ಹೊಸದುರ್ಗ
ಮುನ್ಸಿಪಾಲ್ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮನೆ-ಮನೆ ಕಸ ಸಂಗ್ರಹಣೆ, ವಿಂಗಡಣೆ, ವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ, ರಾಜ ಕಾಲುವೆಗೆ ಗ್ರಿಲ್ ಅಳವಡಿಸುವುದನ್ನು ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಹಸಿರು ನ್ಯಾಯ ಪೀಠದ ಅಧ್ಯಕ್ಷರಾದ ಸುಭಾಶ್ ಬಿ ಆಡಿ ರವರ ಸೂಚನೆ ಮೇರೆಗೆ ಡಿಸಿ ವಿನೋತ್ ಪ್ರಿಯಾ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಎಲ್ಲ ಕೆಲಸಗಳನ್ನು ನಿಗಧಿತ ಅವಧಿಯೊಳಗೆ ಅನುಷ್ಟಾನಗೊಳಿಸಿರುವುದು ಹಾಗೂ ನಿಷೇದಿತ ಪ್ಲಾಸ್ಟಿಕ್ ಬಳಕೆ ಬಗ್ಗೆ ಸಾರ್ವಜನಿಕರಿಗೆ ಮತ್ತು ವರ್ತಕರಿಗೆ ಅರಿವು ಮೂಡಿಸಿ ನಿಯಮ ಉಲ್ಲಂಘಿಸಿದವರ ವಿರುಧ್ಧ ದಂಡ ವಿಧಿಸಿರುವುದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದ್ದು ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿಗಳ ಕಾರ್ಯವೈಕರಿ ಕುರಿತು ಉತ್ತಮ ಪ್ರಶಂಸೆ ವ್ಯಕ್ತಪಡಿಸಿದರು.
ಮನೆ-ಮನೆ ಕಸ ಸಂಗ್ರಹಣೆಗಾಗಿ 6 ಆಟೋ ಟಿಪ್ಪರ್ ಗಳನ್ನು ನಿಯೋಜಿಸಲಾಗಿದೆ. ಪ್ರತ್ಯೇಕವಾಗಿ ಹಸಿ ಮತ್ತು ಒಣಕಸವನ್ನು ವಿಂಗಡಿಸಿ ನೀಡಲು ಹಸಿರು ಮತ್ತು ನೀಲಿ 2 ಡಸ್ಟ್ ಬಿನ್ ಗಳನ್ನು ನೀಡಲಾಗಿದ್ದು, ಪ್ರತಿನಿತ್ಯ ಚುನಾಯಿತ ಸದಸ್ಯರೊಂದಿಗೆ ವಾರ್ಡ್‍ಗಳಿಗೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಕಸವನ್ನು ಆಟೋ ಟಿಪ್ಪರ್ ಗೆ ನೀಡಿ ಪಟ್ಟಣದ ಸ್ವಚ್ಛತೆ ಕಾಪಾಡಲು ಸಹಕರಿಸುತ್ತಿರುವ ಬಗ್ಗೆ ಮುಖ್ಯಾಧಿಕಾರಿ ಮಾಹಿತಿ ನೀಡಿದರು.
ಕಳೆದ 2019 ನೇ ಸಾಲಿನಲ್ಲಿ ದೇಶದ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಪ್ರಶಸ್ತಿ ಪಡೆದಿದ್ದು ಈ ಬಾರಿ 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗವಹಿಸಿದ್ದು, ಜನವರಿ 4 ರಿಂದ ನೆಡೆಯುವ ಸಮೀಕ್ಷೆ ತಂಡಕ್ಕೆ ಎಲ್ಲಾ ಅಗತ್ಯ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ಮನೆ- ಮನೆ ಕಸ ಸಂಗ್ರಹಣೆಯನ್ನು ಕ್ಯೋ ಆರ್ ಕೋಡ್ ಸ್ಕ್ಯಾನಿಂಗ್ ಪದ್ದತಿಯನ್ನು ಸ್ಚಚ್ಛ ನಗರ ಆಪ್ ಮೂಲಕ ಪ್ರತಿ ಮನೆಗೆ ಬೇಟಿ ನೀಡಿ ಕಸ ಸಂಗ್ರಹಣೆಯನ್ನು ದಾಖಲಿಸಿದ್ದೇವೆ.
ಈ ಬಗ್ಗೆ ಕಳೆದ 15 ದಿನಗಳಿಂದ ಪ್ರತಿ ಮನೆಗೆ ಭೇಟಿ ನೀಡಿ 6578 ಮನೆಗಳ ಮಾಹಿತಿ ಸಂಗ್ರಹಿಸಿ ಆನ್ ಲೈನ್ ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು ಜನವರಿ 1 ರಿಂದ ಕಾರ್ಯಗತಗೊಳಿಸಲಾಗುವ ವಿಚಾರವನ್ನು ಪರಿಸರ ಅಭಿಯಂತರ ತಿಮ್ಮರಾಜು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಘನತ್ಯಾಜ್ಯ ಘಟಕದಲ್ಲಿ ಹಸಿ ಕಸದಿಂದ ಗೊಬ್ಬರ ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ಕಾಂಪೋಸ್ಟ್ ನ್ನು ನೀಡಲಾಗುತ್ತಿದ್ದು ಈವರೆಗೆ 1.00 ಲಕ್ಷ ಆದಾಯ ಹಾಗೂ ಒಣ ತ್ಯಾಜ್ಯದಿಂದ ಪುನರ್ ಬಳಕೆ ವಸ್ತುಗಳನ್ನು ಪ್ರತ್ಯೇಕಿಸಿ ಮಾರಾಟ ಮಾಡಿ ರೂ-1.5 ಲಕ್ಷ ಆಧಾಯವನ್ನು ಪುರಸಭೆಗೆ ಜಮ ಮಾಡಲಾಗಿದೆ. ಪ್ರತಿನಿತ್ಯ ಆಟೋ ಟಿಪ್ಪರ್ ಗಳ ಮೂಲಕ ಸ್ಯಾನಿಟರಿ ಹಾಗೂ ಅಪಾಯಕಾರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಡಬ್ಬದ ಮೂಲಕ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ ಹಾಗೂ ಪಟ್ಟಣದ ಚಾವರಾಜಪೇಟೆ, ರಾಣೋಜಿ ಹಳ್ಳಕ್ಕೆ ಚರಂಡಿ ನೀರಿನೊಂದಿಗೆ ಹರಿಯುವ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯವನ್ನು ತಡೆಯಿಡಿಯಲು ಮೆಶ್ ಸ್ರ್ಕಿನ್ ಅಳವಡಿಸಿರುವ ಅಂಶವನ್ನು ಆರೋಗ್ಯ ನಿರೀಕ್ಷಕ ಕರೀಂ ಉಲ್ಲಾ ವಿವರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ