ವಿದ್ಯಾ ಪ್ರಗತಿ ಮೇಳದ ಲೋಗೋ ಅನಾವರಣ

ತುಮಕೂರು:


ಪ್ರಜಾಪ್ರಗತಿ ಹಾಗೂ ಪ್ರಗತಿ ಟಿವಿಯಿಂದ ಆ್ಯಡ್ 6 ಸಂಸ್ಥೆ ಸಹಯೋಗದಲ್ಲಿ ಇದೇ ಮಾ. 5-6ರಂದು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವಿದ್ಯಾ ಪ್ರಗತಿ ಶೈಕ್ಷಣಿಕ ಮೇಳದ ಲೋಗೋವನ್ನು ಗುರುವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಅನಾವರಣಗೊಳಿಸಿದರು.

ಕಾಲೇಜು ಮೈದಾನದಲ್ಲಿ ಮೇಳದ ಸ್ಥಳ ಪರಿಶೀಲಿಸಿ ಶುಭ ಹಾರೈಸಿದ ಸಚಿವರು ಶೈಕ್ಷಣಿಕ ಜಿಲ್ಲೆಯೆಂದು ಹೆಸರು ಗಳಿಸಿರುವ ತುಮಕೂರು ಜಿಲ್ಲೆಯಲ್ಲಿ ಇಂತಹದೊಂದು ಮಹತ್ವದ ಶೈಕ್ಷಣಿಕ ಮೇಳವನ್ನು ಪ್ರಜಾಪ್ರಗತಿ ದಿನಪತ್ರಿಕೆ ಹಾಗೂ ಪ್ರಗತಿ ಟಿವಿ ಸಂಘಟಿಸಿರುವುದು ಖುಷಿ ತಂದಿದೆ.

ಮೇಳವೂ ಸರ್ವ ರೀತಿಯಲ್ಲೂ ಯಶಸ್ವಿಯಾಗಲಿ, ವಿದ್ಯಾರ್ಥಿಗಳು ಪೆÇೀಷಕರು ಸದ್ಬಳಕೆ ಮಾಡಿಕೊಳ್ಳಲಿ ಎಂದು ಹಾರೈಸಿದರು.
ಈ ವೇಳೆ ಶಾಸಕ ಜಿ. ಬಿ. ಜ್ಯೋತಿ ಗಣೇಶ್, ಎಂಎಲ್ಸಿ ಗಳಾದ ಚಿದಾನಂದ ಎಂ. ಗೌಡ, ಆರ್. ರಾಜೇಂದ್ರ, ಮೇಯರ್ ಬಿ. ಜಿ. ಕೃಷ್ಣಪ್ಪ, ಪ್ರಗತಿ ಟಿವಿ ಸಿಇಒ ಟಿ. ಎನ್. ಶಿಲ್ಪ ಶ್ರೀ, ಪಿಯು ಡಿಡಿ ಗಂಗಾಧರ್,

ಡಿಡಿಪಿಐ ಸಿ. ನಂಜಯ್ಯ, ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಪ್ರಾಂಶುಪಾಲೆ ಡಾ. ಲೀಲಾವತಿ, ಪ್ರಜಾಪ್ರಗತಿ ಹಿರಿಯ ವ್ಯವಸ್ಥಾಪಕ ಎಲ್. ಚಿಕ್ಕೀರಪ್ಪ, ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಚಂದ್ರಣ್ಣ, ಗೃಹ ಮಂಡಳಿ ನಿರ್ದೇಶಕ ಬ್ಯಾಟರಂಗೇಗೌಡ, ರಾಜ್ಯ ನಿಗಮದ ನಿರ್ದೇಶಕ ಟಿ.ಆರ್.ಸದಾಶಿವಯ್ಯ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ. ನಿ. ಪುರುಷೋತ್ತಮ್, ಟಿ.ಇ.ರಘುರಾಂ ಸೇರಿ ಹಲವರು ಹಾಜರಿ ದ್ದರು.

ದೇಶದ ಭಾವಿ ಪ್ರಜೆಗಳನ್ನು ನಿರ್ಮಾಣ ಮಾಡುವ ಸಂಸ್ಕಾರ ಕೇಂದ್ರಗಳು ಶಾಲಾ –ಕಾಲೇಜುಗಳು. ಶಿಕ್ಷಣದ ಬಗ್ಗೆ ಹೊಸ ಚಿಂತನೆ ನಿರ್ಮಾಣ ಮಾಡುವ ಕೆಲಸವನ್ನು ಮಾ.4-5ರಂದು ಶಿಕ್ಷಣ ಮೇಳ ಆಯೋಜಿಸುವ ಮೂಲಕ ಪ್ರಗತಿ ಟಿವಿ ಮತ್ತು ಪ್ರಜಾಪ್ರಗತಿ ಪತ್ರಿಕೆ ಮಾಡಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆ.

ಪತ್ರಿಕೆ ಹಾಗೂ ಟಿವಿ ತುಮಕೂರು ಜಿಲ್ಲೆಯಲ್ಲೇ ಪ್ರಭಾವಿ ಮಾಧ್ಯಮವಾಗಿ ಹೊರಹೊಮ್ಮಿದ್ದು, ಸಾಮಾಜಿಕ ಜವಾಬ್ದಾರಿಯ ಕಾರ್ಯಗಳನ್ನು ಸರಕಾರಕ್ಕೆ ಪೂರಕವಾಗಿ ಮಾಡುತ್ತಿರುವುದಕ್ಕೆ ಅಭಿನಂದಿಸುತ್ತೇನೆ.

-ಆರಗಜ್ಞಾನೇಂದ್ರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.

ಪ್ರಜಾಪ್ರಗತಿ ಪತ್ರಿಕೆ ಹಾಗೂ ಪ್ರಗತಿ ಟಿವಿ ತುಮಕೂರಿನಲ್ಲಿ ಪ್ರಥಮವೆನ್ನಬಹುದಾದ ಶಿಕ್ಷಣ ಮೇಳವನ್ನು ಆಯೋಜಿಸುವ ಮೂಲಕ ಶೈಕ್ಷಣಿಕ ಜಿಲ್ಲೆಯ ಮೆರುಗು ಹೆಚ್ಚಿಸಲು ಮುಂದಾಗಿದೆ. ಶನಿವಾರ ಭಾನುವಾರದ ಶೈಕ್ಷಣಿಕ ಮೇಳ ವಿಶೇಷವಾಗಿ ಎಸ್ಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದ್ದು, ಮಕ್ಕಳು ಪೋಷಕರೊಂದಿಗೆ ಆಗಮಿಸಿ ಮೇಳದ ಪ್ರಯೋಜನ ಪಡೆಯಬೇಕು.

-ಆರ್.ರಾಜೇಂದ್ರ. ವಿಧಾನಪರಿಷತ್ ಸದಸ್ಯ.

 

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap