ರಕ್ತ ಚಂದನ ಮಾರಟ: ಖತರ್ನಾಕ್ ಅಪ್ಪ-ಮಗನನ್ನು ಬಂಧನ

ಬೆಂಗಳೂರು

       ಕಳವು ಮಾಡಿದ ಶ್ರೀಗಂಧ ಹಾಗೂ ರಕ್ತಚಂದನ ಮರದ ತುಂಡುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ 200 ಹೆಚ್ಚು ಮಂದಿ ಶಸ್ತ್ರ ಸಜ್ಜಿತ ಪೊಲೀಸರು ಮಿಲಟರಿ ಶೈಲಿಯಲ್ಲಿ ದಾಳಿ ನಡೆಸಿ ಖತರ್ನಾಕ್ ಅಪ್ಪ-ಮಗನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

        ಹೊಸಕೋಟೆಯ ಕಟ್ಟಿಗೇನಹಳ್ಳಿಯ ಸೈಯದ್ ರಿಯಾಜ್ (49) ಮತ್ತವನ ಪುತ್ರ ಸೈಯದ್ ಶೇರ್ ಅಲಿ ಅಲಿಯಾಸ್ ಬಾಬಾ (28)ನನ್ನು ಕೇಂದ್ರ ಹಾಗೂ ವೈಟ್‍ಫೀಲ್ಡ್ ವಿಭಾಗದ 200 ಮಂದಿ ಪೊಳೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

        ಬಂಧಿತ ಆರೋಪಿಗಳಿಂದ 35 ಲಕ್ಷ ನಗದು, 350 ಗ್ರಾಂ ಚಿನ್ನಾಭರಣ, 9 ಕೆಜಿ ಗಂಧದ ಮರದ ತುಂಡುಗಳು, 4 ಕಾರುಗಳು, 12 ಕಾರುಗಳ ನಂಬರ್ ಪ್ಲೇಟ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿಗಳ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ಕೋಕಾ ಕಾಯ್ದೆ ದಾಖಲಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

       ಸ್ಯಾಂಕಿ ರಸ್ತೆಯ ಸೆವೆನ್ ಮಿನಿಸ್ಟರ್ ಕ್ವಾಟ್ರಸ್, ಮುಖ್ಯನ್ಯಾಯಾಧೀಶರ ಮನೆಯ ಆವರಣ, ಬಿಷಪ್ ಕಾಟನ್ ಶಾಲೆ ಆವರಣದಲ್ಲಿ ಗಂಧದ ಮರ ಕಳವು ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಿ,ತನಿಖೆ ಕೈಗೊಂಡಾಗ ಕಳವು ಮಾಡಿದ ಗಂಧದ ಮರಗಳನ್ನು ಕಟ್ಟಿಗೇನಹಳ್ಳಿಯಲ್ಲಿ ಮಾರಾಟ ಮಾಡುತ್ತಿದ್ದ ಮಾಹಿತಿಯನ್ನು ನೀಡಿದರು.

ವ್ಯವಸ್ಥಿತ ಜಾಲ

       ಮಾಹಿತಿಯಾಧರಿಸಿ ತನಿಖೆ ಕೈಗೊಂಡ ಕೇಂದ್ರ ವಿಭಾಗದ ಪೊಲೀಸರಿಗೆ ಮನೆಯೊಂದರಲ್ಲಿ ಅಪ್ಪ-ಮಗ ಸೇರಿ ಗಂಧದ ಮರ ಹಾಗು ರಕ್ತ ಚಂದನ ಮರದ ತುಂಡುಗಳನ್ನು ಖರೀದಿಸಿ ಮಾರಾಟ ಮಾಡುವ ಸುಳಿವು ದೊರೆಯಿತು ವ್ಯವಸ್ಥಿತ ಜಾಲ ಮಾಡಿಕೊಂಡು ಅಕ್ರಮ ವಹಿವಾಟು ನಡೆಸುತ್ತಿದ್ದ ಅಪ್ಪ-ಮಗನನ್ನು ಬಂಧಿಸುವುದು ಸವಾಲಾಗಿರುವುದು ಕಂಡುಬಂತು.

      ತನಿಖೆಯಲ್ಲಿ ಕಟ್ಟಿಗೇನಹಳ್ಳಿ ಗ್ರಾಮದ ಈ ಇಬ್ಬರು ಆರೋಪಿಗಳು ಶ್ರೀಗಂಧ ಕಳ್ಳ ಸಾಗಾಣೆ ದಂಧೆಯಲ್ಲಿ ಕುಖ್ಯಾತಿ ಪಡೆದಿದ್ದು, ದಂಧೆಗೆ ಇಡೀ ಗ್ರಾಮವೇ ಸಾಥ್ ನೀಡುತ್ತಿತ್ತು. ಪೊಲೀಸರು ದಂಧೆಕೋರರ ಮೇಲೆ ದಾಳಿ ನಡೆಸಲು ಪ್ರಯತ್ನ ನಡೆಸಿದರೆ ಮಹಿಳೆಯರು, ಹೆಣ್ಣು ಮಕ್ಕಳನ್ನು ಮುಂದೇ ಬಿಟ್ಟು ಹೈಡ್ರಾಮಾ ಸೃಷ್ಟಿಸಿದ್ದರು.

         ಅಲ್ಲದೇ ಪೊಪಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಸ್ಥಳದಿಂದ ಪರಾರಿಯಾಗುತ್ತಿದ್ದರು ಕಳೆದ 5 ವರ್ಷಗಳಿಂದ ಇದೇ ದಂಧೆಯನ್ನು ನಡೆಸುತ್ತಿದ್ದ ಬಂಧಿತ ಖದೀಮರು ಅಂತರಾಷ್ಟ್ರೀಯ ಮಟ್ಟದಲ್ಲಿ ಶ್ರೀಗಂಧ ಕಳ್ಳಸಾಗಾಣೆ ಮಾಡುತ್ತಿದ್ದರು. ಅಲ್ಲದೇ ಯಾರೇ ಶ್ರೀ ಗಂಧ ಕಳ್ಳತನ ಮಾಡಿದ್ದರು ಇಲ್ಲಿಂದಲೇ ಮಾರಾಟವಾಗುತ್ತಿತ್ತು. ಈ ಗ್ಯಾಂಗ್ ಶ್ರೀಗಂಧ ಕಳ್ಳತನ ಮಾಡಲು ಪ್ರೇರಣೆ ನೀಡಿ ಸಹಾಯ ಮಾಡುತ್ತಿದ್ದರು.

            ಕಳ್ಳತನ ಮಾಡಲು ತಮಿಳುನಾಡಿನ ಇಳಯರಾಜ ಎಂಬ ಗ್ಯಾಂಗ್ ಕರೆಯಿಸಿ ಡೀಲ್ ಮಾಡುತ್ತಿದ್ದರು. ಸರ್ಕಾರಿ ಕಚೇರಿಯ ಬಳಿ ಇರುತ್ತಿದ್ದ ಮರಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ 2010 ರಿಂದ ಕೃತ್ಯದಲ್ಲಿ ತೊಡಗಿರುವುದು ಪತ್ತೆಯಾಯಿತು.ಇದನ್ನು ಗಂಭೀರವಾಗಿ ಪರಿಗಣಿಸಿ ವ್ಯವಸ್ಥಿತ ಕಾರ್ಯಾಚರಣೆ ನಡೆಸಲು ಮುಂದಾದ ಕೇಂದ್ರ ವಿಭಾಗದ ಪೊಲೀಸರು ವೈಟ್‍ಫೀಲ್ಡ್ ವಿಭಾಗದ ಪೊಲೀಸರ ನೆರವಿನೊಂದಿಗೆ ಸುಮಾರು 200 ಮಂದಿ ಸಿಬ್ಬಂದಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೌಲಭ್ಯಗಳೊಂದಿಗೆ ಕಟ್ಟಿಗೇನಹಳ್ಳಿಯಲ್ಲಿ ಮುಂಜಾನೆ 3ರ ವೇಳೆ ದಾಳಿ ನಡೆಸಿದರು.

            ಗ್ರಾಮದ ಇತರ ಮನೆಗಳ ಬಳಿ ಪೊಲೀಸರನ್ನು ಹಠಾತ್ ನಿಯೋಜಿಸಿ ಮನೆಯಲ್ಲಿ ಮಲಗಿದ್ದ ಅಪ್ಪ-ಮಗನನ್ನು ಬಂಧಿಸಲಾಯಿತು ಮನೆಯಲ್ಲಿ ಮುಂಜಾನೆ 5ರವರೆಗೆ ನಡೆದ ಶೋಧದಲ್ಲಿ 35 ಲಕ್ಷ ನಗದು, 350 ಗ್ರಾಂ ಚಿನ್ನಾಭರಣ, 9 ಕೆಜಿ ಗಂಧದ ಮರದ ತುಂಡುಗಳು, 4 ಕಾರುಗಳು, 12 ಕಾರುಗಳ ನಂಬರ್ ಪ್ಲೇಟ್‍ಗಳು ಖಾಲಿ ಚೆಕ್‍ಗಳು ಪುಸ್ತಕಗಳು ಪತ್ತೆಯಾಗಿವೆ ಎಂದು ದೇವರಾಜ್ ತಿಳಿಸಿದರು.

         ಆರೋಪಿಗಳು ಬಹುತೇಕ ಮನೆಯಲ್ಲಯೇ ಉಳಿದುಕೊಳ್ಳುತ್ತಿದ್ದು ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲ ಗ್ರಾಮದಿಂದ ಹೊರ ಹೋಗುತ್ತಿದ್ದದ್ದು ಕೂಡ ಕಡಿಮೆ  ಸೈಯದ್ ರಿಯಾಜ್ ಪತ್ನಿ ಶಿವಾಜಿನಗರಕ್ಕೆ ಚಿನ್ನಾಭರಣ ಖರೀದಿಸಲು ಬರುತ್ತಿದ್ದರು ಕೇವಲ 300ರೂ ಗಳಿಗೆ 1 ಕೆಜಿ ಗಂಧದ ಮರದ ತುಂಡುಗಳನ್ನು ಖರೀದಿಸುತ್ತಿದ್ದ ಆರೋಪಿಗಳು 10 ಸಾವಿರದವರೆಗೆ 1 ಕೆಜಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದರು.

          ಮರ ಕಳವಿಗೆ ಕೈಹಾಕದ ಆರೋಪಿಗಳು ಕಳವು ಮಾಡಲು ಹಳೆಯ ವಾಹನಗಳನ್ನು ಕೊಡುತ್ತಿದ್ದರು ಅದರಲ್ಲೂ ಪೋರ್ಡ್ ಐಕಾನ್ ಕಾರನ್ನು ಹೆಚ್ಚಾಗಿ ಬಳಸುತ್ತಿದ್ದು ಅವರ ಬಳಿಯೇ ಕಾರು ರಿಪೇರಿ ಮಾಡುವ ಗ್ಯಾರೇಜ್ ಇತ್ತು ಶೇಖರಿಸಿದ ಗಂಧದ ಮರದ ತುಂಡುಗಳನ್ನು ಹೆಚ್ಚು ದಿನ ಇರಿಸಿಕೊಳ್ಳದೇ ಅಲಂಕಾರಿಕ ವಸ್ತುಗಳನ್ನು ಮಾಡಲು, ಗಂಧದ ಎಣ್ಣೆ ತೆಗಯಲು ಮಾರಾಟ ಮಾಡುವ ಜಾಲ ರಚಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ.

ಮೊದಲಿಗೆ ಬಂಧನ

        ಆರೋಪಿಗಳು ಪೊಲೀಸರು ದಾಳಿ ನಡೆಸಲು ಬಂದಾಗ ಕಲ್ಲು ತೂರಾಟ ನಡೆಸಿ ತಪ್ಪಿಸಿಕೊಳ್ಳುತ್ತಿದ್ದು,ಗ್ರಾಂದ ಕೆಲವರು ಬೆಂಬಲಕ್ಕೆ ನಿಲ್ಲುತ್ತಿದ್ದರು ಹತ್ತಿಪ್ಪತ್ತು ಮಂದಿ ಪೊಲೀಸರು ಅವರನ್ನು ಬಂಧಿಸುವುದು ಆಸಾಧ್ಯವೆನಿಸಿದಾಗ ಹೆಚ್ಚಿನ ಪೊಲೀಸರೊಂದಿಗೆ ದಾಳಿ ನಡೆಸಲಾಯಿತು ಇಲ್ಲಿಯವರೆಗೆ ಒಂದು ಬಾರಿಯು ಅಪ್ಪ-ಮಗನನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ ಎಂದರು.

       ಆರೋಪಿಗಳು ಗಂಧದ ಮರಗಳನ್ನು ಕಳವು ಮಾಡುವ ಕೃತ್ಯಕ್ಕಿಳಿಯುತ್ತಿರಲಿಲ್ಲ. ಬದಲಾಗಿ ಕಳವು ಮಾಡಿದ ಮರದ ತುಂಡುಗಳನ್ನು ಖರೀದಿಸುತ್ತಿದ್ದರು. ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶದಿಂದ ರಕ್ತ ಚಂದನ ಮರದ ತುಂಡುಗಳನ್ನು ಖರೀದಿಸಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಹೇಳಿದರು.

          ಆರೋಪಿಗಳಿಗೆ ಅರ್ಧ ಲೈಫ್ ಕಂಪನಿಯಿಂದ ಕರೆ ಮಾಡಿ 500 ಕೆಜಿ ರಕ್ತಚಂದನದ ಮರಕ್ಕೆ ಬೇಡಿಕೆ ನೀಡಿರುವ ಮಾತುಕತೆ ನಡೆದಿರುವುದು ದಾಖಲೆಗಳ ಜಪ್ತಿಯಲ್ಲಿ ಕಂಡುಬಂದಿದ್ದು ಕಂಪನಿಯವರಿಗೆ ನೋಟೀಸ್ ಜಾರಿ ಮಾಡಿ ಮಾಹಿತಿ ಪಡೆದುಕೊಳ್ಳಲಾಗುವುದು ಇಷ್ಟೊಂದು ಪ್ರಮಾಣದ ರಕ್ತ ಚಂದನಕ್ಕೆ ಯಾವ ಉದ್ದೇಶ ಕೇಳಿದ್ದರು ಎನ್ನುವುದರ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಪ್ಪ-ಮಗನ ಖರೀದಿ ಜಾಲದಲ್ಲಿ ತೊಡಗಿರುವವರ ಮಾಹಿತಿ ಪಡೆಯಲಾಗುತ್ತಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಇವರ ಬಂಧನದಿಂದ ಶ್ರೀಗಂಧ ಮರಕಳವು ಖರೀದಿ ಬಯಲಾಗಿದೆ ಆರೋಪಿಗಳ ಬಳಿ ದೊರೆತಿರುವ ದಾಖಲಾತಿಗಳಲ್ಲಿ ಗಂಧದ ಮರದ ತುಂಡುಗಳನ್ನು ಖರೀದಿಸಿ ಮಾರಾಟ ಮಾಡಿರುವವರ ವಿವರ ದೊರೆತಿದ್ದು ಆಬಗ್ಗೆಯೂ ತನಿಖೆ ಕೈಗೊಳ್ಳಲಾಗಿದೆ ಎಂದರು.

ಕಳ್ಳತನಕ್ಕೆ ಸಹಾಯ

          ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಶ್ರೀಗಂಧ ಕಳ್ಳತನ ನಡೆಸುತ್ತಿರುವ ಈ ಆರೋಪಿಗಳು ಸುಮಾರು ವಾಹನಗಳ ನಂಬರ್ ಪ್ಲೇಟ್ ಹೊಂದಿದ್ದರು. ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಕಳ್ಳತನ ಮಾಡಲು ವ್ಯಕ್ತಿಗಳನ್ನು ಕರೆಸುತ್ತಿದ್ದರು. ಕಳ್ಳತನ ಮಾಡುವ ವೇಳೆ ಓಎಲ್‍ಎಕ್ಸ್ ತಾಣದಲ್ಲಿ ಮಾರಾಟ ಮಾಡುತ್ತಿದ್ದ ವಾಹನ ನಂಬರ್ ಗಳನ್ನು ನಮೂದಿಸಿ ವಾಹನ ನೀಡುತ್ತಿದ್ದು ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ (ಕೋಕಾ) ಕಾಯ್ದೆಯಲ್ಲಿ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

          ಅಲ್ಲದೇ ಶ್ರೀಗಂಧ ಕಳ್ಳತನ ಮಾಡಿ ರಾಜ್ಯದ ವಿವಿಧ ಶ್ರೀಗಂಧ ಕಾರ್ಖಾನೆಗಳು ಮಾರಾಟ ಮಾಡುತ್ತಿದ್ದ ಬಗ್ಗೆ ಡೈರಿ ಕೂಡ ಲಭ್ಯವಾಗಿದ್ದು, ಯಾರಿಗೆ, ಎಷ್ಟು ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆದ್ದರಿಂದ ಶ್ರೀಗಂಧ ಖರೀದಿ ಮಾಡುತ್ತಿದ್ದ ಕಂಪೆನಿಯ ಮಾಲೀಕರನ್ನು ಕೋಕಾ ಕಾಯ್ದೆಯಲ್ಲಿ ತರಲು ಕ್ರಮಕೈಗೊಳ್ಳಲಾಗುವುದು.

         ಇತ್ತೀಚೆಗೆ ಅರ್ಧ ಲೈಫ್ ಎಂಬ ಕಂಪೆನಿ ಅರ್ಧ ಟನ್ ರಕ್ತ ಚಂದನಕ್ಕೆ ಈ ಗ್ಯಾಂಗಿಗೆ ಭೇಟಿಗೆ ಇಟ್ಟಿತ್ತು. ಈ ಮಾಲ್ ಸಿದ್ಧಪಡಿಸಲು ಆರೋಪಿಗಳು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ತಮಿಳುನಾಡಿನ ಇಳಯರಾಜ್ ಗ್ಯಾಂಗ್ ಬಂಧನ ಆಗಿದೆ. ಅವರಿಂದ ಪಡೆದ ಮಾಹಿತಿ ಮೇರೆಗೆ ನ್ಯಾಯಾಲಯ ಹಾಗೂ ಉನ್ನತ ಅಧಿಕಾರಿಗಳ ಅನುಮತಿ ಪಡೆದು ಕಾರ್ಯಾಚರಣೆ ನಡೆಸಲಾಗಿದೆ

           ಈಗಾಗಲೇ ಈ ದಂಧೆಯಲ್ಲಿ ತೊಡಗಿದ್ದ ಮತ್ತೊಂದು ಗ್ಯಾಂಗನ್ನು ಬಂಧಿಸಲಾಗಿದೆ. ಇದರಲ್ಲಿ ಮತ್ತೊಬ್ಬ ಆರೋಪಿ ಬಂಧನ ಬಾಕಿ ಇದೆ.ಮುಂದಿನ ಹಂತದ ಕಾರ್ಯಾಚರಣೆಯಲ್ಲಿ ಎಲ್ಲರ ಬಂಧನ ಮಾಡಲಾಗುತ್ತದೆ. ಗ್ಯಾಂಗ್ ಬಂಧನದಿಂದ ರಾಜ್ಯದಲ್ಲಿ ನಡೆದ ಹಲವು ಶ್ರೀಗಂಧ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಮುಖ್ಯವಾಗಿ ಬಂಧಿತ ಇಬ್ಬರು ಆರೋಪಿಗಳು ಈ ಹಿಂದೆ ಒಮ್ಮೆ ಮಾತ್ರ ಬಂಧನವಾಗಿದ್ದರು. ಆ ಬಳಿಕ ಇವರು ಪೆÇಲೀಸರ ಕೈಗೆ ಸಿಕ್ಕಿರಲಿಲ್ಲ ಎಂದು ದೇವರಾಜ್ ತಿಳಿಸಿದ್ದಾರೆ

ಮಿಲಟರಿ ರೀತಿ ಕಾರ್ಯಾಚರಣೆ

          ಕೆಲ ಪ್ರಕರಣಗಳಲ್ಲಿ ಇವರ ವಿರುದ್ಧ ದೂರು ದಾಖಲಿಸಿ ಬಂಧನ ಮಾಡಲು ತೆರಳಿದ ಪೊಲೀಸರ ಮೇಲೆ ಊರಿನ ಗ್ರಾಮಸ್ಥರು ಕಲ್ಲು ತೂರಾಟ ನಡೆಸುತ್ತಿದ್ದರು. ಆದ್ದರಿಂದ ಕಳೆದ 3 ವರ್ಷಗಳಿಂದ ಈ ಗ್ರಾಮಕ್ಕೆ ಪೊಲೀಸರು ಹೋಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ಪೊಲೀಸರು ಸುಮಾರು 200 ಅಧಿಕಾರಿ ಸಿಬ್ಬಂದಿ, 3 ಕೆಎಸ್‍ಆರ್‍ಪಿ ವಾಹನ ಸೇರಿ ಇಡೀ ಗ್ರಾಮವನ್ನೇ ಸುತ್ತುವರೆದು ದಾಳಿ ನಡೆಸಿದ್ದರು. ತಡರಾತ್ರಿ 2 ಗಂಟೆ ಅವಧಿಯಲ್ಲಿ ದಾಳಿ ನಡೆಸಿದ್ದು, 3 ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಇಬ್ಬರು ಆರೋಪಿಗಳ ಬಂಧನ ಮಾಡಲು ಅವರ ಮನವೊಲಿಕೆ ಮಾಡಲು ಪೊಲೀಸರು ಯತ್ನಿಸಿದ್ದರು. ಆದರೆ ಆರೋಪಿಗಳು ಒಪ್ಪದ ಕಾರಣ ಮನೆ ಬಾಗಿಲು ಮುರಿದು ಕಾರ್ಯಾಚರಣೆ ನಡೆಸಲಾಗಿದೆ

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link