ತಿದ್ದ ಕಾಮಗಾರಿ ವೀಕ್ಷೀಸಿದ ನಾಳೆ ಎಷ್ಟು ಅನುದಾನದ ಬಿಡುಗಡೆಯಾಗಿದೆ. ಗುತ್ತಿಗೆದಾರರು ಯಾರು ಎಲ್ಲಾ ವಿವರವನ್ನು ತೆಗೆದುಕೊಂಡು ಕಾಣಬೇಕು. ಸದ್ಯಕ್ಕೆ ಕಾಮಗಾರಿ ನಿಲ್ಲಿಸಬೇಕು ಎಂದು ಉಪ ಗುತ್ತಿಗೆದಾರರಿಗೆ ಆದೇಶಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
