ವನ್ಯ ಜೀವಿಗಳನ್ನು ರಕ್ಷಿಸಿ : ಎ.ಸಿ.ಬಿಗೆ ದೂರು

ತಿಪಟೂರು :

         ಕೈದಾಲ, ಕನ್ನುಘಟ್ಟ, ನಾಗರಘಟ್ಟ ಇನ್ನು ಮುಂತಾದ ಕೆರೆಗಳು ಹೇಮಾವತಿ ನಾಲೆಯ ನೀರಿನಿಂದ ತುಂಬಿರುವುದು ಒಂದು ಕಡೆ ರೈತರಿಗೆ ಖುಷಿನೀಡಿದೆ. ಆದರೆ ಇದನ್ನೇ ಬಳಸಿಕೊಂಡು ವನ್ಯಜೀಗಿಗಳನ್ನು ಭೇಟೆಯಾಡುತ್ತಿದ್ದರು ಅರಣ್ಯ ಇಲಾಖೆಯವರು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲವೆಂದು ಇಂದು ಜಿ.ಮಲ್ಲೇನಹಳ್ಳಿಯ ಶ್ರೀನಿವಾಸ ಮೂರ್ತಿ ಎ.ಡಿ.ಬಿಗೆ ದೂರು ನೀಡಿದರು

       ಕೆರೆಗಳು ತುಂಬಿರುವುದರಿಂದ ರಾತ್ರಿಹೊತ್ತು ನೀರನ್ನರಸಿ ಬರುವ ಪ್ರಾಣಿಗಳನ್ನು ಕೆಲವು ಕಿಡಿಗೇಡಿಗಳು ಅವುಗಳನ್ನು ಹೊಂಚುಹಾಕಿ ಗುಂಡಿಟ್ಟುಕೊಲ್ಲುತ್ತಿದ್ದು ಇದರ ಬಗ್ಗೆ ನಾವು ಸಾಕಷ್ಟು ಬಾರಿ ದೂರು ನೀಡಿದರು ಅರಣ್ಯ ಇಲಾಖೆಯವರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ಎ.ಸಿ.ಬಿ ಸಭೆಯಲ್ಲಿ ಎ.ಸಿ.ಬಿ ಡಿ.ವೈ.ಎಸ್ಪಿ ರಘುಕುಮಾರ್‍ಗೆ ದೂರನ್ನು ನೀಡಿದರು.

        ಈ-ಸ್ವತ್ತು ಮಾಡಲು ಸತಾಯಿಸುತ್ತಿದ್ದಾರೆ : ನೊಣವಿನಕೆರೆ ಹೋಬಳಿ, ಗುಂಗರಮಳೆ ಗ್ರಾಮ ಪಂಚಾಯಿತಿಯ ಅಂನಂತಾಚಾರ್ಯರಿಗೆ ಸೇರಿದ ಸ್ವತ್ತನ್ನು ಸೂಕ್ತ ದಾಖಲೆಗಳನ್ನು ಸಲ್ಲಿಸಿದರು ಪಿ.ಡಿ.ಓ ಇಲ್ಲಸಲ್ಲದ ಕಾರಣಗಳನ್ನು ಹೇಳಿ ಸರಿಯಾದ ರೀತಿಯಲ್ಲಿ ಈ ಸ್ವತ್ತನ್ನು ಮಾಡಿಕೊಡುತ್ತಿಲ್ಲವೆಂದು ಯೋಗಾನಂದ ಬಿನ್ ಅನಂತಾಚಾರ್ಯ ಎ.ಸಿ.ಬಿ. ಗೆ ದೂರನ್ನು ಸಲ್ಲಿಸಿದ್ದು ಇದರ ಬಗ್ಗೆ ತಾ.ಪಂನ ಇ.ಓ ರವರನ್ನು ವಿಚಾರಿಸಿದಾಗ ಅವರು ಇಲ್ಲದೇ ಇದ್ದಿದನ್ನು ಕಂಡು ಡಿ.ವೈ.ಎಸ್ಪಿ ಈ ವಿಷಯದ ಸೂಕ್ತವಾದ ಕ್ರಮ ವಹಿಸುವುದೆಂದು ತಾ.ಪಂ ಅಧಿಕಾರಿಗಳಿಗೆ ಸೂಚಿಸಿದರು.

        ಕಿರುನೀರು ಸರಬರಾಜು ಇಲಾಖೆಯಲ್ಲಿ ಕಳಪೆ ಕಾಮಗಾರಿ : ಸರ್ಕಾರದ ಹಣವನ್ನು ದುರುಪಯೋಗ ಮಾಡಿ ಸರಿಯಾಗಿ ಕಾಮಗಾರಿಯನ್ನು ಪೂರ್ಣಗೊಳಿದೆ ಸುಮಾರು 3 ಕೋಟಿ ಹಣವನ್ನು ನೀರಿಗೆ ಚೆಲ್ಲಿದಂತಾಗಿದೆ ಎಂದು ಕೆರೆಗೋಡಿಯ ಪರಮಶಿವಯ್ಯ ಮತ್ತು ಯೋಗಾನಂದಮೂರ್ತಿ ದೂರುಸಲ್ಲಿಸಿದರು. ಇದರ ಬಗ್ಗೆ ನಾವು ಈಗಾಗಲೇ ತಾ.ಪಂ ಮತ್ತು ಹೇಮಾವತಿ ಇಲಾಖೆಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು ಕೆರೆಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಆದ್ದರಿಂದ ತಾವು ಸೂಕ್ತ ಕ್ರಮವಹಿಸಿ ಆಗಿರುವ ಕಳಪೆಕಾಮಗಾರಿಯನ್ನು ಸರಿಪಡಿಸುವಂತೆ ದೂರು ನೀಡಿದರು.

       ಎ.ಸಿ.ಬಿಯ ಪೋಸರ್‍ಗಳನ್ನು ಕಡ್ಡಾಯವಾಗಿ ಹಾಕಲೂ ಸೂಚನೆ : ಕೆಲವು ಸರ್ಕಾರಿ ಕಛೇರಿಗಳಲ್ಲಿ ಸೂಚಿಸಿದರು ಇನು ಕೆಲವು ಕಛೇರಿಗಳಲ್ಲಿ ಹಾಕಿಲ್ಲದಿರುವುದನ್ನು ತಿಳಿದು ಸೂಕ್ತವಾಗಿ ಜನರಿಗೆ ಕಾಣುವಂತೆ ಪೋಸ್ಟರ್‍ಗಳನ್ನು ಹಾಕಬೇಕೆಂದು ತಾಕೀತು ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link