ಡೆಂಗ್ಯೂ ವಿರೋಧಿ ದಿನಾಚರಣೆ ಕಾರ್ಯಕ್ರಮ

ಹರಪನಹಳ್ಳಿ:

      ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಿ, ಡೆಂಗ್ಯೂ ಜ್ವರ ಭಯ ಬಿಡಿ ಎಂದು ಆಡಳಿತ ವೈಧ್ಯಾಧಿಕಾರಿ ಜಡಿಸುಮಾ ಹೇಳಿದರು .ತಾಲೂಕಿನ ಅಲಗಿಲವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

      ಈಡಿಸ್ ಈಜೀಪ್ಟ್ ಎಂಬ ಸೋಂಕಿತಗೊಂಡ ಸೊಳ್ಳೆ ಕಚ್ಚುವಿಕೆಯಿಂದ ಡೆಂಗ್ಯೂ ಜ್ವರ ಬರುತ್ತದೆ ಈ ಸೊಳ್ಳೆ ಆರೋಗ್ಯ ವ್ಯಕ್ತಿಯನ್ನು ಕಚ್ಚುತ್ತಾ ಹೊಂದಂತೆ ರೋಗ ಹರಡುತ್ತಾ ಹೋಗುತ್ತದೆ ಇದರ ನಿಯಂತ್ರಣಕ್ಕೆ ಮನೆಯ ಸುತ್ತಲೂ ಸ್ವಚ್ಚತೆ, ನೀರಿನ ತೊಟ್ಟಿಗಳನ್ನು ಶುಚಿಗೊಳಿಸುವುದು, ಮಲಗುವಾಗ ಸೊಳ್ಳೆಪರದೆಯನ್ನು ಉಪಯೋಗಿಸಿದಲ್ಲಿ ಆರೋಗ್ಯ ಕಾಪಾಡಿಕೊಳ್ಳಬಹುದು ಈ ಡೆಂಗ್ಯೂ ಜ್ವರದಿಂದ ಮುಕ್ತರಾಗಬಹುದು ಎಂದರು.

        ಕಾರ್ಯಕ್ರಮವನ್ನು ತಾಪಂ ಸದಸ್ಯೆ ಮಂಜುಳಾ ಜಗದೀಶ್ ಉದ್ಘಾಟಿಸಿದರು.ಗ್ರಾಪಂ ಪಿಡಿಓ ಯಮುನಾನಾಯ್ಕ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತನಾಡಿದರು. ಗ್ರಾಪಂ ಸದಸ್ಯ ಶಿವಣ್ಣ, ಅಂಜಿನಪ್ಪ, ಆರೋಗ್ಯ ಸಹಾಯಕ ಪ್ರದೀಪ, ಆಶಾ, ಮತ್ತಿತರರು ಇದ್ದರು.ತೆಲಿಗಿ ಹೋಬಳಿಯಲ್ಲೂ ಡೆಂಗ್ಯೂ ವಿರೋಧಿ ದಿನಾಚರಣೆ: ತೆಲಿಗಿ ಹೋಬಳಿ ವ್ಯಾಪ್ತಿಯ ಕಡತಿ, ಅಲಗಿಲವಾಡ, ಹಲುವಾಗಲು, ತೆಲಿಗಿ ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.

      ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ ಮಾತನಾಡಿ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಮನೆಯ ಹಿಂದೆ ಮುಂದೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ವಾರಕ್ಕೆಒಂದು ಬಾರಿಯಾದರೂ ನೀರು ಸಂಗ್ರಹ ತೊಟ್ಟಿಗಳನ್ನು ಶುಚಿಗೊಳಿಸಿ, ಮುಚ್ಚಿಡುವಂತೆ ಸಲಹೆ ನೀಡಿದರು .ಯಾವುದೇ ವ್ಯಕ್ತಿಗೆ ರೋಗಗಳ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿ ಪ್ರಥಮ ಚಿಕಿತ್ಸೆ ಪಡೆಯಿರಿ ನಿರ್ಲಕ್ಷ್ಯ ವಹಿಸದೆ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.

     ಈ ಸಂದರ್ಭದಲ್ಲಿ ಡಾ.ವಿನುತಾ, ಗ್ರಾಪಂ ಸದಸ್ಯೆ ಹೂವಮ್ಮ, ಲಕ್ಕಪ್ಪ ಸುರೇಶ್‍ಬಾಬು, ಪವನಕುಮಾರ, ಶಿವರುದ್ರಪ್ಪ, ಪಾರ್ವತಮ್ಮ, ಲಲಿತಮ್ಮ, ಮಂಜುಳಾ, ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link