ಪ್ರಧಾನಿ ಅಣಕು ಶವಯಾತ್ರೆ

ಹಾನಗಲ್ಲ :

         ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಗಾಗಿ ನಡೆದ ಅಹೋರಾತ್ರಿ ಧರಣಿ ಸತ್ಯಾಗ್ರಹ ಹಾನಗಲ್ಲ ತಹಶೀಲ್ದಾರ ಕಛೇರಿ ಎದರು ಮುಂದುವರೆದಿದ್ದು, ಬುಧವಾರ ಬೆಳಗಾವಿಯಲ್ಲಿ ನಡೆದಿರುವ ಅದಿವೇಶನದಲ್ಲಿ ಹಾನಗಲ್ಲಿನ ರೈತರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಲು ಅವಕಾಶ ನೀಡಲಾಗಿದೆ.

         ಮಂಗಳವಾರ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಬಾಳಂಬೀಡ ಏತ ನೀರಾವರಿಗಾಗಿ ಬಿಗಿ ಪಟ್ಟು ಹಿಡಿದಿದ್ದು, ಸರಕಾರಗಳು ಸುಳ್ಳು ಭರವಸೆ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿವೆ. ರೈತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಯೋಜನೆ ಘೋಷಣೆಯಾಗುವವರೆಗೆ ಧರಣಿ ನಿಲ್ಲದು ಎಂದು ರೈತ ಸಂಘ ಪಟ್ಟು ಹಿಡಿದಿದೆ.

           ಬುಧವಾರ ಹಾನಗಲ್ಲಿನಿಂದ 25 ರೈತ ಮುಖಂಡಿರಿಗೆ ಬಾಳಂಬೀಡ ಏತ ನೀರಾವರಿ ಯೋಜನೆ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಕರೆ ನೀಡಿದ್ದು, ಹಾನಗಲ್ಲ ತಹಶೀಲ್ದಾರರು, ಕೃಷಿ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳನ್ನೂ ಒಳಗೊಂಡು ರೈತ ಮುಖಂಡರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದಾರೆ. ಆದರೆ ಧರಣಿ ಮಾತ್ರ ಯೋಜನೆ ಘೋಷಣೆವರೆಗೆ ನಿರಂತರವಾಗಿರಲಿದೆ ಎಂದು ರೈತ ಸಂಘ ತಿಳಿಸಿದೆ.

          ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಹಾನಗಲ್ಲ ತಾಲೂಕಿನ ರೈತರಿಗೆ ಬಾಳಂಬೀಡ ಏತ ನೀರಾವರಿ ಜೀವನದಿಯಾಗಬಲ್ಲದು. ಈವರೆಗೆ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಇದರಲ್ಲಿ ಯಾರೂ ರಾಜಕೀಯ ಬೇರೆಸಬಾರದು. ಹಾನಗಲ್ಲ ತಾಲೂಕಿನ ಉತ್ತರ ಭಾಗದಲ್ಲಿರುವ ನೀರಾವರಿ ಕರೆ ತುಂಬಿದರೆ ರೈತರ ಬದುಕಿನಲ್ಲಿ ಹರ್ಷ ತುಂಬಿದಂತೆ. ಆದರೆ ಈವರೆಗೆ ಯಾವುದೇ ರಾಜಕೀಯ ಪಕ್ಷಗಳು ಈ ಯೋಜನೆಗೆ ಕಟಿಬದ್ಧರಾಗಿ ಪ್ರಯತ್ನ ನಡೆಸದೇ ಇರುವುದು ರೈತರಲ್ಲಿರುವ ದೌರ್ಬಲ್ಯದ ದುರುಪಯೋಗವಾಗಿದೆ. ಈಗಲಾದರೂ ರೈತರು ಎಚ್ಚೆತ್ತುಕೊಳ್ಳೋಣ. ನಾವು ಗೆಲ್ಲುವವರೆಗೆ ಹೋರಾಟಕ್ಕೆ ಸಿದ್ಧ ಎಂದರು.

           ಉತ್ತರ ಕರ್ನಾಟಕ ಪ್ರತ್ಯೇಕ ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ನ್ಯಾಯವಾದಿ ಎಸ್.ಎಂ.ಕೋತಂಬ್ರಿ ಮಾತನಾಡಿ, ಮುಖ್ಯಮಂತ್ರಗಳೊಂದಿಗೆ ಬುಧವಾರ ನಡೆಯುವ ಮಾತುಕತೆ ಬಾಳಂಬೀಡ ಏತ ನೀರಾವರಿ ಯೋಜನೆಗೆ ಹಣ ಬಿಡುಡೆ ಮಾಡುವುದೇ ಮೊದಲ ಒತ್ತಾಯವಾಗಿದೆ. ಸಬೂಬುಗಳನ್ನು ಹೇಳಿ ಹೋರಾಟವನ್ನು ಮೊಟಕುಗೊಳಿಸುವ ಪ್ರಯತ್ನ ನಡೆದರೆ ಅದಕ್ಕೆ ಮಣಿಯುವುದಿಲ್ಲ. ಮೆಲ್ನೋಟಕ್ಕೆ ತಿಳಿಯುವಂತೆ ಬಾಳಂಬಿಡ ಏತ ನೀರಾವರಿ ಹಲವು ದಶಕಗಳ ಹಿಂದೆಯೇ ಜಾರಿಗೆ ಬರಬೇಕಾಗಿತ್ತು. ಈಗಲೂ ಇದಕ್ಕೆ ಮೀನಮೇಷ ಎಣಿಸುತ್ತಿರುವುದು ರೈತರನ್ನು ಸಮಸ್ಯೆಗೆ ಸಿಲುಕಿಸುವ ಯತ್ನವಾಗಿದೆ. ಜನಪ್ರತಿನಿಧಿಗಳು ರೈತರಾಗಿದ್ದಾಗಲೂ ಇಂಥ ಕಟಿಬದ್ಧತೆ ಇರದೇ ಹೋದುದು ವಿಷಾದದ ಸಂಗತಿ. ಈಗಲಾದರೂ ಹಾನಗಲ್ಲ ತಾಲೂಕಿನ ಎಲ್ಲ ಜಿಪಂ, ತಾಪಂ ಸೇರಿದಂತೆ ಜನಪ್ರತಿನಿಧಿಗಳು ಆತ್ಮಸಾಕ್ಷಿಯಿಂದ ಈ ಹೋರಾಟಕ್ಕೆ ಬೆಂಬಲವಾಗಿ ನಿಂತು, ರೈತರು ಮತ ನೀಡಿ ಆಯ್ಕೆ ಮಾಡಿದ್ದಕ್ಕೆ ನ್ಯಾಯ ಕೊಡಿ ಎಂದರು.

           ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ಈರಪ್ಪ ಬೈಲವಾಳ, ಮಹಲಿಂಗಪ್ಪ ಅಕ್ಕಿವಳ್ಳಿ, ರಾಜು ದಾನಪ್ಪನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ಸುರೇಶ ಚಲವಾದಿ, ಶ್ರೀಕಾಂತ ದುಂಡಣ್ಣನವರ, ಎಂ.ಎಂ.ಬಡಗಿ, ಎ.ಎಂ.ಮುಲ್ಲಾ, ರವಿ ಚಿಕ್ಕೇರಿ, ಮಲ್ಲನಗೌಡ ಪಾಟೀಲ ಸೇರಿದಂತೆ ಮುಖ್ಯಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.

 ಅಣುಕು ಯಾತ್ರೆ :
   

        ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಣಕು ಶವಯಾತ್ರಿಯನ್ನು ರೈತರು ಮಾಡಿ, ತಹಶೀಲ್ದಾರ ಕಛೇರಿ ಎದುರು ಪ್ರತಿಕೃತಿ ದಹನ ಮಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಾಳಂಬೀಡ ಏತ ನೀರಾವರಿಗೆ ನಿರ್ಲಕ್ಷ ಧೋರಣೆ ತೋರಿರುವುದನ್ನು ಘೋಷಣೆಗಳ ಮೂಲಕ ಪ್ರತಿಭಟಿಸಿದರು.

ಹಲಗೆ ಭಾರಿಸಿದರು ;

       ಬೆಳಗಿನಿಂದಲೇ ರೈತರು ಹಲಗೆ ಬಾರಿಸುತ್ತ ತಮ್ಮ ವೇದನೆಗಳನ್ನು ವ್ಯಕ್ತ ಮಾಡಿದರು. ಇನ್ನೂ ಕೆಲವು ರೈತರು ಭಜನೆ ಮಾಡಿ ಭಗವಂತ ಸರಕಾರಕ್ಕೆ ಬುದ್ಧಿ ಕೊಡು ಎಂದು ಪ್ರಾರ್ಥಿಸಿದರು. ಇಡೀ ದಿನ ತಾಲೂಕು ಕಛೇರಿ ಎದುರಿನ ರಸ್ತೆ ಬಂದ ಮಾಡಲಾಗಿದ್ದು, ಓಡಾಟಕ್ಕೆ ಸಂಚಾರಕರು ಬೇರೆ ದಾರಿಯನ್ನು ಬಳಿಸಿಕೊಳ್ಳುವಂತಾಯಿತು.

ರಾತ್ರಿ ವಾಸ :

          ಅಹೋರಾತ್ರಿ ಧರಣಿಯಾಗಿರುವುದರಿಂದ ರೈತರು ಟೆಂಟನಲ್ಲಿಯೇ ಮಲಗಿದ್ದರು. ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದಾರೆ. ಪೊಲೀಸ ಸಿಬ್ಬಂದಿ ಧರಣಿ ನಿರತರಿಗೆ ರಕ್ಷಣೆ ಒದಗಿಸಿದೆ.

ಬೆಂಬಲ :

         ರೈತರ ಧರಣಿಗೆ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಬೆಂಬಲಿಸಿ ಬಾಳಂಬೀಡ ಏತ ನೀರಾವರಿ ಯೋಜನೆ ಜಾರಿಗೆ ಸಂಪೂರ್ಣವಾಗಿ ಕಾಂಗ್ರೇಸ್ ಹಿರಿ ಕಿರಿಯ ನಾಯಕರನ್ನೊಳಗೊಂಡು ಪ್ರಾಮಾಣಿಕ ಪ್ರಯತ್ನ ಮಡುವುದಾಗಿ ಪ್ರಕಟಿಸಿದರು. ಅಕ್ಕಿಆಲೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪುಟ್ಟಪ್ಪ ನರೇಗಲ್ಲ, ಹಾನಗಲ್ಲ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಎಸ್.ಪಾಟೀಲ, ಕಿಸಾನ್ ಘಟಕದ ಅಧ್ಯಕ್ಷ ಯಾಸಿರಖಾನ ಪಠಾಣ, ಹಾಸಂಪೀರ ಇನಾಮದಾರ, ರವಿ ಚಿಕ್ಕೇರಿ, ಮಂಜು ನೀಲಗುಂದ, ಸುರೇಶ ದೊಡ್ಡಕುರುಬರ ಸೇರಿದಂತೆ ನಾಯಕರು ಹೋರಾಟಕ್ಕೆ ಬೆಂಬಲಿಸಿದ್ದಾರೆ.

ಕಾರ್ಮಿಕ ಸಂಘಟನೆ ಬೆಂಬಲ :

         ಕಾರ್ಮಿಕ ಸಂಘಟನೆಯ ಮುಖಂಡ ನ್ಯಾಯವಾದಿ ವಿನಾಯಕ ಕುರುಬರ ಬಾಳಂಬೀಡ ಏತ ನೀರಾವರಿ ಯೋಜನೆ ಯಶಸ್ಸಿನ ಹೋರಾಟಕ್ಕ ಕಾರ್ಮಿಕ ಮುಖಂಡರೊಂದಿಗೆ ಬೆಂಬಲಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link