ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮಳಿಗೆಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ

ಹಾವೇರಿ

        ಭಾರತ ಸರ್ಕಾರದ ಜವಳಿ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ, ಕಾವೇರಿ ಹ್ಯಾಂಡಲೂಮ್ಸ್ ಸಹಯೋಗದಲ್ಲಿ ಹಾವೇರಿ ನಗರದ ಗುರುಭವದಲ್ಲಿ ಆಯೋಜಿಸಿರುವ ಕೈಮಗ್ಗ ಉತ್ಪನ್ನ ಹಾಗೂ ಮಾರಾಟ ಮೇಳದ ಮಳಿಗೆಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಭೇಟಿ ನೀಡಿ ಪರಿಶೀಲಿಸಿದರು.

        ಬುಧವಾರ ಸಂಜೆ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ವಿವಿಧ ಕೈಮಗ್ಗ ಮತ್ತು ಖಾದಿ ಉತ್ಪನ್ನಗಳ ಕುರಿತಂತೆ ಗ್ರಾಹಕರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಮುಂಚಿತವಾಗಿ ಪ್ರದರ್ಶನ ಏರ್ಪಡಿಸಿರುವುದು ತುಂಗಾ ಅನುಕೂಲಕರವಾಗಿದೆ. ಉತ್ಪನ್ನಗಳು ಗುಣಮಟ್ಟದಿಂದ ಕೂಡಿದ್ದು ಶೇ.20ರಷ್ಟು ರಿಯಾಯಿತಿಯಲ್ಲಿ ಮಾರಾಟ ಮಾಡುವುದರಿಂದ ರೇಷ್ಮೆ ಸೇರಿದಂತೆ ವಿವಿಧ ವಸ್ತ್ರಗಳನ್ನು ಖರೀದಿಸಲು ಅನುಕೂಲವಾಗಿದೆ. ಇದೇ ರೀತಿ ಪ್ರತಿ ವರ್ಷ ಮೇಳವನ್ನು ಆಯೋಜಿಸಿದರೆ ಕೈಮಗ್ಗ ವಸ್ತ್ರ ಪ್ರಿಯರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

        ಮೇಳದಲ್ಲಿ ಪ್ರದರ್ಶನ ಮಾಡಿರುವ ರಾಜ್ಯ ಮತ್ತು ಹೊರ ರಾಜ್ಯದಿಂದ ಬಂದಿರುವ ಮಾರಾಟಗಾರರು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ, ವ್ಯಾಪಾರವು ಆಗುತ್ತಿದೆ ಎಂದು ಸಂತಸ ಹಂಚಿಕೊಂಡರು.

        ಕೈಮಗ್ಗ ಮತ್ತು ಜವಳಿ ಇಲಾಖೆಯ ಹಾವೇರಿ ಕಚೇರಿಯ ಉಪನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಅಕ್ಟೋಬರ್ 20ರವರೆಗೆ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಮಾಡಲಾಗಿದೆ. ಒಟ್ಟು 40 ಮಳಿಗೆಗಳು ಇಲ್ಲಿ ಸ್ಥಾಪಿತವಾಗಿವೆ. ಕನಿಷ್ಠ 50 ಸಾವಿರ ಜನರು ಕಳೆದ 12ನೇ ತಾರೀಖಿನಿಂದ ಈವರೆಗೆ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ. 10 ಲಕ್ಷ ರೂ. ಹೆಚ್ಚು ವಹಿವಾಟು ನಡೆದಿದೆ. ಇಳಕಲ್ ಮತ್ತು ಮೊಳಕಲ್ಮೂರು ರೇಷ್ಮೆ ಸೀರೆ, ಉಣ್ಣೆ ಹಾಗೂ ಕೈಮಗ್ಗದ ಹೊದಿಕೆಗಳು, ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳು ಸೇರಿದಂತೆ ವಿವಿಧ ನಮೂನೆಯ ಉತ್ಪನ್ನು ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link