ದೇಶ ಮೊದಲು ಎಂಬ ತತ್ವಕ್ಕೆ ಬೆಂಬಲ : ಸಿ ಎಂ ಉದಾಸಿ

ಹಾನಗಲ್ಲ :

     ಇಡೀ ಭಾರತದ ಹಾಗೂ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಈ ಚುನಾವಣೆಯಲ್ಲಿ ಜನತೆ ಯಾರಿಗೆ ಬೆಂಬಲ ನೀಡುತ್ತಾರೆಂಬ ನಿರೀಕ್ಷೆಯಿತ್ತು. ದೇಶ ಮೊದಲು ಎಂಬ ಭಾವನೆಗೆ ಈಗ ಸ್ಪಂದನೆ ದೊರೆತಿದೆ. ದೇಶಾದ್ಯಂತ 340 ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಮೋದಿಯವರ ಕೈ ಬಲ ಪಡಿಸಿದ್ದಾರೆ ಎಂದು ಶಾಸಕ ಸಿ.ಎಂ.ಉದಾಸಿ ಪ್ರತಿಕೃಯಿಸಿದರು.

      ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಹಾನಗಲ್ಲಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆ ಪ್ರಮಾಣದಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಸೇರಿದಂತೆ ಇತರ ಎಲ್ಲ ಪಕ್ಷಗಳನ್ನೂ ಧೂಳಿಪಟವಾಗಿಸಿದೆ. ಮತದಾರರು ಬಿಜೆಪಿ ಬಗೆಗೆ ಇಟ್ಟಿರುವ ವಿಶ್ವಾಸ ವ್ಯಕ್ತವಾಗಿದೆ.

       ಮಾತಿನಂತೆ ನಡೆದುಕೊಂಡ ನರೇಂದ್ರ ಮೋದಿ, ಕರ್ನಾಟಕದಲ್ಲಿ ಈ ಚುನಾವಣೆ ಇತಿಹಾಸ ಸೃಷ್ಟಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೂ, ಎಷ್ಟೇ ಅಪಪ್ರಚಾರ ಮಾಡಿದರೂ ತಮ್ಮವರನ್ನೇ ಗೆಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಜನತೆ ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದನ್ನು ತೋರಿಸಿದೆ.

      ಇಂದು ವರ್ಷದ ಸಮ್ಮಿಶ್ರ ಸರ್ಕಾರದ ಆಡಳಿತ ವೈಫಲ್ಯ, ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ಧರಾಮಯ್ಯ ಆಡಳಿತ ವೈಫಲ್ಯಗಳಿಗೆ ಜನತೆ ಸರಿಯಾದ ತೀರ್ಪು ನೀಡಿದ್ದಾರೆ. 24ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಸಂಸದರನ್ನು ರಾಜ್ಯದಲ್ಲಿ ಗೆಲ್ಲಿಸುವ ಮೂಲಕ ಹೆಮ್ಮೆಪಡುವಂತಾಗಿದೆ.

       ಹಾವೇರಿ-ಗದಗ ಜಿಲ್ಲೆಯಲ್ಲಿ ಸತತ ಮೂರನೇ ಬಾರಿಯೂ ಶಿವಕುಮಾರ ಉದಾಸಿ ಅವರನ್ನು ಹ್ಯಾಟ್ರಿಕ್ ಗೆಲುವು ಸಾಧಿಸಲು ಮತ ನೀಡಿ ಬೆಂಬಲಿಸಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರು, ಪೇಜ್ ಪ್ರಮುಖರು, ಪಕ್ಷದ ಕಾರ್ಯಕರ್ತರು ಎಲ್ಲರೂ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ. ಇವರ ಶ್ರಮ ಸಾರ್ಥಕವಾಗಿದೆ ಎಂದರು.

      ವಿರೋಧ ಪಕ್ಷದ ಅಭ್ಯರ್ಥಿ ಡಿ.ಆರ್.ಪಾಟೀಲ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಇನ್ನಾದರೂ ಮಾಡಲಿ ಎಂಬ ಉಪದೇಶ ಅವರ ಹತಾಶ ಭಾವನೆಯನ್ನು ತೋರುತ್ತದೆ. ರಾಜಕಾರಣದಲ್ಲಿರುವ ತಮ್ಮಂಥ ಹಿರಿಯರು ತಮ್ಮ ಹಿನ್ನೆಲೆಯನ್ನೂ ಪರಾಮರ್ಶಿಸಿಕೊಳ್ಳಬೇಕಿತ್ತು.

     ಬೇರೆಯವರ ಕುರಿತು ಟೀಕೆ ಮಾಡುವ ಸಂದರ್ಭದಲ್ಲಿ ನಿರಾಶ ಭಾವನೆಯಲ್ಲಿ ಇಂಥ ಮಾತುಗಳನ್ನು ಹೇಳಿದ್ದಾರೆಂದು ಭಾವಿಸಬೇಕಾಗಿದೆ ಎಂದರು. ಮುಂಬರುವ ಅವಧಿಯಲ್ಲಿ ಶಿವಕುಮಾರ ಉದಾಸಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಶಾಸಕ ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link