ಮಹಿಳೆಯರಿಗೆ ಉಚಿತ ಬಸ್ ಮತ್ತು ಮೆಟ್ರೊ ಪ್ರಯಾಣ..!!

ನವದೆಹಲಿ:

   ದೆಹಲಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲೆಂದು ಸರ್ಕಾರ ತಂದಿರುವ ಮೆಟ್ರೊ ಮತ್ತು ಸಾರ್ವಜನಿಕ ಸಾರಿಗೆಗಳಲ್ಲಿ ಿದುವರೆಗೂ ಎಲ್ಲರೂ ಟಿಕೆಟ್ ಪಡೆದು ಓಡಾಡಬೇಕಿತ್ತು ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇನ್ನುಮುಂದೆ ಮಹಿಳೆಯರು ಮೆಟ್ರೋ ಮತ್ತು ಡಿಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

   ಉಚಿತ ಪ್ರಯಾಣ ಮತ್ತು ಸುರಕ್ಷಿತ ಪ್ರಯಾಣದ ಅನುಭವ ಪಡೆಯಬಹುದಾಗಿದೆ.ಇಷ್ಟು ದಿನ ಸಾರಿಗೆ ಬಸ್ ಗಳ ಭಾರೀ ದರದಿಂದಾಗಿ ಯಾರಿಗೆ ಪ್ರಯಾಣಿಸಲು ಸಾಧ್ಯವಿಲ್ಲವೋ ಅಂತಹವರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

      ಉಚಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಬಸ್ ಗಳಲ್ಲಿ ಉಚಿತ ಪ್ರಯಾಣ ತುಂಬಾ ದೊಡ್ಡ ಹೊರೆಯಾಗಲಾರದು. ಆದರೆ ಮೆಟ್ರೋ ರೈಲುಗಳಲ್ಲಿ ಉಚಿತ ಎಂಬುದು ದೊಡ್ಡ ಸಮಸ್ಯೆಯಾಗಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

      ಎರಡು, ಮೂರು ತಿಂಗಳಲ್ಲಿ ಈ ಯೋಜನೆಯನ್ನು ಅನುಷ್ಠಾಗೊಳಿಸಲಾಗುವುದು. ಉಚಿತ ಪ್ರಯಾಣ ಹೇಗೆ ಮತ್ತು ಯಾವಾಗ ಎಂಬ ಬಗ್ಗೆ ಡಿಟಿಸಿ ಮತ್ತು ಮೆಟ್ರೋ ರೈಲುಗಳ ವಿವರಗಳನ್ನು ನೀಡಲು ಅಧಿಕಾರಿಗಳಿಗೆ ಒಂದು ವಾರ ಸಮಯ ನೀಡಿರುವುದಾಗಿ ಕೇಜ್ರಿವಾಲ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ