ಹಾವೇರಿ :
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ವತಿಯಿಂದ 2018ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಡಿಸೆಂಬರ್ 23 ರಿಂದ 25ರವರೆಗೆ ಮೂರು ದಿನಗಳ ಕಾಲ ಜರುಗಲಿದ್ದು, ಈ ಕ್ರೀಡಾಕೂಟವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ಬಲೂನ್‍ಗಳನ್ನು ಹಾಗೂ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಲಿದ್ದಾರೆ.
ನಂತರ ಮಾತನಾಡಿದ ನ್ಯಾಯಾಧೀಶರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಾಜದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ತಮ್ಮ 24 ಘಂಟೆಯ ಸಮಯವನ್ನು ಇಲಾಖೆಗೆ ಶ್ರಮವಹಿಸುತ್ತೀರಿ. ಎಲ್ಲ ಕಾರ್ಯನಿರ್ವಹಣೆಯನ್ನು ಮಾಡಬೇಕಾದರೆ ಆರೋಗ್ಯ ತುಂಬಾ ಮುಖ್ಯ. ಅದಕ್ಕಾಗಿ ಇಲಾಖೆ ವತಿಯಿಂದ ಡಿ 23ರಿಂದ 25 ರವರಿಗೆ ಮೂರು ದಿನಗಳ ಕಾಲ ಕ್ರೀಡಾಕೂಟ ಆಯೋಜನೆ ಬದುಕಿಗೆ ಉಪಯುಕ್ತವಾಗಲಿ.
ಕ್ರೀಡೆ ಕೇವಲ ಒಂದು ದಿನವಾಗಬಾರದು ಉತ್ತಮ ಆರೋಗ್ಯಕ್ಕೆ ಪ್ರತಿದಿನ ವ್ಯಾಯಾಮ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗಿ ಕ್ರೀಯಾಶೀಲ ಮನಸ್ಸಿಗೆ ಪೂರಕವಾಗಲಿ ಎಂದು ಸ್ಪೂರ್ತಿದಾಯಕ ಮಾತನಾಡಿದರು. ಕಮಾಂಡರರಿಂದ ಕ್ರೀಡಾಕೂಟದ ಸ್ಪರ್ಧಾಳುಗಳಿಗೆ ಪ್ರತಿಜ್ಞಾವಿಧಿ ಭೋದಿಸಲಾಯಿತು.
ಜಿಲ್ಲೆಯ ವಿವಿಧ ಠಾಣಾಗಳಲ್ಲಿ ಮುಖ್ಯ ಪ್ರಕರಣಗಳನ್ನು ಭೇದಿಸಿದ ಪೋಲಿಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಪ್ರೋತ್ಸಾಹಕವಾಗಿ ನಗದು ನೀಡಲಾಯಿತು. ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾದ ಸದಾನಂದಸ್ವಾಮಿ.ಹೆಚ್ಚುವರಿ ಎಸ್‍ಪಿ ಜಿ.ಎ ಜಗದೀಶ.ಡಿವಾಯ್‍ಎಸ್‍ಪಿ ಎಲ್ ಕುಮಾರಯ್ಯ. ಗೀರೀಶ ತುಪ್ಪದ.ಮಲ್ಲಿಕಾರ್ಜುನ ಸಾತೇನಹಳ್ಳಿ ಸೇರಿದಂತೆ ಪೋಲಿಸ್ ಅಧಿಕಾರಿಗಳು ಹಾಗೂ ಜಿಲ್ಲೆಯ ಕ್ರೀಡಾ ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ