ಬೆಂಗಳೂರು
ಬರೋಬರಿ 150 ಸರಗಳವು ಮಾಡಿದ್ದ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಅಲಿಯಾಸ್ ಗಣಿಯ ಸಹಚರ ಶಿವರಾಜ್ ರುದ್ರಯ್ಯ ಹಿರೇಮಠ್ ಎಂಬಾತನನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ಕೆಂಗೇರಿ ಪೊಲೀಸರು 29 ಲಕ್ಷದ 11 ಸಾವಿರ ಮೌಲ್ಯ ಚಿನ್ನ-ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿಸಿರುವ ಗದಗ ಜಿಲ್ಲೆಯ ದೋಣಿ ಗ್ರಾಮದ ಶಿವರಾಜ್ ರುದ್ರಯ್ಯ ಹಿರೇಮಠ್ (29) ವಿಚಾರಣೆಯಲ್ಲಿ ಇಲ್ಲಿಯವರೆಗೆ ಮಾಡಿರುವ ಸುಮಾರು 70 ಅಪರಾಧ ಕೃತ್ಯಗಳನ್ನು ನಡೆಸಿರುವುದನ್ನು ಬಾಯ್ಬಿಟ್ಟಿದ್ದಾನೆ.
ಆರೋಪಿ ನೀಡಿದ ಮಾಹಿತಿ ಯಾಧರಿಸಿ ಗಣಿ ಹಾಗೂ ತಾನು ಕಳವು ಮಾಡಿದ ಚಿನ್ನ-ಬೆಳ್ಳಿ ಆಭರಣಗಳನ್ನು ಖರೀದಿಸುತ್ತಿದ್ದ ಗದಗ್‍ನ ಮಧುರೈ ಓಣಿಯ ಸುನಿಲ್ (24) ಹಾಗೂ ಅನಿಲ್ (22)ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ರವಿಚೆನ್ನಣ್ಣನವರ್ ತಿಳಿಸಿದ್ದಾರೆ.
ಬಂಧಿತ ಆರೋಪಿಯಿಂದ 29 ಲಕ್ಷ 11 ಸಾವಿರ ಮೌಲ್ಯದ 937 ಗ್ರಾಂ ತೂಕದ ಚಿನ್ನಾಭರಣಗಳು, ಎರಡೂವರೇ ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡು 12 ಸರ ಅಪಹರಣ, 9 ಕನ್ನಗಳವು, 2 ಮನೆಗಳವು ಸೇರಿ 12 ಪ್ರಕರಣಗಳು ಸೇರಿ ಒಟ್ಟಾರೆ 75 ಪ್ರಕರಣಗಳಲ್ಲಿ ಆರೋಪಿಯು ಭಾಗಿಯಾಗಿರುವುದನ್ನು ಪತ್ತೆ ಹಚ್ಚಲಾಗಿದೆ
ಕುಖ್ಯಾತ ಸರಗಳ್ಳ ಗಣಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ ವೇಳೆ ತಲೆಮರೆಸಿಕೊಂಡು ಪರಾರಿಯಾಗಿದ್ದ ಆತನ ಸಹಚರ ಶಿವರಾಜ್ ಹಿರೇಮಠ್ ಬಂಧನಕ್ಕೆ ಕೆಂಗೇರಿ ಪೊಲೀಸ್ ಇನ್ಸ್‍ಪೆಕ್ಟರ್ ರಾಮಪ್ಪ ಬಿ. ಗುತ್ತೇರ್ ಅವರ ನೇತೃತ್ವದ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತಂಡವು ಹಗಲಿರುಳು ಕಾರ್ಯಾಚರಣೆ ನಡೆಸಿ ಗದಗದಲ್ಲಿ ಅಡಗಿದ್ದ ಹಿರೇಮಠ್‍ನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
