ಮಧುಗಿರಿ:ಕರ್ನಾಟಕ ಬ್ಯಾಂಕ್‌ ತಹಸೀಲ್ದಾರ್‌ ನೋಟೀಸ್‌…..!

ಮಧುಗಿರಿ :

    ಪಟ್ಟಣದ ಹೈಸ್ಕೂಲ್ ರಸ್ತೆಯ ಸಮೀಪವಿರುವ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜ ವನ್ನು ಹಾರಿಸದೆ ಇರುವುದರ ಬಗ್ಗೆ ಶಾಖಾ ವ್ಯವಸ್ಥಾಪಕರಿಗೆ ತಹಸೀಲ್ದಾರ್ ಸಿಗಬತ್ ವುಲ್ಲಾ ಕಾರಣ ಕೇಳಿ ನೋಟಿಸ್ ಬುಧವಾರ ಜಾರಿ ಮಾಡಿದ್ದಾರೆ.

    ಮಧುಗಿರಿ ಪಟ್ಟಣದಲ್ಲಿ ಜ.26ರಂದು ಗಣರಾಜ್ಯೋತ್ಸವ ಅಂಗವಾಗಿ ಎಲ್ಲಾ ಕಛೇರಿಗಳಲ್ಲಿ , ಶಾಲಾ ಕಾಲೇಜುಗಳಲ್ಲಿ , ಸಂಘ-ಸಂಸ್ಥೆಗಳಲ್ಲಿ ದ್ವಜಾರೋಹಣೆ ಮಾಡಬೇಕಾಗಿದ್ದು ಅಂದೂ ನಿಮ್ಮ ಶಾಖೆಯಲ್ಲಿ ಧ್ವಜಾರೋಹಣಾ ಮಾಡಿರುವುದಿಲ್ಲವೆಂದು ಜಿ.ನಾರಾಯಣರಾಜು ರವರು ರಾಷ್ಟ್ರ ದ್ವಜವನ್ನು ಹಾರಿಸದೇ ಅವಮಾನ ಮಾಡಿರುತ್ತಾರೆಂದು ದೂರು ಅರ್ಜಿಯನ್ನು ಸಲ್ಲಿಸಿರುವುದರಿಂದ
ತಮ್ಮ ಮೇಲೆ ಏಕೆ ಭಾರತೀಯ ದಂಡ ಸಂಹಿತೆ ಅಧಿನಿಯಮದಡಿಯಲ್ಲಿ ಕ್ರಮ ಕೈಗೊಳ್ಳಬಾರದೆಂದು ತಿಳಿಸಿ ಈ ಪತ್ರ ತಲುಪಿದ 24 ಗಂಟೆಗಳೊಳಗಾಗಿ ತಮ್ಮ ಲಿಖಿತ ಸಮಜಾಯಿಷಿಯನ್ನು ಈ ಕಛೇರಿಗೆ ಖುದ್ದು ಹಾಜರಾಗಿ ನೀಡುವಂತೆ ತಹಸೀಲ್ದಾರ್ ಸೂಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap