ರೈತರ ಸಾಲಮನ್ನಾ, ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಜಾರಿಗೆ ದೆಹಲಿ ಚಲೋ

ಹೊಸಪೇಟೆ:

     ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ü ಹಾಗೂ ಡಾ.ಸ್ವಾಮಿನಾಥನ್ ವರದಿ ಜಾರಿಗಾಗಿ ಆಗ್ರಹಿಸಿ, ನ.30 ರಂದು ದೆಹಲಿ ಚಲೋ ಪಾರ್ಲಿಮೆಂಟ್‍ಗೆ ಮುತ್ತಿಗೆ ಹಾಗೂ ರೈತರ ಸಾಲಮನ್ನಾಕ್ಕಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನ. 12ರಂದು ಬೆಂಗಳೂರು ಚಲೋ ವಿಧಾನಸಭೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ಜಿಲ್ಲಾಧ್ಯಕ್ಷ ಗೋಣಿಬಸಪ್ಪ ಹೇಳಿದರು.

       ನಗರದ ಕುರುಬ ಸಮಾಜದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಎಲ್ಲಾ ಕೃಷಿ ಸಾಲ, ಟ್ರ್ಯಾಕ್ಟರ್ ಸಾಲ, ಎತ್ತು ಬಂಡಿ ಸಾಲ, ಹೈನುಗಾರಿಕೆ ಸಾಲ, ಮಹಿಳಾ ಸಂಘಗಳ ಸಾಲ ಹಾಗೂ ಪಹಿಣಿ ಹೊಂದಿದ ಎಲ್ಲಾ ರೈತರ ಸಾಲಮನ್ನಾ ಮಾಡಬೇಕು. ಬಗರ್ ಹುಕಂ ಹಾಗೂ ಸರ್ಕಾರಿ ಭೂಮಿಗಳಲ್ಲಿ ಸಾಗುವಳಿ ಮಾಡುವವ ಸಾಗುವಳಿದಾರರಿಗೆ ಪಟ್ಟಾ ವಿತರಣೆ. ಜಿಲ್ಲೆಯ ಎಲ್ಲಾ ಕೆರೆ ಸಂರಕ್ಷಣೆ ಮಾಡುವ ಮೂಲಕ ಒತ್ತುವರಿ ತಡೆದು ತಡೆಗೋಡೆ ನಿರ್ಮಾಣ ಮಾಡಬೇಕು. ಬಳ್ಳಾರಿಯನ್ನು ಬರಗಾಲ ಜಿಲ್ಲೆಯೆಂದು ಘೋಷಣೆ ಮಾಡಿ ಪ್ರತಿ ಎಕರೆಗೆ 20ಸಾವಿರ ಪರಿಹಾರ ನೀಡಬೇಕು.ಜಿಲ್ಲೆಯ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು. ಪ್ರತಿ ಟನ್ ಕಬ್ಬಿಗೆ 3200 ರೂ ನಿಗಧಿಗೊಳಿಸುವುದು ಸೇರಿ ಇತರೆ ಬೇಡಿಕೆಗಳಿಗಾಗಿ ಆಗ್ರಹಿಸಿ ನ.12ರಂದು ವಿಧಾನ ಸೌದ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದರು.

        ಅಖಿಲ ಭಾರತ ಕೃಷಿ ಸಂಘರ್ಷ ಸಂಘಟನೆಗಳು ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತರ ಸಂಪೂರ್ಣ ಸಾಲ ಮನ್ನಕ್ಕಾಗಿ, ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಮತ್ತು ಕಾನೂನಾತ್ಮಕ ಜಾರಿಗಾಗಿ ಈಗಾಗಲೇ ಮಂಡಿಸಿರುವ 2 ಖಾಸಿಗಿ ಮಸೂದೆಗಳನ್ನು ಅಂಗೀಕರಿಸಬೇಕು. 17 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಅವುಗಳಿಗೆ ಈ ಕೂಡಲೇ ಎಲ್ಲಾ ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ತೆರೆಯಬೇಕು. ತುಂಗಭದ್ರಾ ಜಲಾಶಯ ಹೂಳೆತ್ತುವುದು. ನದಿ ಜೋಡಣೆ ಸಮಾನಂತರ ಜಲಾಶಯ ನಿರ್ಮಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ನೂರಾರು ರೈತರು, ನ.30 ದೆಹಲಿ ಚಲೋ ಪಾರ್ಲಿಮೆಂಟ್ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

         ಮುಖಂಡರಾದ ಕೃಷ್ಣ ಸಂಗನಕಲ್ಲು, ಪಿ.ಕುಮಾರ ಸ್ವಾಮಿ, ಗಂಗಾ ಧರ ವಾಡಕರ್, ಬಿ.ಎಂ.ಉಜ್ಜಿನಪ್ಪ, ಕೆ.ಡಿ.ನಾಯ್ಕ, ಬಿ.ಯು.ಎರ್ರಿಸ್ವಾಮಿ, ಹೊನ್ನೂರು ಸಾಬ್,ಎಂ.ಈಶ್ವರಪ್ಪ ಕಮ್ಮರಚೇಡು, ಎಸ್.ಭಾಷಾಸಾಬ್, ಕೆ.ಕೃಷ್ಣ, ಪಕ್ಕಿರಪ್ಪ, ವೀರಭದ್ರ, ವಿ.ಎಸ್.ಭೀಮನಾಯ್ಕ ಹಾಗೂ ಗಂಟೆ ಸೋಮಶೇಖರ ಸೇರಿದಂತೆ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap