ಬಳ್ಳಾರಿ
ಬಳ್ಳಾರಿ ಜಿಲ್ಲೆಯ ಗಡಿ ಭಾಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅದೋನಿ ತಪಾಲ ಉಪ ಪರಿವೇಕ್ಷಣಾ ಅಧಿಕಾರಿ ಸತ್ಯನಾರಾಯಣ(38) ಮೃತಪಟ್ಟಿದ್ದಾರೆ. ಬುದವಾರ ಮಧ್ಯಾಹ್ನ ಬಳ್ಳಾರಿ ಜಿಲ್ಲೆಯ ಗಡಿಭಾಗದಲ್ಲಿ ಈ ಅಪಘಾತ ನಡೆದಿದೆ. ಕೆಲಸದ ನಿರ್ವಹಣೆಯಲ್ಲಿ ಆದೋನಿ ಇಂದ ಕೌತಾಳಂಗೆ ಹೋಗುವ ಮಾರ್ಗಮಧ್ಯದಲ್ಲಿ ಅಪಘಾತ ನಡೆದಿದೆ. ಚಿಕಿತ್ಸೆಗೆ ಕರ್ನೂಲು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸತ್ಯನಾರಾಯಣ ಮೇದೇಹಾಳು ಗ್ರಾಮದ ನಿವಾಸಿಯಾಗಿದ್ದು, ಸತ್ಯನಾರಾಯಣ ಅವರಿಗೆ ತಂದೆ,ತಾಯಿ, ಪತ್ನಿ, ಸೇರಿದಂತೆ ಅಪಾರ ಬಂಧುಬಳಗ, ಸ್ನೇಹಿತರು,ಹಿತೈಷಿಗಳು ಇದ್ದಾರೆ.
ಸತ್ಯನಾರಾಯಣ ಮೃತಪಟ್ಟ ವಿಷಯವನ್ನು ತಿಳಿದ ಗ್ರಾಮಸ್ಥರಲ್ಲಿ ವಿಷಾದ ಛಾಯಗಳು ಮೂಡಿದೆ, ಮತ್ತು ಗ್ರಾಮಸ್ಥರು ಸತ್ಯನಾರಾಯಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಿದರು. ಗುರುವಾರ ಸಂಜೆಗೆ ಅಂತ್ಯಸಂಸ್ಕಾರ ನಡೆದಿದೆ. ರಸ್ತೆ ಅಪಘಾತಕ್ಕೆ ಸಂಬಂಧಿಸಿದ ಪ್ರದೇಶ ಆಂಧ್ರಪ್ರದೇಶ್ ರಾಜ್ಯದ ಕರ್ಮೂಲು ಜಿಲ್ಲೆಯ ಕೌತಾಳಂ ಠಾಣಾ ವ್ಯಾಪ್ತಿಗೆ ಸೇರಿದ್ದು, ಕೌತಾಳಂ ಪೋಲೀಸ್ ಸ್ಟೇಷನ್‍ಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ