ನಿಯಂತ್ರಣ ತಪ್ಪಿದ ಡೆಮೋ ಕಾರ್ : ಓರ್ವ ಸಾವು

ಬೆಂಗಳೂರು:
 
      ನಗರದ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಸ್ಟೇಷನ್ ಮಿತಿಯಲ್ಲಿ  ಐಷಾರಾಮಿ ಕಾರು ಟೆಸ್ಟ್‌ ಡೈವ್‌ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿರವ ಪ್ರಸಂಗ ನಡೆದಿದ್ದು  ಘಟನೆಯಲ್ಲಿ ಓರ್ವ ಮೃತಪಟ್ಟಿರುವುದು ವರದಿಯಾಗಿದೆ.
       ಮಗು ಸೇರಿದಂತೆ ಮೂವರು ಗಂಭೀರವಾಗಿ ಗಾಯವಾಗಿದ್ದು ಘಟನೆ ಮಂಗಳವಾರ ನಡೆದಿದ್ದು.ಇಂದು ಮಧ್ಯಾಹ್ನ ನಾಯಂಡಹಳ್ಳಿಯ ನೈಸ್‌ ರಸ್ತೆ ಬಳಿ ಅಪಘಾತ ಸಂಭವಿಸಿದೆ.
 
       ಗೌತಮ್‌ ಎನ್ನುವವರು ಟೆಸ್ಟ್‌ ಡ್ರೈವ್‌ಗೆಂದು ಬಂದಿದ್ದರು, ಅವರೊಂದಿಗೆ ಅವರ ಅಣ್ಣ, ಅತ್ತಿಗೆ ಮತ್ತು ಮಗು ಬಂದಿದ್ದರು. ಕಾರು ಟೆಸ್ಟ್ ಡ್ರೈವ್‌ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದ್ದು, ಗೌತಮ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗೌತಮ್ ಸಹೋದರ, ಅತ್ತಿಗೆ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದು ,ಕಾರಿನಲ್ಲಿದ್ದ ಕಂಪೆನಿಯ ಸಿಬ್ಬಂದಿ ಕಾರಿನಿಂದ ಹಾರಿ ಪ್ರಾಣಪಾಯಾದಿಂದ ಪಾರಾಗಿದ್ದಾರೆ.ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link